Friday, September 20, 2024
ಸುದ್ದಿ

ಪ್ರಗತಿ ಸ್ಟಡಿ ಸೆಂಟರ್‌ನ ವಿಜ್ಞಾನ ವಿಭಾಗದಲ್ಲಿ ಕಾನೂನು ಮಾಹಿತಿ ಕಾರ್ಯಕ್ರಮ – ಕಹಳೆ ನ್ಯೂಸ್

ಪುತ್ತೂರು: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಂಗಳೂರು, ತಾಲೂಕು ಕಾನೂನು ಸೇವೆಗಳ ಸಮಿತಿ, ಪುತ್ತೂರು, ನ್ಯಾಯವಾದಿಗಳ ಸಂಘ ಪುತ್ತೂರು, ಪ್ರಗತಿ ಎಜ್ಯುಕೇಶಲ್ ಫೌಂಡೇಶನ್(ರಿ.)ಪುತ್ತೂರು ಇದರ ಅಧೀನಕ್ಕೆ ಒಳಪಟ್ಟ ಪ್ರಗತಿ ಸ್ಟಡಿ ಸೆಂಟರ್, ಪುತ್ತೂರು, ಶಿಕ್ಷಣ ಸಂಪನ್ಮೂಲ ಕೇಂದ್ರ ಪುತ್ತೂರು ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ‘ಕಾನೂನು ದಿನ ಮತ್ತು ಸಂವಿಧಾನ ದಿನದ ಪ್ರಯುಕ್ತ ‘ಕಾನೂನು ಸೇವೆಗಳ ದಿನಾಚರಣೆ ಮತ್ತು ಸಂವಿಧಾನದ ಮಹತ್ವ’ ಹಾಗೂ ‘ಮಾದಕ ವಸ್ತುಗಳ ಸೇವೆಯಿಂದ ಆಗುವ ದುಷ್ಪರಿಣಾಮಗಳು’ ಎಂಬ ವಿಷಯದ ಬಗ್ಗೆ ನ. 26ರಂದು ಪುತ್ತೂರಿನ ಬೊಳುವಾರಿನಲ್ಲಿರುವ ಪ್ರಗತಿ ಸ್ಟಡಿ ಸೆಂಟರ್‌ನ ವಿಜ್ಞಾನ ವಿಭಾಗದಲ್ಲಿ ಕಾನೂನು ಮಾಹಿತಿ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ, ಪುತ್ತೂರು ವಕೀಲರ ಸಂಘದ ಅಧ್ಯಕ್ಷ, ನ್ಯಾಯವಾದಿ ಕೆ. ಭಾಸ್ಕರ ಕೋಡಿಂಬಾಳ ಮಾತಾನಾಡಿ, ಸಂವಿಧಾನದ ಪರಿಪೂರ್ಣತೆ ಮತ್ತು ದೇಶದ ಅಖಂಡತೆಯನ್ನು ಕಾನೂನಿನ ಚೌಕಟ್ಟಿನಲ್ಲಿ ಅರ್ಥೈಸಿಕೊಳ್ಳಬೇಕು. ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ದೇಶವನ್ನು ಕಾನೂನು ರೀತ್ಯಾ ಮುನ್ನಡೆಸಬೇಕು ಎಂದು ನುಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

