Tuesday, January 21, 2025
ಸುದ್ದಿ

ಸುಬ್ರಮಣ್ಯ ದೇವಾಲಯದಲ್ಲಿ ಕಳ್ಳರ ಹಾವಳಿ: ಕಳ್ಳರನ್ನು ಪತ್ತೆ ಹಚ್ಚಿ ಪೊಲೀಸರಿಗೊಪ್ಪಿಸಿದ ಸಿಬ್ಬಂದಿಗಳು – ಕಹಳೆ ನ್ಯೂಸ್

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ಇಂದು ಆಶ್ಲೇಷ ಪೂಜೆ ಇದ್ದ ಕಾರಣ ಅಧಿಕ ಸಂಖ್ಯೆಯಲ್ಲಿ ಭಕ್ತರ ಆಗಮನವಾಗಿತ್ತು. ಇದನ್ನೆ ಕಾದು ಕುಳಿತ ಕಳ್ಳರು ಭಕ್ತರ ನಡುವೆ ಹೋಗಿ ಪರ್ಸ್ ಎಗರಿಸಲು ಆರಂಭಿಸಿದ್ದಾರೆ.

ಇದನ್ನು ನೋಡಿದ ಸಿ.ಸಿ ಟಿ.ವಿ ಸಿಬ್ಬಂದಿ ವರ್ಗ ಕಳ್ಳರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಸಾಕಮ್ಮ ಎನ್ನುವ ವೃದ್ದ ಮಹಿಳೆಯು ಈ ಕೃತ್ಯವೆಸಗಿದ್ದಾರೆ ಎಂದು ತಿಳಿದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ವೃದ್ದ ಮಹಿಳೆ ಹಲವಾರು ಕಡೆಗಳಲ್ಲಿ ಕಳ್ಳತನ ಮಾಡಿದ್ದು ಯಾರ ಕೈಗೂ ಸಿಕ್ಕಿರಲಿಲ್ಲ. ಸುಬ್ರಹ್ಮಣ್ಯ ದೇವಾಲಯದ ಸಿ.ಸಿ ಟಿ.ವಿ ಸಿಬ್ಬಂದಿಗಳಾದ ಬೆಳ್ಳಿಯಪ್ಪ ಮತ್ತು ನಾಗರಾಜು ಸೇರಿ ಕಳ್ಳಿಯನ್ನು ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ, ಸುಬ್ರಹ್ಮಣ್ಯ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.