Sunday, January 19, 2025
ಕ್ರೀಡೆ

ಏಷ್ಯಾ ಕಪ್ ಹಾಕಿ | ಭಾರತ ತಂಡಕ್ಕೆ ರಾಣಿ ನಾಯಕಿ.

ನವದೆಹಲಿ(ಅ.17) : ಇದೇ ತಿಂಗಳು 28ರಿಂದ ಜಪಾನ್‌’ನ ಕಾಕಮಿಗಹಾರದಲ್ಲಿ ನಡೆಯಲಿರುವ ಏಷ್ಯಾಕಪ್ ಮಹಿಳಾ ಹಾಕಿ ಪಂದ್ಯಾವಳಿಗೆ ಭಾರತ ತಂಡ ಪ್ರಕಟಗೊಂಡಿದ್ದು, ರಾಣಿ ರಾಂಪಾಲ್ ಹೆಗಲಿಗೆ ನಾಯಕತ್ವದ ಜವಾಬ್ದಾರಿ ವಹಿಸಲಾಗಿದೆ.ಹಿರಿಯ ಗೋಲ್ ಕೀಪರ್ ಸವಿತಾ ಉಪನಾಯಕಿಯಾಗಿದ್ದಾರೆ.

ಯುರೋಪ್ ಪ್ರವಾಸ ಕೈಗೊಂಡಿದ್ದ ತಂಡದಲ್ಲಿ 5 ಬದಲಾವಣೆ ಮಾಡಲಾಗಿದ್ದು, ಅನುಭವಿ ಡಿಫೆಂಡರ್ ಸುಶಿಲಾ ಚಾನು ತಂಡಕ್ಕೆ ಮರಳಿದ್ದಾರೆ. ಪಂದ್ಯಾವಳಿಯಲ್ಲಿ ಗೆಲ್ಲುವ ತಂಡಕ್ಕೆ 2018ರ ವಿಶ್ವಕಪ್‌’ಗೆ ನೇರ ಅರ್ಹತೆ ಸಿಗಲಿದೆ.
ತಂಡ: ಸವಿತಾ, ರಜನಿ, ದೀಪ್ ಗ್ರೇಸ್, ಸುನಿತಾ, ಸುಶೀಲಾ, ಸುಮನ್, ಗುರ್ಜಿತ್, ನಿಕ್ಕಿ,ನಮಿತಾ,ಮೋನಿಕಾ,ಲಿಲಿಮಾ,ನೇಹಾ,ರಾಣಿ, ವಂದನಾ,ಸೋನಿಕಾ, ನವ್‌ನೀತ್,ನವ್ಜೋತ್.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು

Leave a Response