Sunday, January 19, 2025
ಸುದ್ದಿ

ಖಾಸಗೀ ವೆಬ್‍ಸೈಟ್ನಲ್ಲಿ ಕುಕ್ಕೆ ದೇವರ ಚಿತ್ರ ದುರ್ಬಳಕೆ ಪ್ರಕರಣ: ನ್ಯಾಯಾಲಯದಿಂದ ನಿರೀಕ್ಷಣ ಜಾಮೀನು ಮಂಜೂರು – ಕಹಳೆ ನ್ಯೂಸ್

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವರ ಮೂಲ ವಿಗ್ರಹ, ಉತ್ಸವ ಮೂರ್ತಿ, ದೆವಳದ ಮಾಹಿತಿಗಳು ಹಾಗೂ ಸೇವಾ ವಿವರಗಳನ್ನು ಖಾಸಗೀ ವೆಬ್‍ಸೈಟ್ನಲ್ಲಿ ದುರ್ಬಳಕೆ ಮಾಡಿದ ಪ್ರಕರಣದಡಿ ಬಂಧನದ ಭೀತಿ ಎದುರಿಸುತ್ತಿದ್ದ ಶ್ರೀ ಸಂಪುಟ ನರಸಿಂಹಸ್ವಾಮಿಶ್ರೀ ಟ್ರಸ್ಟ್ ನ ಮುಖ್ಯಸ್ಥರಿಗೆ ಹಾಗೂ ಸದಸ್ಯರಿಗೆ ಕೊಂಚ ರಿಲೀಫ್ ಸಿಕ್ಕಿದೆ.

ಅವರು ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಸಲ್ಲಿಸಿದ ಜಾಮೀನು ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಾಲಯ ಅವರಿಗೆ 15 ದಿನಗಳ ನಿರೀಕ್ಷಣ ಜಾಮೀನು ಮಂಜೂರು ಮಾಡಿದೆ. ಇದೇ ಪ್ರಕರಣದಲ್ಲಿ ಆರೋಪಿತರಾಗಿರುವ A1-Logics ಎಂಬ ವೆಬ್ ಸೈಟ್ ನಿರ್ವಹಣ ಸಂಸ್ಥೆಗೂ ಜಾಮೀನು ನೀಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಶ್ರೀ ಸಂಪುಟ ನರಸಿಂಹ ಸ್ವಾಮಿ ಟ್ರಸ್ಟ್ ನ ಮುಖ್ಯಸ್ಥರು ಹಾಗೂ ಪದಾಧಿಕಾರಿಗಳು ಸಲ್ಲಿಸಿದ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಸಿಸಿಎಚ್ – 35 ನ್ಯಾಯಾಧೀಶೆ ಶೋಭಾ ಅವರು ಅರ್ಜಿದಾರರಿಗೆ 15 ದಿನಗಳ ಷರತ್ತು ಬದ್ಧ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಶನಿವಾರ ಆದೇಶಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ರೂ 50 ಸಾವಿರ ಮೊತ್ತದ ವೈಯಕ್ತಿಕ ಬಾಂಡ್, ಒಬ್ಬ ವ್ಯಕ್ತಿಯ ಭದ್ರತೆ ಹಾಜರುಪಡಿಸಬೇಕು ಎಂದು ನ್ಯಾಯಾಧೀಶರು ತನ್ನ ಆದೇಶದಲ್ಲಿ ತಿಳಿಸಿದ್ದಾರೆ. ಅಲ್ಲದೆ ತನಿಖಾಧಿಕಾರಿಗಳಿಗಳಿಗೆ ವಿಚಾರಣಾ ಸಮಯದಲ್ಲಿ ಸಹಕರಿಸಬೇಕು. ದೂರುದಾರರಿಗೆ ಬೆದರಿಕೆ ಒಡ್ಡಬಾರದು ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ಸೂಚಿಸಿದೆ.