ತೆಂಕಿಲದಿಂದ ಕಮ್ನಾರ್ ಕಾಲೋನಿಗೆ ಸಂಪರ್ಕಿಸುವ ಕಮ್ನಾರ್ ಬಳಿಯ ರಸ್ತೆಯು ಕಳೆದ ಹಲವಾರು ವರ್ಷಗಳಿಂದ ಅಸಮರ್ಪಕತೆಯಿಂದ ಕೂಡಿದ್ದು, ಇಲ್ಲಿನ ಸುಮಾರು ಹತ್ತು ಮನೆಗಳು ಎತ್ತರದ ಗುಡ್ಡ ಪ್ರದೇಶದಲ್ಲಿದ್ದುದರಿಂದ ಈ ಮನೆಗಳನ್ನು ಸಂಪರ್ಕಿಸಲು ಸರಿಯಾದ ರಸ್ತೆಗಳೇ ಇರಲಿಲ್ಲ.
ಈ ಬಗ್ಗೆ ಇಲ್ಲಿನ ಕಾಲೋನಿ ನಿವಾಸಿಗಳ ಹಲವಾರು ವರ್ಷಗಳ ಬೇಡಿಕೆಯಾಗಿದ್ದು, ಈ ಬಗ್ಗೆ ಮನವಿಯನ್ನು ಉದ್ಯಮಿ, ರೈ ಎಸ್ಟೇಟ್ಸ್ ಎಜ್ಯಕೇಶನಲ್ ಚಾರೀಟೇಬಲ್ ಟ್ರಸ್ಟ್ನ ಪ್ರವರ್ತಕರಾದ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರಿಗೆ ನೀಡಿದ್ದು, ಇದಕ್ಕೆ ಸ್ಪಂದಿಸಿದ ಅಶೋಕ್ ರೈಯವರು ಸ್ಥಳೀಯ ನಗರಸಭಾ ಸದಸ್ಯೆ ದೀಕ್ಷಾ ಪೈ ಮತ್ತು ನಗರಸಭಾ ಮುಖ್ಯಾಧಿಕಾರಿ ರೂಪಾ ಟಿ ಶೆಟ್ಟಿಯವರ ಜಂಟಿ ಸಹಕಾರದಲ್ಲಿ ಕಮ್ನಾರ್ ಕಾಲೋನಿ ನಿವಾಸಿಗಳಿಗೆ ಸಮರ್ಪಕ ರಸ್ತೆಯನ್ನು ನಿರ್ಮಿಸಿಕೊಡಲಾಗಿದ್ದು, ಇದರ ಉದ್ಘಾಟನಾ ಕಾರ್ಯಕ್ರಮವು ನಡೆಯಿತು.
ಉದ್ಘಾಟನೆ ನೆರವೇರಿಸಿ ಮಾತನಾಡಿದ ಉದ್ಯಮಿ ಅಶೋಕ್ ರೈಯವರು ಕಮ್ನಾರ್ ಕಾಲೋನಿಯ ನಿವಾಸಿಗಳಿಗೆ ತಮ್ಮ ಟ್ರಸ್ಟ್ ವತಿಯಿಂದ ಮನೆ ನಿರ್ಮಾಣಕ್ಕೆ ಸಹಾಯ ಸೇರಿದಂತೆ ಇನ್ನಿತರ ಮೂಲಭೂತ ಸಮಸ್ಯೆಗಳಿಗೂ ತನ್ನಿಂದಾಗುವ ಸಹಕಾರವನ್ನು ಈ ಹಿಂದೆ ನೀಡಿದ್ದು, ಇದೀಗ ಈ ಗ್ರಾಮದ ಬಹುವರ್ಷದ ರಸ್ತೆ ನಿರ್ಮಾಣದ ಬೇಡಿಕೆಯು ಈಡೇರಿದ್ದು, ಮುಂಬರುವ ದಿನಗಳಲ್ಲೂ ಈ ಭಾಗದ ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ನುಡಿದರು.
ಸ್ಥಳೀಯ ನಗರಸಭಾ ಸದಸ್ಯೆ ದೀಕ್ಷಾ ಪೈ ಮಾತನಾಡಿ ಈಗಾಗಲೇ ನಗರಸಭೆಯಿಂದ ಈ ರಸ್ತೆಗೆ ಕಾಂಕ್ರೀಟಿಕರಣಕ್ಕಾಗಿ ಸುಮಾರು 5 ಲಕ್ಷ ರೂ ಮಮಜೂರುಗೊಳಿಸಿದ್ದು ಮತ್ತು ತಡೆಗೋಡೆಗೂ 4 ಲಕ್ಷ ಮೀಸಲಿಡಲಾಗಿದೆ.ಈ ಕಾರ್ಯವನ್ನು ಶೀಘ್ರದಲ್ಲೇ ಅನುಷ್ಠಾನಗೊಳಿಸುವ ಭರವಸೆಯನ್ನು ಇದೇ ಸಂದರ್ಭದಲ್ಲಿ ನೀಡಿದರು.
ಮುಖ್ಯ ಅತಿಥಿಯಾಗಿ ಮಾಜಿ ನಗರಸಭಾ ಸದಸ್ಯ ರಾಜೇಶ್ ಬನ್ನೂರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸ್ಥಳೀಯ ಮೊಗೇರ ಸಂಘದ ಮಾಜಿ ಅದ್ಯಕ್ಷ ಕೆ.ಬಾಬು, ಕಾಲೋನಿಯ ಹಿರಿಯ ಸದಸ್ಯ, ವಾಮನ ಕಮ್ನಾರ್ ಮೋಹನ ಶಿವಾನುಗ್ರಹ ತೆಂಕಿಲ,ಬಾಬು ಮೇಸ್ತ್ರಿ,ಸದಾನಂದ ಟಿ, ಉಮೇಶ್ ಇಂದಿರಾನಗರ, ರಮೇಶ್ ತೆಂಕಿಲ, ಸೇಸಪ್ಪ ಗೌಡ, ಲಕ್ಷಿ್ಮೀ ಟಿ, ಪ್ರೇಮ,ಕಮಲ, ರವಿ ಕಮ್ನಾರ್, ಗಣೇಶ್, ಚಂದ್ರ ಕಮ್ನಾರ್, ಉಪಸ್ಥಿತರಿದ್ದರು. ಕೆ ಬಾಬು ಸ್ವಾಗತಿಸಿ, ವಾಮನ ಕಮ್ನಾರ್ ವಂದಿಸಿದರು.