Tuesday, January 21, 2025
ಸುದ್ದಿ

ಜಿ.ಪಂ.ಇಂಜಿನಿಯರ್ ವರ್ಗಾವಣೆ: ವಾಪಾಸು ಕರೆಸಿಕೊಳ್ಳಲು ಒತ್ತಾಯ – ಕಹಳೆ ನ್ಯೂಸ್

ಬಂಟ್ವಾಳ: ಜಿ.ಪಂ.ಇಂಜಿನಿಯರ್ ವರ್ಗಾವಣೆ ಮಾಡಿದ್ದಾರೆ ಎಂಬ ಆರೋಪದ ಮೇಲೆ ಜಿ.ಪಂ.ಉಪವಿಭಾಗದ ಕಚೇರಿಯ ಮುಂಭಾಗದಲ್ಲಿ ಜಿ.ಪಂ.ಸದಸ್ಯ ತುಂಗಪ್ಪ ಬಂಗೇರ ಅವರ ನೇತ್ರತ್ವದಲ್ಲಿ ಧರಣಿ ಕುಳಿತುಕೊಂಡ ಘಟನೆ ನಡೆಯಿತು.

ಜಿಲ್ಲಾ ಪಂಚಾಯತ್ ಸದಸ್ಯ ತುಂಗಪ್ಪ ಬಂಗೇರ ಅವರ ಕ್ಷೇತ್ರದ ಸಂಗಬೆಟ್ಟು ವ್ಯಾಪ್ತಿಯ ಇಂಜಿನಿಯರ್ ಜಗದೀಶ ನಿಂಬಾಲ್ಕರ್ ಅವರನ್ನು ಕನ್ಯಾನ ಕರೋಪಾಡಿಯ ವ್ಯಾಪ್ತಿಯ ಕೊಳ್ನಾಡು ಜಿ.ಪಂ.ವ್ಯಾಪ್ತಿಗೆ ವರ್ಗಾವಣೆ ಗೊಳಿಸಿ, ಅಲ್ಲಿನ ಇಂಜಿನಿಯರ್ ಅಜಿತ್ ಅವರನ್ನು ಸಂಗಬೆಟ್ಟುವಿಗೆ ವರ್ಗಾವಣೆ ಮಾಡಿದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಜಿ.ಪಂ.ಉಪವಿಭಾಗ ದ ಕಚೇರಿ ಮುಂಭಾಗದಲ್ಲಿ ಧರಣಿ ಕುಳಿತರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮಾರ್ಚ್ ವರೆಗೆ ಜಗದೀಶ್ ಅವರನ್ನು ವಾಪಾಸು ಕರೆಸಿಕೊಳ್ಳುವ ಭರವಸೆ ನೀಡುವವರೆಗೆ ನಾವು ಧರಣಿಯಿಂದ ಹಿಂದೆ ಸರಿಯುದಿಲ್ಲ ಎಂದು ಜಿ.ಪಂ.ಸದಸ್ಯ ತುಂಗಪ್ಪ ಬಂಗೇರ ತಿಳಿಸಿದರು. ‌

ಈ ಸಂಧರ್ಭದಲ್ಲಿ ಪ್ರಮುಖರಾದ ದಿನೇಶ್ ಅಮ್ಟೂರು, ರಾಮ್ ದಾಸ್ ಬಂಟ್ವಾಳ, ಪ್ರಕಾಶ್ ಅಂಚನ್, ಪ್ರವೀಣ್ ತುಂಬೆ, ಗೋಪಾಲ ಸುವರ್ಣ, ಸುರೇಶ್ ಕುಲಾಲ್ ಮತ್ತಿತರರು ಉಪಸ್ಥಿತರಿದ್ದರು.

ನಮ್ಮ ಗ್ರಾಮದ ಅಭಿವೃದ್ಧಿ ಮುಖ್ಯ ಹಾಗಾಗಿ ಇಂಜಿನಿಯರ್ ವಾಪಾಸು ಕರೆಸಿಕೊಳ್ಳದೆ ನನಗೆ ನ್ಯಾಯ ಸಿಗದೆ ಇದ್ದರೆ ಅರೆಬೆತ್ತಲೆಯಾಗಿ ಪ್ರತಿಭಟನೆ ಮಾಡುತ್ತೇನೆ ಎಂದು ಎಚ್ಚರಿಕೆಯನ್ನು ಜಿ.ಪಂ.ಸದಸ್ಯ ತುಂಗಪ್ಪ ಬಂಗೇರ ಎಚ್ಚರಿಕೆ ನೀಡಿದರು.