Recent Posts

Monday, January 20, 2025
ಸುದ್ದಿ

79ನೇ ಅಖಿಲ ಭಾರತ ಅಂತರ್ ವಿವಿ ಅಥ್ಲೆಟಿಕ್ ಚಾಂಪಿಯನ್‍ಷಿಪ್ – ಕಹಳೆ ನ್ಯೂಸ್

ಮೂಡಬಿದಿರೆ: “ನಮ್ಮ ದೇಶದ ಯುವಕರಲ್ಲಿ ಕ್ರೀಡೆಯಲ್ಲಿ ಮಹತ್ತರವಾದದನ್ನು ಸಾಧಿಸುವ ಸಾಮಥ್ರ್ಯವಿದೆ. ಆದರೆ ಅದಕ್ಕೆ ಅಗತ್ಯವಿರುವ ಪ್ರೋತ್ಸಾಹ ಮತ್ತು ಬೆಂಬಲ ದೊರೆಯುತ್ತಿಲ್ಲವಷ್ಟೇ” ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಪ್ರೊ. ಯಶೋವರ್ಮ ಅಭಿಪ್ರಾಯಪಟ್ಟರು.

ಮೂಡಬಿದಿರೆಯಲ್ಲಿ ಮಂಗಳೂರು ವಿವಿ ಮತ್ತು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಂಯುಕ್ತ ಆಶ್ರಯದಲ್ಲಿ ಬುಧವಾರ ಸಮಾಪ್ತಿಗೊಂಡ 79ನೇ ಅಖಿಲ ಭಾರತ ಅಂತರ್ ವಿವಿ ಅಥ್ಲೆಟಿಕ್ ಚಾಂಪಿಯನ್‍ಷಿಪ್‍ನಲ್ಲಿ ಮುಖ್ಯ ಅತಿಥಿಯಾಗಿದ್ದ ಅವರು ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

“ಪ್ರತೀ ಬಾರಿ ಅಂತರಾಷ್ಟ್ರೀಯ ಮಟ್ಟದಲ್ಲಿ ನಮ್ಮ ದೇಶದ ಕ್ರೀಡಾ ಸಾಧನೆಯನ್ನು, ಇಲ್ಲಿನ ಜನಸಂಖ್ಯೆಯ ಆಧಾರದಲ್ಲಿ ವಿಶ್ಲೇಷಿಸಲಾಗುತ್ತದೆ. ಆದರೆ ಇದು ಸರಿಯಾದ ರೀತಿಯಲ್ಲ. ಕ್ರೀಡಾ ಪರಿಷ್ಕರಣೆ ಎಷ್ಟು ಮಂದಿ ಯುವಕರು ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಎಂಬುದರ ಮೇಲೆ ನಿರ್ಧಾರವಾಗುತ್ತದೆ. ಈ ನಿಟ್ಟಿನಲ್ಲಿ ಗಮನಿಸಿದಾಗ ನಾವು ಬೆಳೆಯಬೇಕಿರುವುದು ಸಾಕಷ್ಟಿದೆ” ಎಂದು ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

“ಡಾ. ಎಂ. ಮೋಹನ್ ಆಳ್ವ ಮಬ್ಬುಗಟ್ಟಿರುವ ನಮ್ಮ ಕ್ರೀಡೋತ್ಸಾಹದ ಮರುಭೂಮಿಯ ಒಯಾಸಿಸ್ ಇದ್ದಂತೆ. ಒಂದು ಕ್ರೀಡಾಕೂಟವನ್ನು ಇಷ್ಟು ಅಚ್ಚುಕಟ್ಟಾಗಿ ಆಯೋಜಿಸುವುದು ಸುಲಭವಲ್ಲ. ಆದರೆ ಆಳ್ವರು ಅದನ್ನು ಸಾಧಿಸಿ ತೋರಿಸಿದ್ದಾರೆ. ತಮ್ಮ ಸಂಸ್ಥೆಯಲ್ಲೂ ಸಹ ನೂರಾರು ಮಕ್ಕಳಿಗೆ ಉಚಿತವಾಗಿ ಕ್ರೀಡಾ ತರಬೇತಿಯನ್ನು ನೀಡುತ್ತಿರುವುದು ಶ್ಲಾಘನೀಯ ಸಂಗತಿ” ಎಂದು ತಿಳಿಸಿದರು.

