ಬಂಟ್ವಾಳ: ರಾಷ್ಟ್ರೀಯತೆಯ ಜೊತೆ, ವೃತ್ತಿ ಧರ್ಮದ ಬದುಕು ಕಟ್ಟಿಕೊಂಡು ಸಮಾಜದ ಎಲ್ಲಾ ವರ್ಗದವರಿಗೆ ಪ್ರೀತಿ ಪಾತ್ರರಾಗಿರುವ ರಿಕ್ಷಾ ಚಾಲಕರ ಸಂಘಟನೆ ಇತರ ಸಂಘಟನೆಗಳಿಗೆ ಮಾದರಿಯಾಗಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಹೇಳಿದರು.
ಅವರು ಲಯನ್ಸ್ ಸೇವಾ ಮಂದಿರದಲ್ಲಿ ಅಟೋ ರಿಕ್ಷಾ ಚಾಲಕರ ಮಾಲಕರ ಸಂಘ ( ಬಿ.ಯಂ.ಎಸ್ ಸಂಯೋಜಿತ ಮೋಟಾರ್ & ಜನರಲ್ ಮಜ್ದೂರ್ ಸಂಘದ ಘಟಕ) ಬಿಸಿರೋಡ್ ಇದರ ವಾರ್ಷಿಕ ಮಹಾಸಭೆಯ ಕಾರ್ಯಕ್ರಮವನ್ನುಉದ್ಘಾಟಿಸಿ ಮಾತನಾಡಿದರು.
ಸಂಘಟನೆಯ ಉದ್ದೇಶಗಳನ್ನು ಅರಿತುಕೊಂಡು ವ್ರತ್ತಿ ರಂಗದಲ್ಲಿ ಮಾನವೀಯ ಮೌಲ್ಯಗಳ ಜೊತೆಗೆ ಸಾಮಾಜಿಕ ಸೇವೆ ಮಾಡುವ ರಿಕ್ಷಾ ಚಾಲಕರ ಸಮಸ್ಯೆಗಳನ್ನು ಪರಿಹರಿಸಲು ಕ್ರಮಕೈಗೊಳ್ಳಲಾಗುವುದು ಎಂದರು.
ಶಾಂತಿಯ ಸ್ವಚ್ಚ ಬಂಟ್ವಾಳ ನಿರ್ಮಾಣದ ಕಾರ್ಯದ ಜೊತೆ ರಿಕ್ಷಾ ಚಾಲಕರ ಸಂಘಟನೆಯ ಸಹಾಯ ಬೇಕಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಟೋ ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ವಸಂತ್ ಕುಮಾರ್ ಮಣಿಹಳ್ಳ ವಹಿಸಿದ್ದರು.
ರಿಕ್ಷಾ ಚಾಲಕರಿಗೆ ಈ ನಿಟ್ಟಿನಲ್ಲಿ ಮಂಡಳಿ ರಚನೆಯಾಗಬೇಕು ಎಂದು ಸಭೆಯಲ್ಲಿ ಒತ್ತಾಯಗಳು ಕೇಳಿ ಬಂತು. ಬಂಟ್ವಾಳ ಶಾಸಕರು ಈ ಮಂಡಳಿ ರಚನೆಗೆ ಮುತುವರ್ಜಿ ವಹಿಸಬೇಕು ಎಂಬ ಮನವಿಯನ್ನು ಬಿ.ಎಂ.ಎಸ್.ರಾಜ್ಯ ಅಧ್ಯಕ್ಷ ವಿಶ್ವನಾಥ ಶೆಟ್ಟಿ ಮಾಡಿದರು.
ಕೃಷಿಕರು ದೇಶದ ಬೆನ್ನೆಲುಬು ಆದರೆ ವಾಹನದ ವಿಚಾರಲ್ಲಿ ರಿಕ್ಷಾ ಚಾಲಕರು ಜನರ ಬೆನ್ನಲೆಬು ಎಂದು ನ್ಯಾಯವಾದಿ ಸಂಘದ ಕಾನೂನು ಸಲಹೆಗಾರ ಪಿ.ಜಯರಾಮ ರೈ ಹೇಳಿದರು.
ಸಮಾಜದಲ್ಲಿ ಎಲ್ಲರೊಂದಿಗೆ ಬೆರೆಯುವ ರಿಕ್ಷಾ ಚಾಲಕರು ಇತರರಿಗೆ ಮಾದರಿಯಾಗರಿಬೇಕು. ಕಾನೂನನ್ನು ಗೌರವಿಸಿ ದುಡಿಯಿರಿ , ಉತ್ತಮ ಕಾರ್ಯಗಳಿಗೆ ಸಂಘಟನೆ ಸಹಕಾರ ನೀಡಲಿ ಎಂದು ಬಂಟ್ವಾಳ ಟ್ರಾಫಿಕ್ ಪೋಲೀಸ್ ಇನ್ಸ್ಪೆಕ್ಟರ್ ಮಂಜುಳಾ ಅವರು ಹೇಳಿದರು.
ಅಟೋ ಚಾಲಕ ಮಾಲಕರ ಸಂಘದ ಗೌರವಾಧ್ಯಕ್ಷ, ಪುರಸಭಾ ಸದಸ್ಯ ಎ. ಗೋವಿಂದ ಪ್ರಭು ಮುಖ್ಯ ಅತಿಥಿಯಾಗಿ ಮಾತನಾಡಿದರು. ವೇದಿಕೆಯಲ್ಲಿ ಸಂಘದ ಸಲಹೆಗಾರ ಸದಾನಂದ ಗೌಡ, ಜಿಲ್ಲಾ ಕಾರ್ಯದರ್ಶಿ ಗೋಪಾಲಕೃಷ್ಣ ಉಪಸ್ಥಿತರಿದ್ದರು.
ಇದೇ ಸಂಧರ್ಭದಲ್ಲಿ ಶಾಸಕ ರಾಜೇಶ್ ನಾಯಕ್ ಮತ್ತು ಹಿರಿಯ ರಿಕ್ಷಾ ಚಾಲಕ ಲಕ್ಷಣ್ ಮಣಿಹಳ್ಳ ಇವರನ್ನು ಗೌರವಿಸಲಾಯಿತು. ಹ್ರದಯ ಚಿಕಿತ್ಸೆ ಗೊಳಗಾದ ಹರೀಶ್ ಪೂಪಾಡಿಕಟ್ಟೆ ಅವರ ಚಿಕಿತ್ಸೆ ನೆರವಿಗೆ ಪರಿಹಾರ ಚೆಕ್ ನೀಡಲಾಯಿತು. ರಿಕ್ಷಾ ಚಾಲಕ ಸಂಘಟನೆಯ ಸಲಹೆಗಾರ ಸದಾನಂದ ನಾವೂರ ಸ್ವಾಗತಿಸಿ ವಂದಿಸಿದರು. ಉಮಾಶಂಕರ್ ಕಾರ್ಯಕ್ರಮ ನಿರೂಪಿಸಿದರು.