ಉದ್ಘಾಟಕರಾಗಿ ಆಗಮಿಸಿದ್ದ ಪುತ್ತೂರು ಗೌರವಾನ್ವಿತ ಪ್ರಧಾನ ಹಿರಿಯ ವ್ಯವಹಾರಿಕ ನ್ಯಾಯಾಧೀಶರು ಮತ್ತು ಹೆಚ್ಚುವರಿ ಮುಖ್ಯ ನ್ಯಾಯಿಕ ದಂಡಾಧಿಕಾರಿಯವರು ಪುತ್ತೂರು ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿಯ ಅಧ್ಯಕ್ಷರಾದ ಮಂಜುನಾಥ, ದೀಪ ಬೆಳಗಿಸಿ ಉದ್ಘಾಟಿಸುವ ಬದಲಾಗಿ ಮಾಜಿ ಸಚಿವರುಗಳಾದ ದಿ. ಅಂಬರೀಶ್ ಹಾಗೂ ಜಾಫರ್ ಶರೀಫ್ ನಿಧನಕ್ಕೆ ಸಂತಾಪ ಕೋರಿ ಒಂದು ನಿಮಿಷದ ಮೌನ ಪ್ರಾರ್ಥನೆಯನ್ನು ನಡೆಸಲಾಯಿತು. ನಂತರ ಅವರು ಮಾತನಾಡಿ, ಸಂವಿಧಾನದ ಮಹತ್ವ, ಕಾರ್ಯರೂಪ ಹಾಗೂ ಅಧಿಕಾರಗಳನ್ನು ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ, ಪುತ್ತೂರು ಗೌರವಾನ್ವಿತ ಹೆಚ್ಚುವರಿ ಹಿರಿಯ ವ್ಯವಹಾರಿಕ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಯವರಾದ ಲತಾದೇವಿ ಜಿ. ಎ ಇವರು ಮಾತಾನಾಡಿ, ‘ಯೌವ್ವನದಲ್ಲಿ ವಿದ್ಯಾರ್ಥಿಗಳ ಚಿಂತನೆಗಳು ಹೇಗೆ ಬದಲಾಗುತ್ತಿರುತ್ತದೆ ಹಾಗೂ ಕಾನೂನಿನ ಅರಿವನ್ನು ಎಲ್ಲಿ, ಹೇಗೆ ತಿಳಿದುಕೊಂಡು ವಿದ್ಯಾರ್ಥಿಗಳು ಮುನ್ನಡೆಯಬೇಕು’ ಎಂದು ತಿಳಿಸಿದರು.

ಮುಖ್ಯ ಅತಿಥಿಯಾಗಿ ಪುತ್ತೂರು ಗೌರವಾನ್ವಿತ ಪ್ರಧಾನ ವ್ಯವಹಾರಿಕ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳು, ಪ್ರಕಾಶ್. ಪಿ. ಎಮ್, ಹಾಗೂ ಪುತ್ತೂರು ಗೌರವಾನ್ವಿತ ಹೆಚ್ಚುವರಿ ವ್ಯವಹಾರಿಕ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಯಾದ ಕಿಶನ್ ಬಿ. ಮಡಲಗಿ ಇವರು ಶುಭ ಹಾರೈಸಿದರು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈ ‘ಕಾನೂನು ಸೇವೆಗಳ ದಿನಾಚರಣೆ’ ಮತ್ತು ಸಂವಿಧಾನದ ಮಹತ್ವ ಹಾಗೂ ‘ಮಾದಕ ವಸ್ತುಗಳ ಸೇವನೆಯಿಂದ ಆಗುವ ದುಷ್ಪರಿಣಾಮಗಳು’ ಎಂಬ ವಿಷಯದ ಬಗ್ಗೆ ಮಾತಾನಾಡಿ, ‘ಪ್ರಸ್ತುತ ನಮ್ಮ ಸಮಾಜದಲ್ಲಿ ಸಂಸ್ಕೃತಿ, ಸಂಪ್ರದಾಯ, ಮಾನವೀಯ ನೆಲೆಗಟ್ಟಿನಲ್ಲಿ ಬದುಕುತ್ತಿರುವಾಗ ಕಾನೂನು ನೆಲೆಗಟ್ಟಿನಲ್ಲಿ ಬದುಕಿ ಭವ್ಯ ಭಾರತವನ್ನು ರೂಪಿಸಬೇಕು’ ಎಂದು ನುಡಿದರು.

