Recent Posts

Monday, January 20, 2025
ಸುದ್ದಿ

ಅಧಿಕಾರಿಗಳು ಹಾಗೂ ಗ್ರಾ.ಪಂ.ಅಧ್ಯಕ್ಷರುಗಳ ವಿಶೇಷ ಪ್ರಗತಿ ಪರಿಶೀಲನಾ ಸಭೆ – ಕಹಳೆ ನ್ಯೂಸ್

ಬಂಟ್ವಾಳ: ಪಂಚಾಯತ್ ಅದ್ಯಕ್ಷರುಗಳು ಮತ್ತು ಅಧಿಕಾರಿಗಳ ಜೊತೆ ಸಂವಹನ ಕೊರತೆಯನ್ನು ನೀಗಿಸಲು ತಹಶೀಲ್ದಾರ ಕ್ರಮಕೈಗೊಳ್ಳಿ ಎಂದು ಶಾಸಕ ರಾಜೇಶ್ ನಾಯಕ್ ತಿಳಿಸಿದರು.

ಅವರು ಬಿಸಿರೋಡಿನ ಎಸ್.ಜಿ.ಆರ್.ಎಸ್.ವೈ.ಸಭಾಂಗಣದಲ್ಲಿ ಕರೆದ ಅಧಿಕಾರಿಗಳು ಹಾಗೂ ಗ್ರಾ.ಪಂ.ಅಧ್ಯಕ್ಷರುಗಳ ವಿಶೇಷ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಡುವೆ ಹೊಂದಾಣಿಕೆ ಕೊರತೆಯಾದರೆ ಅಲ್ಲಿನ ಜನರು ಸಫರ್ ಅಗುತ್ತಾರೆ ಎಂದರು. ಅಧಿಕಾರಿಗಳು ಗ್ರಾ.ಪಂ.ಜನಪ್ರತಿನಿಧಿಗಳೊಂದಿಗೆ ಸರಿಯಾಗಿ ಸ್ಪಂದಿಸದಿದ್ದರೆ ಅಂತಹ ಅಧಿಕಾರಿಗಳ ವಿರುದ್ದ ಲಿಖಿತವಾಗಿ ಮೇಲಾಧಿಕಾರಿಗಳಿಗೆ ದೂರು ನೀಡಿ, ಇಲ್ಲಿ ಜನರ ಸಮಸ್ಯೆಗಳು ಪರಿಹಾರ ಆಗಬೇಕು, ಅಧಿಕಾರಿಗಳು ಉದಾಸೀನ ಮನೋಭಾವದಿಂದ ಹೊರಬರಬೇಕು ಎಂದು ಅವರು ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ತ್ಯಾಜ್ಯ ಘಟಕ ವಸತಿನಿವೇಶನ ಹಾಗೂ ಸ್ಮಶಾನಕ್ಕೆ ಜಮೀನು ಮೀಸಲಿಡಬೇಕು ಎಂದು ಶಾಸಕರು ತಿಳಿಸಿದರು.

ಯಾವ ಪಂಚಾಯತ್ ಗಳಲ್ಲಿ ಸಮಸ್ಯೆಗಳಿದೆ ಅಂತಹ ಪಂಚಾಯತ್ ಗಳ ಜೊತೆ ಅಧಿಕಾರಿ ಗಳು ಹೊಂದಾಣಿಕೆ ಮಾಡಿ ಸಮಸ್ಯೆಗಳ ಸರ್ವೆ ಕಾರ್ಯ ಶೀಘ್ರವಾಗಿ ನಡೆಸಿ ಪರಿಹಾರಕ್ಕೆ ಕ್ರಮಕೈಗೊಳ್ಳಿ ಎಂದರು.

ಕನಿಷ್ಠ ಮೂರು ತಿಂಗಳಲ್ಲಿ ಈ ಮೂರು ವಿಷಯಗಳಿಗೆ ಸಂಬಂಧಿಸಿದಂತೆ ಕೆಲಸಗಳನ್ನು ಮಾಡಿ ಮುಗಿಸಿ ಎಂದು ಡೆಡ್ ಲೈನ್ ನೀಡಿದರು.
ಸರಕಾರ 12 ಲಕ್ಷ ಸ್ಮಶಾನ ನಿರ್ಮಾಣ ಕ್ಕೆ ಅನುದಾನ ನೀಡುತ್ತದೆ.

ಇದನ್ನು ಬಳಸಿಕೊಂಡು ಮುಕ್ತಿಧಾಮ ಎಂಬ ರೀತಿಯಲ್ಲಿ ಮಾದರಿಯಾಗಿ ಸ್ಮಶಾನ ನಿರ್ಮಾಣ ಮಾಡಿ ಮುಗಿಸಿ ಎಂದು ಹೇಳಿದರು. ‌ಇಂಜಿನಿಯರುಗಳ ಕಡೆಯಿಂದ ಸಮಸ್ಯೆಗಳಿದ್ದರೆ ಅವರ ಜೊತೆ ಸಭೆ ನಡೆಸಿ ಪರಿಹಾರ ಕೈಗೊಳ್ಳುವಂತೆ ಇ. ಒ . ಗೆ ತಿಳಿಸಿದರು.

ಈ ಸಂಧರ್ಭದಲ್ಲಿ ತಾ.ಪಂ.ಅದ್ಯಕ್ಷ ಚಂದ್ರಹಾಸ ಕರ್ಕೇರ, ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಆಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಮೀ ಸಿ.ಬಂಗೇರ, ತಾ.ಪಂ.ಇ.ಒ. ರಾಜಣ್ಣ ಮತ್ತು ತಹಶೀಲ್ದಾರ ಪುರಂದರ ಹೆಗ್ಡೆ ಉಪಸ್ಥಿತರಿದ್ದರು.