Friday, September 20, 2024
ಸುದ್ದಿ

ಇತಿಹಾಸ ಪ್ರಸಿದ್ಧ ಕಾರಣೀಕ ದೇವಸ್ಥಾನ ಪಣೋಲಿಬೈಲು ಕಲ್ಲುರ್ಟಿ ದೈವದ ವಾರ್ಷಿಕ ಕೋಲ – ಕಹಳೆ ನ್ಯೂಸ್

ಬಂಟ್ವಾಳ: ಶ್ರೀ ಕ್ಷೇತ್ರ ಪಣೋಲಿಬೈಲು ಕಲ್ಲುರ್ಟಿ ದೈವಸ್ಥಾನ ಸಜೀಪ ಮೂಡ ಇದರ ವರ್ಷಾವಧಿ ಕೋಲ ಸೇವೆಯು ಆದಿತ್ಯವಾರ ರಾತ್ರಿ 2ರಿಂದ ಕ್ಷೇತ್ರದಲ್ಲಿ ವರ್ಷಾವಧಿ ಕೋಲವು ವಿಜೃಂಭನೆಯಿಂದ ಜರಗಿತು.

ನ.24ನೇ ಶನಿವಾರ ಸಂಜೆ 5.25ಕ್ಕೆ ಕೊಪ್ಪರಿಗೆ ಮುಹೂರ್ತ ಮತ್ತು 5.30ಗಂಟೆಗೆ “ಶ್ರೀ ಕೃಷ್ಣ ಭಜನಾ ಮಂದಿರ”ದ ವತಿಯಿಂದ ಕುಣಿತ ಭಜನೆ ಕಾರ್ಯಕ್ರಮ ನಡೆಯಿತು. ಸಂಜೆ 6.30ರಿಂದ ನೃತ್ಯಸುಧಾ ಮಂಗಳೂರು ವಿದುಷಿ ಸೌಮ್ಯ ಸುಧೀಂದ್ರ ರಾವ್ ಇವರಿಂದ “ಭರತನಾಟ್ಯ ಮತ್ತು ನೃತ್ಯ ವೈಭವ” ಕಾರ್ಯಕ್ರಮ,ರಾತ್ರಿ 7.30ರಿಂದ ರಾಕ್ ಸ್ಟಾರ್ ಮಾರ್ನಬೈಲು ಮಕ್ಕಳಿಂದ ಡಾನ್ಸ್ ಕಾರ್ಯಕ್ರಮ, ರಾತ್ರಿ 8.30ರಿಂದ “ಗಜೇಂದ್ರಮೋಕ್ಷ” ಯಕ್ಷಗಾನ ಬಯಲಾಟ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ರಾತ್ರಿ 10.30ರಿಂದ ಮಸ್ಕಿರಿ ಕುಡ್ಲ ಖ್ಯಾತಿಯ ದೀಪಕ್ ರೈ ಪಾಣಾಜೆ ಅಭಿನಯದ ತೆಲಿಕೆನಬಂಜಿ ನಿಲಿಕೆ( ತುಳು ಹಾಸ್ಯ ರಸದೌತಣ) ಕಾರ್ಯಕ್ರಮ ನಡೆಯಿತು. ನ.25ನೇ ಆದಿತ್ಯವಾರ ಬೆಳಿಗ್ಗೆ 9ರಿಂದ ನವಕ ಕಳಶ ಪ್ರಧಾನ ಮತ್ತು 12 ತೆಂಗಿನಕಾಯಿ ಗಣಹೋಮ, 11 ಗಂಟೆಯಿಂದ ನಾಗತಂಬಿಲ ನಡೆಯಿತು.

ಜಾಹೀರಾತು

ಮಧಾಹ್ನ 1 ರಿಂದ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.ಅಪರಾಹ್ನ 2.15ರಿಂದ ಶ್ರೀ ಅಯ್ಯಪ್ಪ ಬಯಲಾಟ ಸೇವಾ ಸಮಿತಿ, ಪಣೋಲಿಬೈಲು ಇವರಿಂದ “ಭಜನಾ ಕಾರ್ಯಕ್ರಮ” ,ಅಪರಾಹ್ನ 3.45ರಿಂದ ಗೌರಿಗಣೇಶ ಭಜನಾ ಮಂಡಳಿ, ತೊಕ್ಕೊಟ್ಟು ಇವರಿಂದ “ಭಜನಾ ಕಾರ್ಯಕ್ರಮ” ನಡೆಯಲಿದೆ.

ಸಂಜೆ 3.45ರಿಂದ ಶ್ರೀ ಕೃಷ್ಣ ಭಜನಾ ಮಂದಿರ,ಕುಡುಮುಂದೂರು ಇವರಿಂದ ಭಜನಾ ಕಾರ್ಯಕ್ರಮ, 5.30ರಿಂದ ಶ್ರೀ ಕೃಷ್ಣ ಭಜನಾ ಮಂದಿರದಲ್ಲಿ ಭಜನೆ, 6.30ರಿಂದ ರಾಷ್ಟ್ರಮತ್ತು ರಾಜ್ಯ ಮಟ್ಟದ ಪ್ರಶಸ್ತಿ ವಿಜೇತ ತಂಡ ಬಿಸಿರೋಡ್ ಇವರಿಂದ ಡ್ಯಾನ್ಸ್ ಕಾರ್ಯಕ್ರಮ ರಾತ್ರಿ 7.30ರಿಂದ ಗೀತಾ ಸಾಹಿತ್ಯ ಸಂಭ್ರಮ ಶ್ರೀ ವಿಠಲ ನಾಯಕ್ ಮತ್ತು ಬಳಗ ಕಲ್ಲಡ್ಕ ಇವರಿಂದಸಂದೇಶದ ಸಂತೋಷ ವಿನೂತನ ಶೈಲಿಯ ಕಾರ್ಯಕ್ರಮ ನಡೆಯಿತು.

ರಾತ್ರಿ 9.30ರಿಂದ ಕಿಶೋರ್ ಡಿ.ಶೆಟ್ಟಿ ನಿರ್ದೇಶನದಲ್ಲಿ ಲಕುಮಿ ತಂಡ ಕುಸಲ್ದ ಕಲಾವಿದರು ಅಭಿನಯಿಸುವ ಮಂಗೆ ಮಲ್ಪೊಡ್ಚಿ ಹಾಸ್ಯಮಯ ಸಾಮಾಜಿಕ ನಾಟಕ ನಡೆಯಿತು. ರಾತ್ರಿ 12 ರಿಂದ ಪ್ರಶಸ್ತಿ ವಿಜೇತ ಕಲಾಕುಂಭ ಸಾಂಸ್ಕೃತಿಕ ವೇದಿಕೆ, ಕುಳಾಯಿ ಮಂಗಳೂರು ಇವರ 310ನೇ ಪ್ರಯೋಗ ನಾಗೇಶ್ ಕುಳಾಯಿ ನಿರ್ದೇಶನದ, ಜಿ.ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದಯಾನಂದ ಜಿ.ಕತ್ತಾಲ್ ಸಾರ್ ನಿರೂಪಣೆಯ “ತುಳುನಾಡ ಸಂಸ್ಕೃತಿ” ಕಾರ್ಯಕ್ರಮ ನಡೆಯಿತು.