ಬಂಟ್ವಾಳ: ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ (ರಿ) ಬಾಳ್ತಿಲ ಇದರ ವತಿಯಿಂದ ನ.26 ರ ಸೋಮವಾರ ಭಾರತ ಸೇವಾಶ್ರಮ ಕನ್ಯಾನ ಇಲ್ಲಿ ಸಾಂತ್ವಾನ, ಕಾನೂನು ಮತ್ತು ಆರೋಗ್ಯ ತರಬೇತಿ ಶಿಬಿರವು ನಡೆಯಿತು.
ಸಂಸ್ಥೆಯ ಸಂಸ್ಥಾಪಕ ಮತ್ತು ನ್ಯಾಯವಾದಿ ಆಗಿರುವಂತಹ ಶೈಲಜಾ ರಾಜೇಶ್ ಸಾಂತ್ವಾನ ಕಾನೂನು ಮತ್ತು ಆರೋಗ್ಯದ ಬಗ್ಗೆ ಮಾಹಿತಿ ನೀಡಿ ಮನೆಯೇ ಮಂತ್ರಾಲಯ ಮನಸೇ ದೇವಾಲಯ ದೇವರು ನಮ್ಮೊಳಗೆ ಇದ್ದಾನೆ.
ಪರಸ್ಪರರನ್ನು ಪ್ರೀತಿಸಿ, ಗೌರವಿಸಿ ಸಂಸ್ಕಾರಯುತವಾದ ಜೀವನವನ್ನು ನಡೆಸಿ ಇತ್ತೀಚಿನ ಕಾಲದಲ್ಲಿ ವಿದ್ಯೆ,ದುಡ್ಡು, ಎಲ್ಲರ ಹತ್ತಿರ ಇದೆ ಆದರೆ ಪರಸ್ಪರ ಪ್ರೀತಿ-ವಿಶ್ವಾಸ ಕಡಿಮೆಯಾಗಿದೆ ನಮ್ಮಲ್ಲಿರುವ ಒಳ್ಳೆಯ ನಡತೆ ಸಂಸ್ಕಾರ ಜೀವನಕ್ಕೆ ದಾರಿದೀಪ ಎಂದು ಹೇಳಿದರು.
ಸಂಸ್ಥೆಯ ಪ್ರಯುಕ್ತ ಧನ ಸಹಾಯ ನೀಡಿರುದಲ್ಲದೆ ಆಟೋಟ ಸ್ವರ್ಧೆಗಳನ್ನು ನಡೆಸಿ ಬಹುಮಾನ ವಿತರಿಸಿ ಸಿಹಿ-ತಿಂಡಿಯನ್ನು ಹಂಚಲಾಯಿತು. ಈ ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮೆಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ಭಾರತಿ ಬೇಬಿ ಕುಂದರ್, ಮೆಸ್ಕಾಂ ಜೆ ಇ ರಾಜೇಶ್ ಬಿ,ಯುವವಾಹಿನಿ ಮಾಜಿ ಅಧ್ಯಕ್ಷ ಪ್ರೇಮನಾಥ್ ಕೆ., ಸಂಸ್ಥೆಯ ಟ್ರಸ್ಟಿ ಅನ್ನಪೂರ್ಣ ಬಾಬುರಾಜ್, ಕನ್ಯಾನ ಸೇವಾಶ್ರಮದ ಈಶ್ವರ ಭಟ್ ಮತ್ತು ಅವರ ಪತ್ನಿ ಸರಿತ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.