Recent Posts

Sunday, January 19, 2025
ಸುದ್ದಿ

Breaking News : ಪೋಲೀಸ್ ಇಲಾಖೆಗೆ ಗೋಕಳ್ಳರನ್ನು ಬಂಧಿಸಲು ತಾಕತ್ತಿಲ್ಲದೇ ಇದ್ದರೆ, ನಾವು ಗೋಕಳ್ಳರ ತಲೆ ಬೋಳಿಸಿ ನಾಯಿ ಮೇಲೆ ಮೆರವಣಿಗೆ ಮಾಡುತ್ತೇವೆ ; ಮುದ್ರಾಡಿ ಚಲೋದಲ್ಲಿ ಹಿಂ‌.ಜಾ.ವೇ. ಮುಖಂಡ ಗಣರಾಜ ಭಟ್ ಕೆದಿಲ ಹೇಳಿಕೆ – ಕಹಳೆ ನ್ಯೂಸ್

ಮುದ್ರಾಡಿ : ಗೊಕಳ್ಳತನ, ಗೋಹತ್ಯೆ , ಗೋ ಅಕ್ರಮ ಸಾಗಾಟ ವಿರೋದಿಸಿ ಹಿಂದೂ ಹಿತರಕ್ಷಣಾ ವೇದಿಕೆ ಆಯೋಜಿಸಿದ್ದ ಮುದ್ರಾಡಿ ಚಲೋ ಕಾರ್ಯಕ್ರಮದಲ್ಲಿ ಹಿಂದೂ ಜಾಗರಣ ವೇದಿಕೆ ಮುಖಂಡರಾದ ಬ ಗಣರಾಜ ಭಟ್ ಕೆದಿಲ ದಿಕ್ಸೂಚಿ ಭಾಷಣ ಮಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ನೇರವಾಗಿ ಪೋಲಿಸು ಇಲಾಖೆಯನ್ನೇ ತರಾಟೆಗೆ ತೆಗೆದುಕೊಂಡು ಮಾತನಾಡುತ್ತಾ ” ತಾಕತ್ತಿದ್ದರೆ ಐದು ದಿನದೊಳಗೆ ಗೋ ಕಳ್ಳರನ್ನು ಹಿಡಿಯಿರಿ, ಇಲ್ಲದಿದ್ದರೆ ಹಿಂದು ಸಂಘಟನೆಗೆ ಒಪ್ಪಿಸಿ ನಾವು ಕಳ್ಳರನ್ನು ಹಿಡಿದು ,ತಲೆ ಬೋಳಿಸಿ ನಾಯಿ ಮೇಲೆ ಮೆರವಣಿಗೆ ಮಾಡುತ್ತೇವೆ ಎಂದು ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸ್ಥಳೀಯ ಪಿ.ಎಸ್. ಐ‌. ಮಹಾಬಲ ಶೆಟ್ಟರ ಹೆಸರಿನಲ್ಲಿ ಬಲ ಇದ್ದರೆ ಸಾಲದು ತನ್ನ ಬಲವನ್ನು ಕಳ್ಳರನ್ನು ಹಿಡಿಯುವಲ್ಲಿ ತೋರಿಸಿ, ಮಹಾಬಲ ಶೆಟ್ಟರು ಮುದ್ರಾಡಿಯಲ್ಲಿ ಉಳಿಯಲು ಇಲ್ಲಿಯ ಜನತೆಯ ಹೋರಾಟವೇ ಕಾರಣ ಅದನ್ನು ನೆನಪಿಡಿ, ಬುಜದಲ್ಲಿ ಹೊತ್ತ ಸ್ಟಾರ್ ನ ಬೆಲೆ ಉಳಿಸಿ ಎಂದು ಕಿಡಿಕಾರಿದ ಭಟ್ಟರು. ಮಹಾಬಲ ಶೆಟ್ಟರು ಕುಡಿಯುವುದು ಹಸುವಿನ ಹಾಲನ್ನೇ ತಾನೆ? ಅವರು ಕಳ್ಳರನ್ನು ಹಿಡಿಯದಿದ್ದರೆ ಹಾಲುಣಿಸಿದ ತಾಯಿಗೆ ಮಾಡಿದ ಅನ್ಯಾಯ ಎಂದು ನುಡಿದರು.

ಮುದ್ರಾಡಿಯಲ್ಲಿ ಗೋಕಳ್ಳರಯ ಕೆಲವು ವರುಷಗಳ ಹಿಂದೆ ಪೋಲೀಸರ ಕೈ ಕಡಿದಾಗ ಆ ಕಳ್ಳರನ್ನು ಪೋಲೀಸರೆ ಎನ್ಕಂಟರ್ ಮಾಡಿದರು,ಅದೆ ದೋಗು ಪೂಜಾರಿಯವರ ಹಸು ಕದ್ದ ದುಷ್ಟರಿಗೆ ಯಾಕೆ ಪೋಲೀಸರ ಪಿಸ್ತೂಲು ಉತ್ತರ ಕೊಡುತ್ತಿಲ್ಲ ? ಎಂದು ಪ್ರಶ್ನಿಸಿದರು.

ಇಲ್ಲಿ ಗೋವನ್ನು ಸಾಗಿಸುವ ದಳಾಳಿಗಳು ಹಿಂದು ಧರ್ಮದವರೆಂಬ ಮಾಹಿತಿ ಇದೆ.
ಆದರೆ ಅವರು ದನ ತಿನ್ನುವವರ ಅಕ್ರಮ ಸಮ್ಮಂದದಿಂದ ಹುಟ್ಟಿದವರೆ ಆಗಿರ ಬಹುದು ಅಲ್ಲವಾದರೆ ಪೂಜಿಸಬೇಕಾದ ತಾಯಿಯನ್ನು ಕೊಲ್ಲಲು ಮನಮಾಡರು ಎಂದು ವ್ಯೆಂಗ್ಯವಾಡಿದರು.

ದಿಕ್ಸೂಚಿ ಮಾತಿನಿಂದ ಪೋಲೀಸು ಇಲಾಖೆ ಯನ್ನು ತಿವಿದದ್ದಲ್ಲದೆ ಗೋವಿನ ಮಹತ್ವವನ್ನು ಸಾರುತ್ತಾ ಗೋ ಕಳ್ಳರಿಗೆ ಎಚ್ಚರಿಕೆ ನೀಡಿದ್ದಾರೆ.