Friday, November 22, 2024
ಸುದ್ದಿ

ಕಾರು, ಲಾರಿ ಮುಖಾಮುಖಿ ಡಿಕ್ಕಿ: ಚಾಲಕ ಅದ್ರಷ್ಟವಶಾತ್ ಅಪಾಯದಿಂದ ಪಾರು – ಕಹಳೆ ನ್ಯೂಸ್

ಬಂಟ್ವಾಳ: ಕಾರು ಮತ್ತು ಲಾರಿ ನಡುವೆ ನಡೆದ ಮುಖಾಮುಖಿ ಡಿಕ್ಕಿಯಿಂದಾಗಿ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡು ಕಾರು ಚಾಲಕ ಅದ್ರಷ್ಟವಶಾತ್ ಅಪಾಯದಿಂದ ಪಾರಾದ ಘಟನೆ ದರ್ಮಸ್ಥಳ ಮಂಗಳೂರು ರಸ್ತೆಯ ನಾವೂರ ಸಮೀಪ ಇಂದು ಬೆಳಿಗ್ಗೆ ನಡೆದಿದೆ.

ಬಂಟ್ವಾಳ ತಾಲೂಕಿನ ಪೋಯಿಲೋಡಿ ಹಳೆಹಳಗೇಟು ಎಂಬಲ್ಲಿ ಈ ಅಪಘಾತ ನಡೆದಿದೆ. ಈ ಘಟನೆಯಲ್ಲಿ ಕಾರುಚಾಲಕ ಲೋಕೇಶ್ ಸಣ್ಣಪುಟ್ಟ ಗಾಯಗಳೊಂದಿಗೆ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಲಾರಿ ಚಾಲಕ ಸುರೇಶ್ ದರ್ಮಸ್ಥಳ ಕಡೆಯಿಂದ ಬರುವ ವೇಳೆ ಮಂಗಳೂರು ಕಡೆಯಿಂದ ಬರುವ ಕಾರಿಗೆ ಮುಖಾಮುಖಿಯಾಗಿ ಡಿಕ್ಕಿಯಾಗಿದೆ.

ಬಂಟ್ವಾಳ ಟ್ರಾಫಿಕ್ ಎಸ್.ಐ.ಮಂಜುಳಾ ಮತ್ತು ಸಿಬ್ಬಂದಿಗಳು ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.