Recent Posts

Monday, April 14, 2025
ಸುದ್ದಿ

Big Breaking News: ಯುವತಿಯನ್ನು ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಿಸಿ, ಖುರಾನ್ ಪಠಣ ಮಾಡ್ಸಿ ಡಿವೋರ್ಸ್ ಕೊಟ್ಟ ಪತಿರಾಯ – ಕಹಳೆ ನ್ಯೂಸ್

ತುಮಕೂರು: ಚಿಕ್ಕಪೇಟೆ ನಿವಾಸಿ ದಿವ್ಯಾ(ಹೆಸರು ಬದಲಾಯಿಸಲಾಗಿದೆ) ಎಂಬ ಯುವತಿಯನ್ನು ಕ್ಯಾತಸಂದ್ರ ನಿವಾಸಿ ಮೊಹಮ್ಮದ್ ಅತಿಕ್ ಮತಾಂತರ ಮಾಡಿಸಿ ಮದುವೆಯಾಗಿ ಈಗ ಕೈ ಕೊಟ್ಟಿದ್ದಾನೆ.

ಬಡ ಹಿಂದೂ ಯುವತಿಯನ್ನು ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿ, ಖುರಾನ್ ಪಠಣ ಮಾಡಿಸಿದ್ದಾನೆ. ಅಲ್ಲದೇ ಮದುವೆಯಾಗಿ ಎರಡು ವರ್ಷ ಕಳೆದ ಬಳಿಕ ನೀನು ನನಗೆ ಬೇಡ ಎಂದು ಪತಿರಾಯನೊಬ್ಬ ಡಿವೋರ್ಸ್ ನೋಟಿಸ್ ಕೊಟ್ಟ ಪ್ರಕರಣವೊಂದು ತುಮಕೂರಿನಲ್ಲಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ತುಮಕೂರು ನಗರದಲ್ಲಿದ್ದ ಮೊಹಮ್ಮದ್ ಅತಿಕ್ ನ ಬಳೆ ಅಂಗಡಿಯಲ್ಲಿ ರಮ್ಯಾ ಕೆಲಸ ಮಾಡುತ್ತಿದ್ದಳು. ದಿವ್ಯಾ ಬಡತನವನ್ನೇ ಬಂಡವಾಳ ಮಾಡಿಕೊಂಡ ಅತಿಕ್ ಇಸ್ಲಾಂ ಧರ್ಮಕ್ಕೆ ಬಂದರೆ ನಿನಗೆ ಒಳ್ಳೆದಾಗತ್ತೆ. ನಾನು ನಿನ್ನನ್ನು ಮದುವೆಯಾಗಿ ನಿನ್ನ ತಂದೆ-ತಾಯಿಯನ್ನು ಸಾಕ್ತೀನಿ ಎಂದು ಪುಸಲಾಯಿಸಿದ್ದಾನೆ. ದಿವ್ಯಾಳ ತಂದೆ-ತಾಯಿಗೂ ಗೊತ್ತಿಲ್ಲದೆ ಆಂಧ್ರದ ಮದರಸಾದಲ್ಲಿ ಎರಡು ವರ್ಷಗಳ ಕಾಲ ಖುರಾನ್ ಪಠಣ ಮಾಡಿಸಿದ್ದಾನೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅತಿಕ್, ದಿವ್ಯಾ ಹೆಸರನ್ನು ಸುಮಯಾ ಫರ್ವಿನ್ ಎಂದು ಬದಲಾಯಿಸಿದ್ದಾನೆ. ಬಳಿಕ 2016 ರಲ್ಲಿ ಈಕೆಯನ್ನು ಮದುವೆಯಾಗಿದ್ದಾನೆ. ನಂತರ ಖುರಾನ್ ಅಭ್ಯಾಸಕ್ಕಾಗಿ ಆಂಧ್ರಕ್ಕೆ ಕಳುಹಿಸಿದ್ದಾನೆ. ಈ ನಡುವೆ ಎರಡನೇ ಮದುವೆಯಾದ ಅತಿಕ್ ಈಗ ದಿವ್ಯಾಳಿಗೆ ಕೈ ಕೊಟ್ಟಿದ್ದಾನೆ.

ನೀನು ನನಗೆ ಬೇಡ ಎಂದು ದಿವ್ಯಾಳಿಗೆ ಅತಿಕ್ ಡಿವೋರ್ಸ್ ನೋಟಿಸ್ ತಲುಪಿಸಿದ್ದಾನೆ. ಅತ್ತ ತವರು ಮನೆಯಲ್ಲಿ ಯಾರೂ ಸೇರಿಸಿಕೊಳ್ಳದೆ, ಇತ್ತ ಮದುವೆಯಾದ ಗಂಡನಿಂದಲೂ ತಿರಸ್ಕಾರಕೊಳಗಾದ ದಿವ್ಯಾ ಈಗ ಬೀದಿಗೆ ಬಂದಿದ್ದಾಳೆ.

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