Friday, September 20, 2024
ಸುದ್ದಿ

ಮನ್ ಕೀ ಬಾತ್ ಜನತೆ ಜತೆಗೆ ಸಂವಹನ ನಡೆಸಲು ಆರಂಭಿಸಿರುವ ರಚನಾತ್ಮಕ ರೇಡಿಯೋ ಕಾರ್ಯಕ್ರಮ: ಪ್ರಧಾನಿ ಮೋದಿ – ಕಹಳೆ ನ್ಯೂಸ್

ನವದೆಹಲಿ: ಮನ್ ಕೀ ಬಾತ್ ಕುರಿತು ವಿಪಕ್ಷಗಳಿಂದ ಸತತ ಟೀಕೆಗಳು ಬರುತ್ತಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಕಾರ್ಯಕ್ರಮದ ಮೂಲಕವೇ ಪ್ರತಿಕ್ರಿಯೆ ನೀಡಿದ್ದಾರೆ. ‘ಮನ್ ಕೀ ಬಾತ್​ನಲ್ಲಿ ರಾಜಕೀಯವಿಲ್ಲ. ದೇಶದ ಜನತೆ ಜತೆಗೆ ಸಂವಹನ ನಡೆಸಲು ಆರಂಭಿಸಿರುವ ರಚನಾತ್ಮಕ ರೇಡಿಯೋ ಕಾರ್ಯಕ್ರಮ’ ಎಂದಿದ್ದಾರೆ.

ಕಾರ್ಯಕ್ರಮದ 50ನೇ ಆವೃತ್ತಿಯಲ್ಲಿ ಮಾತನಾಡಿದ ಅವರು, ಸ್ವಂತ ಅಥವಾ ಸರ್ಕಾರದ ಸಾಧನೆ ಹೇಳಿಕೊಳ್ಳಲು ಈ ಕಾರ್ಯಕ್ರಮವನ್ನು ನಾನು ಬಳಸಿಕೊಳ್ಳುತ್ತಿಲ್ಲ. ಬದಲಾಗಿ ದೇಶದ ಜನತೆ ಆಶಿಸುವ ವಿಚಾರಗಳ ಕುರಿತು ಅವರೊಂದಿಗೆ ಮಾತನಾಡುತ್ತಿದ್ದೇನೆ. ದೇಶದ ಜನರ ಸುಖ-ದುಃಖಗಳ ಬಗ್ಗೆ ಇಲ್ಲಿ ರ್ಚಚಿಸಿದ್ದೇನೆ. ಸ್ವಚ್ಛ ಭಾರತ, ಬೇಟಿ ಬಚಾವೊ, ರಸ್ತೆ ಸುರಕ್ಷತೆ ಸೇರಿ ಇತರ ವಿಚಾರಗಳ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಈ ಕಾರ್ಯಕ್ರಮ ಯಶಸ್ವಿಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮೋದಿ ಎನ್ನುವ ವ್ಯಕ್ತಿ ಶಾಶ್ವತವಲ್ಲ. ಅಂಥವರು ಬಹಳಷ್ಟು ಜನರು ಬಂದು ಹೋಗುತ್ತಾರೆ. ಆದರೆ ಈ ದೇಶದ ಸಂಸ್ಕೃತಿ, ಪರಂಪರೆ ಅಮರವಾಗಿರುತ್ತದೆ. ಈ ಕಾರ್ಯಕ್ರಮದ ಮೂಲಕ ಅದರ ವ್ಯಾಪ್ತಿಯನ್ನು ಮತ್ತಷ್ಟು ಹೆಚ್ಚಿಸುವ ಕೆಲಸ ಮಾಡಿದ್ದೇನೆ ಎಂದು ಪ್ರಧಾನಿ ಅಭಿಪ್ರಾಯಪಟ್ಟಿದ್ದಾರೆ.

ಜಾಹೀರಾತು