Recent Posts

Monday, January 20, 2025
ಸುದ್ದಿ

ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನವಜಾತ ಹೆಣ್ಣು ಶಿಶು ಶವ ಪತ್ತೆ – ಕಹಳೆ ನ್ಯೂಸ್

ಕೋಲಾರ: ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನವಜಾತ ಹೆಣ್ಣು ಶಿಶು ಶವ ಪತ್ತೆಯಾಗಿದ್ದು, ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಕೋಲಾರ ನಗರದ ಟಮಕಾ ಬಳಿ ಇರುವ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಮೂರನೇ ಮಹಡಿಯಲ್ಲಿರುವ ವಿಮಾ ಅಧಿಕಾರಿ ಕಚೇರಿಯ ಕಿಟಕಿಯಿಂದ ಮಗುವನ್ನು ಎಸೆಯಲಾಗಿದೆ.

ಇಂದು ಮುಂಜಾನೆ ಕಿಡಿಗೇಡಿಗಳು ಕಚೇರಿಗೆ ಅಕ್ರಮವಾಗಿ ಪ್ರವೇಶ ಮಾಡಿ, ಮಗುವನ್ನ ಕಚೇರಿಯ ಕಿಟಕಿಯಿಂದ ಬಿಸಾಡಿದ್ದಾರೆ. ಪರಿಣಾಮ ಕಿಟಕಿ ಬಳಿ ರಕ್ತದ ಕಲೆಗಳಾಗಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಚೇರಿ ಒಳಗೆ ಮಗು ಹೇಗೆ ಬಂತು, ಯಾರಾದರೂ ತಂದು ಉದ್ದೇಶ ಪೂರ್ವಕವಾಗಿ ಹಾಕಿದ್ದಾರಾ ಅನ್ನೋ ಸಾಕಷ್ಟು ಅನುಮಾನಗಳು ಕಚೇರಿ ಸಿಬ್ಬಂದಿಯಲ್ಲಿ ಮೂಡಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಚೇರಿಯ ಬಾಗಿಲಿಗೆ ಅಳವಡಿಸಿರುವ ಚಿಲಕವನ್ನ ತೆಗೆದು ಯಾರೋ ಒಳಗೆ ಹೋಗಿರುವ ಗುರುತುಗಳು ಪತ್ತೆಯಾಗಿದೆ. ಕಚೇರಿಯಲ್ಲಿ ರಕ್ತದ ಕಲೆಗಲಾಗಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.

ಇನ್ನೂ ಸ್ಥಳಕ್ಕೆ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.