ಕ್ರೀಡಾಕೂಟದ ಕಾರ್ಯಕಾರಿ ಅಧ್ಯಕ್ಷ ಮತ್ತು ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಮಾತನಾಡಿ “ನಮ್ಮದು ಯುವ ಪ್ರಧಾನ ರಾಷ್ಟ್ರ ಎಂದು ಹೇಳಿಕೊಳ್ಳಲಾಗುತ್ತದೆ. ಆದರೆ ಇಂಥಹ ಶ್ರೇಷ್ಠ ಯುವಶಕ್ತಿ ಎಷ್ಟರ ಮಟ್ಟಿಗೆ ಒಳ್ಳೆಯ ರೀತಿಯಲ್ಲಿ ಬಳಕೆಯಗಿತ್ತಿದೆ ಎಂಬುದು ಇಲ್ಲಿ ಮುಖ್ಯ. ನಮ್ಮ ದೇಶದ ಚುಕ್ಕಾಣಿ ಹಿಡಿದಿರುವವರು, ನಮ್ಮ ಯುವಶಕ್ತಿಯನ್ನು ಭಾವನಾತ್ಮಕವಾಗಿ ಬೆಳೆಸುವ ಕಾರ್ಯದಲ್ಲಿ ತೊಡಗಿದೆ. ಆದರೆ ನಾನಿಂದು ಹೇಳುತ್ತೇನೆ, ಅವರನ್ನು ಭಾವನಾತ್ಮಕವಾಗಿ ಅಲ್ಲ, ಬದಲಿಗೆ ಕ್ರಿಯಾತ್ಮಕ ರೀತಿಯಲ್ಲಿ ರೂಪಿಸಿ” ಎಂದು ತಿಳಿಸಿದರು.

“ನಮ್ಮ ದೇಶದ ಯುವಕರ ಸಂಖ್ಯೆ ಸುಮರು 20 ಕೋಟಿಯಷ್ಟಿದೆ. ಆದರೆ ಸಾಂಸ್ಕತಿಕ, ಕ್ರೀಡೆ, ಎನ್‍ಸಿಸಿ, ಎನ್‍ಎಸ್‍ಎಸ್ ಈ ಎಲ್ಲಾ ಆಯಾಮಗಲ್ಲಿ ಚಿಂತಿಸಿದಾಗ ಸಾಮಥ್ರ್ಯವಿದ್ದರೂ ಅವರು ಅಂತರಾಷ್ಟ್ರೀಯ ಮಟ್ಟದಲ್ಲಿ ಸೋಲುತ್ತಿದ್ದಾರೆ. ಇದಕ್ಕೆ ಕಾರಣ ನಮ್ಮಲ್ಲಿನ ಪ್ರೋತ್ಸಾಹದ ಮನಸ್ಸುಗಳ ಕೊರತೆ ಮತ್ತು ಸರ್ಕಾರದ ನಿಷ್ಕಾಳಜಿ. ವೋಟಿಗಾಗಿ ಸಾಕಷ್ಟು ನಾಟಕ ಮಾಡುವ ನಮ್ಮ ರಾಜಕಾರಣಿಗಳು, ಅಧಿಕಾರ ಹಿಡಿದಾಗ ಯುವಕರ ಬೆಳವಣಿಗೆಗೆ ಶ್ರಮಿಸುವಿದಿಲ್ಲ. ಬದಲಿಗೆ ಅವರನ್ನು ದೂರುವ ಕೆಲಸದಲ್ಲಿ ತೊಡಗುತ್ತಾರೆ. ಇಂಥಹ ಸರ್ಕಾರಗಳಿಗೆ ಯುವಕರ ಬಗ್ಗೆ ಮಾತನಾಡುವ ಯಾವ ನೈತಿಕತೆಯೂ ಇಲ್ಲ” ಎಂದು ಕಿಡಿಕಾರಿದರು.

“ಈ ಎಲ್ಲಾ ಆಯಾಮಗಳನ್ನು ಪರಿಗಣಿಸಿಯೇ ನಮ್ಮ ಸಂಸ್ಥೆಯಲ್ಲಿ ಉಚಿತವಾಗಿ ತರಬೇತಿ ನೀಡುವ ಕೆಲಸ ಮಾಡಲಾಗುತ್ತಿದೆ. ಅವರಿಗೆ ಸೂಕ್ತ ರೀತಿಯ ಪ್ರೋತ್ಸಾಹ, ಮಾರ್ಗದರ್ಶನ ಖಂಡಿತ ದೊರೆಯಬೇಕು” ಎಂದು ಹೇಳಿದರು.
ಮಾಜಿ ಸಚಿವ ಅಭಯಚಂದ್ರ ಜೈನ್ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ವಿವಿಯ ದೈಹಿಕ ನಿರ್ದೇಶಕ ಡಾ ಕಿಶೋರ್ ಕುಮಾರ್ ವಂದಿಸಿದರು. ಮಾಜಿ ಕ್ರೀಡಾಪಟು ಸುಕುಮಾರನ್, ಅಖಿಲ ಭಾರತ ಕ್ರೀಡಾ ವೀಕ್ಷಕರಾದ ಎಸ್. ಆರ್.ಎಮ್ ವಿವಿಯ ಕ್ರೀಡಾ ನಿರ್ದೇಶಕ ಪ್ರೊ. ಕೆ. ವೈದ್ಯನಾಥನ್, ಮದ್ರಾಸ್ ವಿವಿಯ ಕ್ರೀಡಾ ನಿರ್ದೇಶಕ ಡಾ. ವಿ. ಮಹಾದೇವನ್ ಹಾಗೂ ಜೈಪುರದ ಮಣಿಪಾಲ ವಿವಿಯ ಕ್ರೀಡಾ ನಿರ್ದೇಶಕಿ ಡಾ. ರೀನಾ ಪೂನಿಯಾ ಉಪಸ್ಥಿತರಿದ್ದರು.

ಹ್ಯಾಟ್ರಿಕ್ ಸಾಧನೆ
ಮಂಗಳೂರು ವಿವಿ ಸತತ ಮೂರನೇ ಬಾರಿಗೆ ಸಮಗ್ರ ವೀರಾಗ್ರಣಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಜತೆಗೆ ಕಳೆದ ಬಾರಿಯ 179 ಅಂಕಗಳ ಸಾಧನೆಯನ್ನು, ಈ ಬಾರಿ 188 ಅಂಕ ಗಳಿಸುವ ಮೂಲಕ ಸರಿಗಟ್ಟಿತು. ಕೊಟ್ಟಾಯಮ್‍ನ ಮಹಾತ್ಮ ಗಾಂಧಿ ವಿವಿ 109 ಅಂಕಗಳೊಂದಿಗೆ ರನ್ನರ್ ಅಪ್ ಆಗಿ ಹೊರಹೊಮ್ಮಿತು.

ಪುರುಷ ಮತ್ತು ಮಹಳೆಯರ ವಿಭಾಗದಲ್ಲಿ ಮಂಗಳೂರು ವಿವಿ ಪ್ರಥಮ, ಕೊಟ್ಟಾಯಮ್‍ನ ಮಹಾತ್ಮ ಗಾಂಧಿ ವಿವಿ ದ್ವಿತೀಯ ಹಾಗೂ ಕ್ಯಾಲಿಕಟ್ ವಿವಿ ತೃತೀಯ ಸ್ಥಾನಕ್ಕೆ ಭಾಜನವಾಯಿತು. ತಿರುಚಿರಪಳ್ಳಿಯ ಭಾರತಿದಾಸ್ ವಿವಿಯ ಎಸ್. ಧನಲಕ್ಷ್ಮೀ ಶ್ರೇಷ್ಠ ಮಹಿಳಾ ಕ್ರೀಡಾಪಟುವಾದರೆ, ಮುಂಬೈ ವಿವಿ ಜೈ ಷಾ ಶ್ರೇಷ್ಠ ಪುರುಷ ಕ್ರೀಡಾಪಟುವಾಗಿ ಹೊರಹೊಮ್ಮಿದರು.

ಇದೇ ಸಂದರ್ಭದಲ್ಲಿ ಮಂಗಳೂರು ವಿವಿಯ ಹೆಮ್ಮೆಯ ಕ್ರೀಡಾಪಟುಗಳಾದ ಪ್ರವೀಣ್ ಚಿತ್ರವೇಲ್(1,00,000 ರೂ ನಗದು ಬಹುಮಾನ ಸಹಿತ), ಇಲಕ್ಯಾದಾಸನ, ಅಭಿನಯ ಶೆಟ್ಟಿ ಹಾಗೂ ಪ್ರಜ್ವಲ್ ಮಂದಣ್ಣರನ್ನು ಸನ್ಮಾನಿಸಲಾಯಿತು. ಇದೇ ವೇಳೆ ರೀಯೋ ಒಲಂಪಿಕ್ಸ್‍ನ 4*400 ಮೀ ರಿಲೇಯಲ್ಲಿ ಭಾಗಿಯಾಗಿದ್ದ ಕ್ಯಾಲಿಕಟ್ ವಿವಿಯ ಜಿಷ್ಣ ಮ್ಯಾಥಿವ್‍ರನ್ನು ಸಮ್ಮಾನಿಸಲಾಯಿತು.

ಮೋಹನ್ ಆಳ್ವರಿಗೆ ಗೌರವ
ಮಂಗಳೂರು ವಿವಿಯ ವತಿಯಿಂದ ಕ್ರೀಡಾಕೂಟಯ ಆಯೋಜನೆಯಲ್ಲಿ ಎಲ್ಲಾ ರೀತಿಯಿಂದಲೂ ಪ್ರೋತ್ಸಾಹ ಮತ್ತು ಬೆಂಬಲ ನೀಡಿದ ಡಾ. ಎಂ. ಮೋಹನ್ ಆಳ್ವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸರ್ಕಾರದಲ್ಲಿ ನಾನಿಲ್ಲದಿದ್ದರೂ, ಕ್ರೀಡೆಯ ಬೆಳವಣಿಗೆಗಾಗಿ ಅಗತ್ಯವಿರುವ ಎಲ್ಲಾ ಅನುದಾನವನ್ನು ಕೊಡಿಸುವ ಜವಾಬ್ದಾರಿ ನನ್ನದು”- ಅಭಯಚಂದ್ರ ಜೈನ್

79 ನೇ ಅಖಿಲ ಭಾರತ ಅಂತರ ವಿವಿ ಅಥ್ಲೆಟಿಕ್ ಚಾಂಪಿಯನ್‍ಷಿಪ್, ಫಲಿತಾಂಶ
ಶ್ರೇಷ್ಠ ಕ್ರೀಡಾಪಟು (ಮಹಿಳೆ)
ಧನಲಕ್ಷ್ಮಿ ಎಸ್ ಭಾರತಿಯಾರ್ ವಿವಿ, ತಿರುಚಿರಾಪಳ್ಳಿ
200 ಮೀ ಓಟ 23.24 ಸೆಕೆಂಡ್ಸ್-1121 ಪಾಯಿಂಟ್ಸ್
ಶ್ರೇಷ್ಠ ಕ್ರೀಡಾಪಟು (ಪುರುಷ)
ಶಾ. ಜೈ ಪ್ರದೀಪ್, ಮುಂಬೈ ವಿವಿ, ಮಹರಾಷ್ಟ್ರ
ತ್ರಿಪಲ್ ಜಂಪ್- 16.36 ಮೀಟರ್- 1086 ಪಾಯಿಂಟ್ಸ್
ಸಮಗ್ರ ಪ್ರಶಸ್ತಿ (ಮಹಿಳೆ)
1. ಮಂಗಳೂರು ವಿವಿ- 78 ಪಾಯಿಂಟ್ಸ್
2. ಮಹಾತ್ಮಾ ಗಾಂಧಿ ವಿವಿ- 74 ಪಾಯಿಂಟ್ಸ್
3. ಕ್ಯಾಲಿಕಟ್ ವಿವಿ- 33 ಪಾಯಿಂಟ್ಸ್
ಸಮಗ್ರ ಪ್ರಶಸ್ತಿ( ಪುರುಷ)
1. ಮಂಗಳೂರು ವಿವಿ- 110 ಪಾಯಿಂಟ್ಸ್
2. ಮಹಾತ್ಮಾ ಗಾಂಧಿ ವಿವಿ, ಕೊಟ್ಟಾಯಂ- 47 ಪಾಯಿಂಟ್ಸ್
3. ಕ್ಯಾಲಿಕಟ್ ವಿವಿ- 36 ಪಾಯಿಂಟ್ಸ್
ಸಮಗ್ರ ಪ್ರಶಸ್ತಿ
ಮಂಗಳೂರು ವಿವಿ- 188 ಪಾಯಿಂಟ್ಸ್
ರನ್ನರ್ಸ್ ಅಪ್
ಮಹಾತ್ಮಾ ಗಾಂಧಿ ವಿವಿ, ಕೊಟ್ಟಾಯಂ
ನೂತನ ಕೂಟ ದಾಖಲೆಗಳು 13
ನಗದು ಪುರಸ್ಕಾರ
ಪ್ರಥಮ ಸ್ಥಾನ- ರೂ.20,000
ದ್ವಿತೀಯ ಸ್ಥಾನ- ರೂ 15,000
ತೃತೀಯ ಸ್ಥಾನ- ರೂ 10,000
ನೂತನ ಕೂಟ ದಾಖಲೆ- ರೂ 25,000
28-11-2018 (ವಿಜೇತರ ಪಟ್ಟಿ)
ಹಾಫ್ ಮ್ಯಾರಥಾನ್ (ಪುರುಷರ ವಿಭಾಗ)
1. ಅನಿಲ್‍ಕುಮಾರ್- ಮಂಗಳೂರು ವಿಶ್ವವಿದ್ಯಾಲಯ-ಆಳ್ವಾಸ್ ಕಾಲೇಜು- 1:08:23.79
2. ರವೀಂದ್ರ ಕುಮಾರ್- ಪಂಜಾಬ್ ವಿಶ್ವವಿದ್ಯಾಲಯ, ಚಂಡೀಘರ್-1:08:24.80
3. ಕುಶ್ಮೇಶ್‍ಕುಮಾರ್- ಮಂಗಳೂರು ವಿಶ್ವವಿದ್ಯಾಲಯ-ಆಳ್ವಾಸ್ ಕಾಲೇಜು-1:08:49.45
ಹಾಫ್ ಮ್ಯಾರಥಾನ್ (ಮಹಿಳೆಯರ ವಿಭಾಗ)
1.ನಿಖಿತಾ ರಾವತ್- ಆರ್‍ಟಿಎಮ್ ನಾಗ್ಪುರ್ ವಿಶ್ವವಿದ್ಯಾಲಯ- 1:19:39.38
2.ರೇಣು- ಚೌಧರಿ ರಣ್‍ಬೀರ್‍ಸಿಂಗ್ ವಿಶ್ವವಿದ್ಯಾಲಯ, ಜಿಂದ್, ಹರ್ಯಾಣ್ -1:21:07.90
3.ದಿವ್ಯಾಂಕಾ ಚೌಧರಿ- ಪಂಜಾಬ್ ವಿಶ್ವವಿದ್ಯಾಲಯ, ಚಂಡೀಘರ್- 1:22:57.30
ಹ್ಯಾಮರ್ ಥ್ರೋ (ಪುರುಷರ ವಿಭಾಗ)
1. ಪ್ರದೀಪ್ ಕುಮಾರ್- ಮಹಾರಾಜ ಗಂಗಾ ಸಿಂಗ್ ವಿವಿ, ಬಿಕಾನೇರ್- 63.11 ಮೀಟರ್
2. ಗುರುಕೀರತ್ ಸಿಂಗ್ – ಗುರುನಾನಕ್ ದೇವ್ ವಿವಿ, ಅಮೃತಸರ್ – 62.11 ಮೀಟರ್
3. ಸುಮಿತ್ – ಮಹರ್ಷಿ ದಯಾನಂದ ವಿವಿ, ರೋಟಕ್ – 61.54 ಮೀಟರ್
ಪೋಲ್ ವಾಲ್ಟ್ (ಮಹಿಳೆಯರ ವಿಭಾಗ)
1. ಮರಿಯಾ ಜಯ್‍ಸನ್ – ಜೈನ್ ವಿವಿ, ಬೆಂಗಳೂರು- 3.80 ಮೀಟರ್ (ಕೂಟ ದಾಖಲೆ, 1 ತಪ್ಪು)
2. ಈ. ಬರಾನಿಕಾ – ಮದ್ರಾಸ್ ವಿವಿ, ಚೆನೈ – 3.80 ಮೀಟರ್ (2 ತಪ್ಪು)
3. ದಿವ್ಯ ಮೋಹನ್ – ಮಹಾತ್ಮ ಗಾಂಧಿ ವಿವಿ, ಕೊಟ್ಟಾಯಮ್ – 3.35 ಮೀಟರ್
ಹೈ ಜಂಪ್- ಎತ್ತರ ಜಿಗಿತ (ಪುರುಷರ ವಿಭಾಗ)
1. ಜೆ ಆದರ್ಶರಾಮ್ – ಕಾರುಣ್ಯ ವಿವಿ, ತಮಿಳುನಾಡು- 2.14 ಮೀಟರ್
2. ಮನು ಫ್ರಾನ್ಸಿಸ್ – ಮಹಾತ್ಮ ಗಾಂಧಿ ವಿವಿ, ಕೊಟ್ಟಾಯಮ್ – 2.11 ಮೀಟರ್
3. ವೀರಮಣಿ ಎಸ್- ಭಾರತೀದಾಸನ್ ವಿವಿ- 2.08 ಮೀಟರ್
ಹ್ಯಾಮರ್ ಥ್ರೋ (ಮಹಿಳೆಯರ ವಿಭಾಗ)
1. ಕೆ.ಎಮ್ ರಿತು ಧಿಮಾನ್- ಮಂಗಳೂರು ವಿವಿ- 61.93 ( ಕೂಟ ದಾಖಲೆ)
2. ರಂಜು ದೇವಿ- ಪಂಜಾಬ್ ಕೃಷಿ ವಿವಿ- 52.06
3. ವೇದ್‍ಫಾಟಕ್ ಸುರಭ್- ಸಾವಿತ್ರಿ ಬಾಯಿ ಫುಲೆ ವಿವಿ, ಪುಣೆ- 50.52
3000 ಮೀಟರ್ ಸ್ಟ್ರಿಪಲ್ ಚೇಸ್ (ಪುರುಷರ ವಿಭಾಗ)
1. ಬಿಬಿನ್ ಜಾರ್ಜ್- ಕಾಲಿಕಟ್ ವಿವಿ- 9:17.85
2. ಎಂ ರವಿಕುಮಾರ್- ಭಾರತಿಯಾರ್ ವಿವಿ- 9:17.90
3. ಲಿಲಾಕೆ ದಿನ್‍ಕರ್- ಸಾವಿತ್ರಿ ಬಾಯಿ ಫುಲೆ ವಿವಿ, ಪುಣೆ- 9:20.65
3000 ಮೀಟರ್ ಸ್ಟ್ರಿಪಲ್ ಚೇಸ್ (ಮಹಿಳೆಯರ ವಿಭಾಗ)
1. ಶೀತಲ್ ಭಗತ್- ಮಂಗಳೂರು ವಿವಿ- 10:34.53 (ಕೂಟ ದಾಖಲೆ)
2. ಜ್ಯೋತಿ ಚೌಹಾಣ್- ಮಂಗಳೂರು ವಿವಿ-10:35.32 (ಕೂಟ ದಾಖಲೆ)
3. ಕೋಮಲ್ ಜಗದಾಲೆ- ಸಾವಿತ್ರಿ ಬಾಯಿ ಫುಲೆ ವಿವಿ, ಪುಣೆ-10:38.45
ಶೀತಲ್ ಭಗತ್ ಆಳ್ವಾಸ್‍ನಲ್ಲಿ ಬಿ.ಎ ಮೊದಲ ವರ್ಷ. ಓಪನ್ ನ್ಯಾಷಿನಲ್ ಅಥ್ಲೆಟಿಕ್ ಚಾಂಪಿಯನ್‍ಷಿಪ್ 2017, ಪಟಿಯಾಲದಲ್ಲಿ ಭಾಗಿ. 78ನೇ ಅಖಿಲ ಭಾರತ ಅಂತರ್- ವಿವಿ ಅಥ್ಲೆಟಿಕ್ ಕೂಟದಲ್ಲಿ 8ನೇ ಸ್ಥಾನ.
ಜ್ಯೋತಿ ಚೌಹಾಣ್ ಆಳ್ವಾಸ್‍ನಲ್ಲಿ ಬಿಪಿ. ಎಡ್ ವ್ಯಾಸಂಗ. 78ನೇ ಅಖಿಲ ಭಾರತ ಅಂತರ್- ವಿವಿ ಅಥ್ಲೆಟಿಕ್ ಕೂಟದಲ್ಲಿ ಚಿನ್ನ. 2017ರಲ್ಲಿ ಪಟಿಯಾಲದಲ್ಲಿ ನಡೆದ ನ್ಯಾಷಿನಲ್ ಫೆಡರೇಷನ್ ಕಪ್‍ನಲ್ಲಿ 4ನೇ ಸ್ಥಾನ. 2017ನಲ್ಲಿ ಕಲಬುರ್ಗಿಯಲ್ಲಿ ನಡೆದ ಆಲ್ ಇಂಡಿಯಾ ಕ್ರಾಸ್ ಕಂಟ್ರಿ ಸ್ಪರ್ಧೆಯಲ್ಲಿ 2ನೇ ಸ್ಥಾನ.
ಲಾಂಗ್ ಜಂಪ್- ಉದ್ದ ಜಿಗಿತ (ಪುರುಷರ ವಿಭಾಗ)
1. ಮೊಹಮ್ಮದ್ ಅನೀಸ್ ವೈ- ಕ್ಯಾಲಿಕಟ್ ವಿವಿ-7.74 (ಕೂಟ ದಾಖಲೆ)
2. ಅಖಿಲ್ ಟಿ ವಿ- ಮಹಾತ್ಮ ಗಾಂಧಿ ವಿವಿ, ಕೊಟ್ಟಾಯಮ್- 7.54
3. ನಿರ್ಮಲ್ ಸಾಬುತ್- ಕೇರಳ ವಿವಿ- 7.52
ಮೊಹಮ್ಮದ್ ಅನೀಸ್ ವೈ, ಕೇರಳದ ಶ್ರೀಕೃಷ್ಣ ಕಾಲೇಜಿನಲ್ಲಿ 2ನೇ ವರ್ಷ ಬಿ ಎ ವ್ಯಾಸಂಗ. ಗ್ರ್ಯಾಂಡಪ್ರಿಕ್ಸ್ 2016ರಲ್ಲಿ ಉದ್ದ ಜಿಗಿತದಲ್ಲಿ ಮೂರನೇ ಸ್ಥಾನ. ಎನ್ ವಿ ನಿಶಿತ್ ಕುಮಾರ್ ಇವರ ತರಬೇತುದಾರ. 2102ರಿಂದ ಉದ್ದ ಜಿಗಿತ ಸ್ಪರ್ಧೆಗೆ ತರಬೇತಿ ಆರಂಭ. ಈ ಮುಂಚೆ ಅವರು ಎತ್ತರ ಜಿಗಿತ ಪಟುವಾಗಿದ್ದರು. ವಲ್ರ್ಡ್ ವಿವಿ ಚಾಂಪಿಯನ್‍ಷಿಪ್ (2017-18) ಭಾರತ ದೇಶವನ್ನು ಪ್ರತಿನಿಧಿಸಿದ್ದರು.
200 ಮೀಟರ್ ಓಟ (ಪುರುಷರ ವಿಭಾಗ)
1. ಮೊಹಮ್ಮದ್ ಅಜ್ಮಲ್ – ಮಹಾತ್ಮ ಗಾಂಧಿ ವಿವಿ, ಕೊಟ್ಟಾಯಮ್ – 21.01 ಸೆಕೆಂಡ್ಸ್
2. ಇಲಕ್ಯದಾಸನ ವಿ ಕೆ- ಮಂಗಳೂರು ವಿವಿ- 21. 18 ಸೆಕೆಂಡ್ಸ್
3. ಗುರುವೀಂದರ್ ಸಿಂಗ್- ಗುರುನಾನಕ್ ವಿವಿ- 21.38 ಸೆಕೆಂಡ್ಸ್
200 ಮೀಟರ್ ಓಟ (ಮಹಿಳೆಯರ ವಿಭಾಗ)
1. ಎಸ್. ಧನಲಕ್ಷ್ಮೀ – ಭಾರತೀದಾಸನ್ ವಿವಿ- 23.24 ಸೆಕೆಂಡ್ಸ್ (ಕೂಟ ದಾಖಲೆ)
2. ಸಿಮಿ – ಮಹಾತ್ಮ ಗಾಂಧಿ ವಿವಿ, ಕೊಟ್ಟಾಯಮ್- 23.60 ಸೆಕೆಂಡ್ಸ್
3. ವಿ ರೇವತಿ – ಮಧುರೈ ಕಾಮರಾ – 23.66 ಸೆಕೆಂಡ್ಸ್
ಎಸ್. ಧನಲಕ್ಷ್ಮೀ ಭಾರತೀದಾಸನ್ ವಿವಿಯಲ್ಲಿ ಎಂ.ಎ ವ್ಯಾಸಂಗ. ಇದು ಅವರ ಮೊದಲ ನ್ಯಾಷಿನಲ್ ಮೆಡಲ್. 2018ರಲ್ಲಿ ಭುವನೇಶ್ವರದಲ್ಲಿ ನಡೆದ ಓಪನ್ ಅಥ್ಲೆಟಿಕ್ ಚಾಂಪಿಯನ್‍ಷಿಪ್‍ನ ರಿಲೇ ಸ್ಪರ್ಧೆಯಲ್ಲಿ ಭಾಗಿ.
4*400 ಮೀಟರ್ ರಿಲೇ (ಪುರುಷರ ವಿಭಾಗ)
1. ಮಂಗಳೂರು ವಿವಿ- 3:12.24
2. ಮಹರ್ಷಿ ದಯಾನಂದ ಸರಸ್ವತಿ ವಿವಿ- 3:13.72
3. ಪಂಜಾಬ್ ವಿವಿ, ಪಂಜಾಬ್- 3.13.74
4*400 ಮೀಟರ್ ರಿಲೇ (ಮಹಿಳೆಯರ ವಿಭಾಗ)
1. ಕ್ಯಾಲಿಕಟ್ ವಿವಿ- 3:38.08 (ಕೂಟ ದಾಖಲೆ)
2. ಮಹಾತ್ಮ ಗಾಂಧಿ ವಿವಿ, ಕೊಟ್ಟಾಯಮ್- 3:40.04
3. ಮಂಗಳೂರು ವಿವಿ- 3:45.86
4*100 ಮೀಟರ್ ರಿಲೇ (ಪುರುಷರ ವಿಭಾಗ)
1. ಕ್ಯಾಲಿಕಟ್ ವಿವಿ- 40.88 ಸೆಕೆಂಡ್ಸ್
2. ಮಹಾತ್ಮ ಗಾಂಧಿ ವಿವಿ-41.04 ಸೆಕೆಂಡ್ಸ್
3. ಭಾರತಿದಾಸನ್ ವಿವಿ- 41.51 ಸೆಕೆಂಡ್ಸ್
4*100 ಮೀಟರ್ ರಿಲೇ (ಮಹಿಳೆಯರ ವಿಭಾಗ)
1. ಮಹಾತ್ಮ ಗಾಂಧಿ ವಿವಿ- 46.31 ಸೆಕೆಂಡ್ಸ್ (ಕೂಟ ದಾಖಲೆ)
2. ಮಂಗಳೂರು ವಿವಿ- 47.62 ಸೆಕೆಂಡ್ಸ್
3. ಮದ್ರಾಸ್ ವಿವಿ- 47.96 ಸೆಕೆಂಡ್ಸ್
ಕ್ರೀಡಾಕೂಟದಲ್ಲಿ ಆಳ್ವಾಸ್ ವಿದ್ಯಾರ್ಥಿಗಳ ಸಾಧನೆ
1. 3000 ಮೀಟರ್ ಸ್ಟೀಪಲ್ ಚೇಸ್ ಮಹಿಳೆಯರ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಶೀತಲ್ ಭಗತ್ ಹಾಗೂ ಬೆಳ್ಳಿ ಪದಕ ಗೆದ್ದ ಜ್ಯೋತಿ ಚೌಹಾಣ್ ಆಳ್ವಾಸ್‍ನ ವಿದ್ಯಾರ್ಥಿಗಳಾಗಿದ್ದಾರೆ.
