Monday, January 20, 2025
ಸುದ್ದಿ

ಮಂಗಳ ಗ್ರಹದ ಮೇಲೆ ಯಶಸ್ವಿ ಪಾದರ್ಪಣೆ ಮಾಡಿದ ನಾಸಾದ ಇನ್‌ಸೈಟ್ – ಕಹಳೆ ನ್ಯೂಸ್

ಮಂಗಳನ ಅಂಗಳಕ್ಕೆ ಮಾನವನ ತಂತ್ರಜ್ಞಾನಗಳು ಲಗ್ಗೆ ಇಟ್ಟಿರೋದು ಗೊತ್ತೇ ಇದೆ. ಈಗ ಈ ಪಟ್ಟಿಗೆ ಇನ್ನೊಂದು ಸೇರ್ಪಡೆ ನಾಸಾದ ಇನ್‌ಸೈಟ್. ಅಂತರಿಕ್ಷದಲ್ಲಿ ಆರು ತಿಂಗಳ ಕಾಲ ಪ್ರಯಾಣ ನಡೆಸಿದ ಇನ್‌ಸೈಟ್ ಮಂಗಳ ಗ್ರಹದ ಮೇಲೆ ಯಶಸ್ವಿಯಾಗಿ ತನ್ನ ಪಾದರ್ಪಣೆಯನ್ನು ಮಾಡಿದೆ.

ಆರು ತಿಂಗಳಲ್ಲಿ 482 ಮಿಲಿಯನ್ ಕಿಲೋ ಮೀಟರ್ ಪ್ರಯಾಣ ನಡೆಸಿದ ನೌಕೆ 6 ನಿಮಿಷಗಳಲ್ಲಿ ಕೆಂಪು ಗ್ರಹವಾದ ಮಂಗಳನ ಮೇಲೆ ಇಳಿದಿದೆ. ಮಂಗಳ ಗ್ರಹದ ಮೇಲೆ ಬಾಹ್ಯಾಕಾಶ ನೌಕೆ ಬಂದಿಳಿಯುತ್ತಿದ್ದಂತೆ ಕ್ಯಾಲಿಫೋರ್ನಿಯಾದ ಪಸಡೆನಾದಲ್ಲಿರುವ ನಾಸಾದ ಜೆಟ್ ಪ್ರೊಪಲ್ಷನ್ ಪ್ರಯೋಗಾಲಯದಲ್ಲಿ ನೌಕೆಯನ್ನು ನಿಯಂತ್ರಣ ಮಾಡುತ್ತಿದ್ದವರು ಸಂತೋಷದಿಂದ ಕುಣಿದಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಳೆದ ಮೇ ತಿಂಗಳಲ್ಲಿ ನಾಸಾ ಸಂಸ್ಥೆ ಜೋಡಿ ಸಣ್ಣ ಉಪಗ್ರಹವನ್ನು ಅಂತರಿಕ್ಷಕ್ಕೆ ಕಳುಹಿಸಿಕೊಟ್ಟಿತ್ತು. ಅಲ್ಲಿಂದ ನಂತರ ಕಾಲಕಾಲಕ್ಕೆ ಉಪಗ್ರಹದ ಚಲನವಲನ, ಮಾಹಿತಿಗಳು ವಿಜ್ಞಾನಿಗಳಿಗೆ ಸಿಗುತ್ತಿದ್ದವು.

ಜಾಹೀರಾತು
ಜಾಹೀರಾತು
ಜಾಹೀರಾತು

ಮಂಗಳ ಗ್ರಹದ ಮೇಲೆ ಉಪಗ್ರಹ ಬಂದಿಳಿಯುತ್ತಿದ್ದಂತೆ ಮಂಗಳ ಗ್ರಹದ ಮೇಲ್ಮೈಯ ಛಾಯಾಚಿತ್ರ ಕಳುಹಿಸಿದ್ದು ಅಂಗಾರಕನ ಅಂಗಳಕ್ಕೆ ಕಾಲಿಡುವ ಕೊನೆಯ ಏಳು ನಿಮಿಷಗಳು ಸಿನಿಮೀಯವಾಗಿತ್ತು ಎಂದು ನಾಸಾ ಮೂಲಗಳು ತಿಳಿಸಿವೆ.