Recent Posts

Sunday, January 19, 2025
ಸುದ್ದಿ

63 ನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಉಜಿರೆಯಲ್ಲಿ ಕನ್ನಡ ಸಂಗಮ 2018 – ಕಹಳೆ ನ್ಯೂಸ್

ಬೆಳ್ತಂಗಡಿ: ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ಪರ ಸಂಘಟನೆಗಳ ಒಕ್ಕೂಟ ಬೆಳ್ತಂಗಡಿ ತಾಲ್ಲೂಕು ಜಿಲ್ಲಾ ಘಟಕ ಇದರ ವತಿಯಿಂದ 63 ನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತ 2 ನೇ ವರುಷದ ಕನ್ನಡ ಸಂಗಮ 2018 ಎಂಬ ಕಾರ್ಯಕ್ರಮ ಉಜಿರೆಯಲ್ಲಿ ನಡೆಯಿತು.

ಮುಖ್ಯ ಅತಿಥಿಗಳಾಗಿ ನಾರಾಯಣ ಗೌಡ ಸ್ಥಾಪಕ ಅಧ್ಯಕ್ಷ ಕರ್ನಾಟಕ ರಕ್ಷಣಾ ವೇದಿಕೆ ಅನಿಲ್ದಾಸ್ ದಕ್ಷಿಣಕನ್ನಡ ಜಿಲ್ಲಾಧ್ಯಕ್ಷ ಕರ್ನಾಟಕ ರಕ್ಷಣಾ ವೇದಿಕೆ, ಶ್ರೀನಿವಾಸ್ ಗೌಡ ಬೆಳ್ತಂಗಡಿ ಕರ್ನಾಟಕ ರಕ್ಷಣ ವೇದಿಕೆ ಅಧ್ಯಕ್ಷರು, ಶರತ್ಕೃಷ್ಣ, ತೇಗೂರು ಅರಸ್ ಪೊಲೀಸ್ ಅಧಿಕಾರಿಯಾದ ಸಂದೇಶ್ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ದಕ್ಷಿಣಕನ್ನಡ ಜಿಲ್ಲಾ ಅಧ್ಯಕ್ಷರಾದ ಅನಿಲ್ ದಾಸ್ ಸಭೆಯ ಪ್ರಾಸ್ತಾವಿಕ ಭಾಷಣವನ್ನು ಮಾಡಿದರು. ಬಳಿಕ ಈ ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ನೆರೆದ ಅತಿಥಿಗಳು ಉದ್ಘಾಟಿಸಿದರು.

ಬಳಿಕ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ನಾರಾಯಣ ಗೌಡ್ರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು .ಬಳಿಕ ಆಯ್ದ ಏಳು ಮಂದಿಯನ್ನ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಈ ಸಂದರ್ಭದಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು .ಅಭಿನಂದನೆಯ ಬಳಿಕ ಶ್ರೀನಿವಾಸ್ ಗೌಡ್ರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು.