Monday, January 20, 2025
ಕ್ರೀಡೆಸುದ್ದಿ

ರಾಷ್ಟ್ರ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾದ ಬೆಳ್ತಂಗಡಿ ತಾಲೂಕಿನ ಸರ್ಕಾರಿ ಶಾಲೆ ಬಂದಾರು – ಕಹಳೆ ನ್ಯೂಸ್

ಬೆಳ್ತಂಗಡಿ: ಪ್ರಾಥಮಿಕ ಮತ್ತು ಫ್ರೌಢ ಶಾಲಾ ವಿಭಾಗದಲ್ಲಿ 14 ಮತ್ತು 17 ವಯೋಮಾನದ ಬಾಲಕ ಮತ್ತು ಬಾಲಕಿಯರ ವಾಲಿಬಾಲ್ ಪಂದ್ಯಾಟವು ಆದಿ ಚುಂಚನಗಿರಿ ಕ್ರೀಡಾಂಗಣ ಶರಾವತಿ ನಗರ ಶಿವಮೊಗ್ಗದಲ್ಲಿ ನಡೆದಿದ್ದು, ಮೈಸೂರು ವಿಭಾಗವನ್ನು ಪ್ರತಿನಿಧಿಸಿದ ದಕ್ಷಿಣ ಕನ್ನಡ ಬೆಳ್ತಂಗಡಿ ತಾಲೂಕಿನ ಸರ್ಕಾರಿ ಉನ್ನತೀಕರಿಸಿದ ಶಾಲೆ ಬಂದಾರಿನ 14 ರ ವಯೋಮಾನದ ಬಾಲಕಿರ ತಂಡವು ಪ್ರಥಮ ಸ್ಧಾನವನ್ನು ಪಡೆದುಕೊಂಡಿದೆ.

ಜನವರಿ ಪ್ರಥಮ ವಾರದಲ್ಲಿ ಆಂದ್ರಪ್ರದೇಶದಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತದೆ. ವಿಜೇತ ತಂಡವು ಪ್ರಥಮ ಪಂದ್ಯಾದಲ್ಲಿ ಬೆಂಗಳೂರು ವಿಭಾಗವನ್ನು, ದ್ವೀತಿಯ ಪಂದ್ಯದಲ್ಲಿ ಗುಲ್ಬರ್ಗ ವಿಭಾಗವನ್ನು, ಅಂತಿಮ ಪಂದ್ಯಾದಲ್ಲಿ ಬಲಿಷ್ಟ ಬೆಳಗಾವಿ ವಿಭಾಗವನ್ನು ನೇರ ಸೆಟ್‌ಗಳಲ್ಲಿ ಮಣಿಸಿ, ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ತಂಡದಲ್ಲಿ ಆಶ್ವಿನಿ.ಕೆ ಉತ್ತಮ ಹೊಡೆತ ಗಾರ್ತಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಪ್ರಶಾಂತ್ ಈ ತಂಡದ ತರಭೇತುದಾರರಾಗಿದ್ದು, ಕುಮಾರಿ ರೇಖಾ, ಮತ್ತು ಮುಂಜಿಶೀ ಇವರಿಗೆ ಪ್ರತಿ ಹಂತದಲ್ಲೂ ಸಹಕಾರವನ್ನು ನೀಡಿರುತ್ತಾರೆ.