ಪುತ್ತೂರು ನಗರ ಪೊಲೀಸ್ ಠಾಣೆ ಪೊಲೀಸ್ ಉಪನಿರೀಕ್ಷಕ, ಅಜಯ್ ಕುಮಾರ್ ಡಿ.ಎನ್ “ಮಾದಕ ವಸ್ತುಗಳ ಸೇವನೆಯಿಂದ ಆಗುವ ದುಷ್ಪರಿಣಾಮಗಳು” ಎಂಬ ವಿಷಯದ ಬಗ್ಗೆ ಮಾತಾನಾಡಿ, ಮಾದಕ ವ್ಯಸನಗಳು, ಸಂಚಾರಿ ನಿಯಮಗಳು, ಲೈಂಗಿಕ ಕಿರುಕುಳ ಮತ್ತು ದುಷ್ಪರಿಣಾಮಗಳು ಹಾಗೂ ಕಾನೂನು ರೀತ್ಯಾ ಶಿಕ್ಷೆಗಳ ಬಗ್ಗೆ ಸುವಿವರವಾಗಿ ಮನಮುಟ್ಟುವಂತೆ ವಿದ್ಯಾರ್ಥಿಗಳಿಗೆ ತಿಳಿಸಿದರು.
ಅತಿಥಿಯಾಗಿ ಆಗಮಿಸಿದ್ದ ಮೆ| ಜಿ.ಎಲ್. ಆಚಾರ್ಯ ಜ್ಯುವೆಲ್ರ‍್ಸ್ನ ಪಾಲುದಾರರಾದ ಬಲರಾಮ ಆಚಾರ್ಯ ಮಾತನಾಡಿ,
ವಿದ್ಯಾರ್ಥಿ ಜೀವನದಲ್ಲಿ ಕಾನೂನಿನ ಅರಿವು ಇದ್ದಾಗ ಮಾತ್ರ ಮುಂದಿನ ಬದುಕಿನಲ್ಲಿ ಯಶಸ್ಸು ಕಾಣಲು ಸಾಧ್ಯ ನೀತಿ ನಿಯಮಗಳಿದ್ದಾಗ ಮಾತ್ರ ಬದುಕಿಗೊಂದು ಪರಿಪೂರ್ಣತೆ ಹೊಂದುತ್ತೇವೆ.

ಪುತ್ತೂರು ತಾಲೂಕು ಕಾನೂನು ಸೇವಗಳ ಸಮಿತಿ, ಪ್ಯಾರಾ ಲೀಗಲ್ ವಾಲೆಂಟೀಯರ್ ಹಾಗೂ ಅಧ್ಯಕ್ಷರು ಶಿಕ್ಷಣ ಸಂಪನ್ಮೂಲ ಕೇಂದ್ರ ನಯನ ರೈ, ಪುತ್ತೂರು ವಕೀಲರ ಸಂಘ ಉಪಾಧ್ಯಕ್ಷರಾದ ಮಹಾಬಲ ಗೌಡ ಪುತ್ತೂರು ವಕೀಲರ ಸಂಘದ ಖಜಾಂಜಿ ಕುಮಾರನಾಥ್ ಎಸ್., ಪುತ್ತೂರು ವಕೀಲರ ಸಂಘದ ಜೊತೆ ಕಾರ್ಯದರ್ಶಿ ದೀಪಕ್ ಬೊಳ್ವಾರು, ಪುತ್ತೂರು ಪ್ರಗತಿ ಸ್ಟಡಿ ಸೆಂಟರ್ ಪ್ರಾಂಶುಪಾಲರಾದ ಕೆ. ಹೇಮಲತಾ ಗೋಕುಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪುತ್ತೂರು ಪ್ರಗತಿ ಸ್ಟಡಿ ಸೆಂಟರ್‌ನ ಉಪನ್ಯಾಸಕರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಚಾಲಕ ಪಿ.ವಿ.ಗೋಕುಲ್‌ನಾಥ್ ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ಮೈತ್ರಿ ಹಾಗೂ ಸಾನಿಯಾ ಪ್ರಾರ್ಥಿಸಿದರು. ಪ್ರಗತಿ ಸ್ಟಡಿ ಸೆಂಟರ್‌ನ ಆಂಗ್ಲಭಾಷಾ ಉಪನ್ಯಾಸಕಿ ವಿಸ್ಮಿತಾ ಮಧುಕರ್ ಮುಳಿಬೈಲು ವಂದಿಸಿದರು. ಪುತ್ತೂರು ನ್ಯಾಯವಾದಿ ಹರಿಣಾಕ್ಷಿ. ಜೆ. ಶೆಟ್ಟಿ ನಿರೂಪಿಸಿದರು. ಪುತ್ತೂರು ಆಡಳಿತ ಸಹಾಯಕ ತಾಲೂಕು ಕಾನೂನು ಸೇವೆಗಳ ಸಮಿತಿ ಡಿ. ರಂಗಪ್ಪ ಪೂಜಾರಿ ಸಹಕರಿಸಿದರು.