ಮಂಗಳೂರು: ರಾಜ್ಯದಿಂದ ರಫ್ತಾಗುವ ಮೀನಿಗೆ ಫಾರ್ಮಾಲಿನ್ ಬೆರೆಸಲಾಗುತ್ತದೆ ಎಂದು ಗೋವಾ ಸರಕಾರ ಕರ್ನಾಟಕದಿಂದ ಮೀನು ಅಮದಿಗೆ ನಿಷೇದ ಹೇರಿತ್ತು ಈ ವಿಚಾರಕ್ಕೆ ಸಂಬಂಧಿಸಿದಂತೆ ಕರಾವಳಿಯ ಸಂಸದರು ಬಿಜೆಪಿ ಶಾಸಕರು ಹಾಗೂ ಮೀನುಗಾರಿಕಾ ಮುಖಂಡರು ಗೋವಾ ಸಚಿವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಗೋವಾ ಸ್ಪೀಕರ್ ಪ್ರಮೋದ್ ಸಾವಂತ್, ಆರೋಗ್ಯ ಸಚಿವ ವಿಶ್ವಜೀತ್ ಪಿ.ರಾಣೆ, ಮೀನುಗಾರಿಕ ಸಚಿವ ವಿನೋದ್ ಪಾಲಿನರ್ಸ್, ಅವರೊಂದಿಗೆ ಗೋವಾದಲ್ಲಿ ಮಂಗಳವಾರ ನಡೆದ ಮಹತ್ವದ ಮಾತುಕತೆಯಲ್ಲಿ ಗೋವಾ ಸರಕಾರ ಕೆಲವು ಷರತ್ತಗಳನ್ನು ಹೇಳಿದ್ದು ಅದನ್ನು ಕರ್ನಾಟಕ ನಿಯೋಗ ಒಪ್ಪಿಕೊಂಡಿದೆ.
ಮೀನು ಸಾಗಾಟವನ್ನು ಇನ್ಸುಲೇಟೆಡ್ ಮಾದರಿಯಲ್ಲಿಯೇ ತರಬೇಕು. ಮೀನು ಸಾಗಾಟ ಮಾಡುವಾಗ ಎಫ್.ಎಸ್.ಎಸ್.ಎ.ಐ ಪ್ರಮಾಣ ಪತ್ರ ತರಬೇಕು. ಎಂದು ಕೆಲವೊಂದು ಷರತ್ತನ್ನು ಗೋವಾ ಸರಕಾರ ಹೇರಿದೆ.
ತಾಜಾ ಮೀನು ವ್ಯಾಪಾರಸ್ಥರಿಗೆ ಯಾವುದೇ ತೊಂದರೆ ನೀಡುವುದಿಲ್ಲ. ಮುಂದಿನ 10-12 ದಿನಗಳೊಳಗೆ ಸಮಸ್ಯೆ ಪರಿಹರಿಸಲಾಗುವುದು ಎಂದು ಗೋವಾ ಸರಕಾರ ಭರವಸೆ ನೀಡಿದೆ.