2. ಹ್ಯಾಮರ್ ಥ್ರೋ ಮಹಿಳಾ ವಿಭಾಗದಲ್ಲಿ ಮಂಗಳೂರು ವಿವಿ ಪ್ರತಿನಿಧಿಸಿ ಸ್ವರ್ಣ ಪದಕ ಗೆದ್ದ ಕೆ.ಎಮ್ ರಿತು ಧಿಮಾನ್ 61.93 (ಕೂಟ ದಾಖಲೆ) ಆಳ್ವಾಸ್ ವಿದ್ಯಾರ್ಥಿನಿ.
3. ಹಾಫ್ ಮ್ಯಾರಥಾನ್ ಸ್ಪರ್ಧೆಯಲ್ಲಿ ಚಿನ್ನ ಮತ್ತು ಬೆಳ್ಳಿ ಗೆದ್ದ ಅನಿಲ್‍ಕುಮಾರ್ ಮತ್ತು ಕುಶ್ಮೇಶ್ ಕುಮಾರ್ ಆಳ್ವಾಸ್ ವಿದ್ಯಾರ್ಥಿಗಳು.
4. 4*400 ರಿಲೇ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಮುಜಾಮಿಲ್, ಜೀವನ್ ಶರಣ್ ಹಾಗೂ ಮಿಜೋ ಆಳ್ವಾಸ್‍ನ ವಿದ್ಯಾರ್ಥಿಗಳಾಗಿದ್ದು ರೋಹನ್ ಮಂಗಳೂರು ಎಸ್ ಡಿ ಎಂ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
5. 4*400 ರಿಲೇ ಮಹಿಳಾ ವಿಭಾಗದಲ್ಲಿ ಕಂಚಿನ ಪದಕ ಪಡೆದ ವಿಶ್ವ ವಿ, ಶಾಲು ಚೌದರಿ, ಶುಭ ವಿ ಹಾಗೂ ತೆರೆಸೆ ಜೋಸೆಫ್ ಆಳ್ವಾಸ್‍ನ ವಿದ್ಯಾರ್ಥಿಗಳು.
ಇಂದಿನ ಕ್ರೀಡಾಕೂಟದ ನೂತನ ದಾಖಲೆಗಳು
1. ಹ್ಯಾಮರ್ ಥ್ರೋ ಮಹಿಳಾ ವಿಭಾಗದಲ್ಲಿ ಮಂಗಳೂರು ವಿವಿ ಪ್ರತಿನಿಧಿಸಿ ಸ್ವರ್ಣ ಪದಕ ಗೆದ್ದ ಕೆ.ಎಮ್ ರಿತು ಧಿಮಾನ್ 61.93, 2015 ರಲ್ಲಿ 58.41ಮೀ, ಕೆ. ಎಮ್ ರಚನ ಹೆಸರಿಗಿದ್ದ ಕೂಟ ದಾಖಲೆಯನ್ನು ಮುರಿದಿದ್ದಾರೆ.
2. 2009, ಮಹಾತ್ಮ ಗಾಂಧಿ ವಿವಿ ಹೆಸರಿನಲ್ಲಿದ್ದ 4*100 (ಮಹಿಳಾ) ರಿಲೇಯಲ್ಲಿ 46.48 ಸೆಕೆಂಡ್ಸ್‍ನ ದಾಖಲೆಯನ್ನು ಹಿಂದಿಕ್ಕಿ ಈಗ ಅದೇ ವಿವಿಯ ತಂಡ 46.31 ಸೆಕೆಂಡುಗಳಲ್ಲಿ ಓಡಿ ಹೊಸ ದಾಖಲೆಯನ್ನು ನಿರ್ಮಿಸಿದ್ದಾರೆ.
3. 4*400 ಮೀಟರ್ ರಿಲೇ (ಮಹಿಳೆಯರ ವಿಭಾಗ) ಕ್ಯಾಲಿಕಟ್ ವಿವಿ- 3:38.08 ಅವಧಿಯಲ್ಲಿ ಕ್ರಮಿಸಿ, ಮಹಾತ್ಮ ಗಾಂಧಿ ವಿವಿ, ಕೊಟ್ಟಾಯಂ ಹೆಸರಿಗಿದ್ದ (ಕೂಟ ದಾಖಲೆಯನ್ನು(3:40.21) ತನ್ನದಾಗಿಸಿಕೊಂಡಿದೆ.
4. 200 ಮೀಟರ್ ಓಟ (ಮಹಿಳೆಯರ ವಿಭಾಗ) ದಲ್ಲಿ,ಮಹಾತ್ಮ ಗಾಂಧಿ ವಿವಿ ಕೊಟ್ಟಾಯಂ ನ ವಿಸ್ಮಯ ಹೆಸರಿಗಿದ್ದ (23.90) ಕೂಟ ದಾಖಲೆ ಹಿಂದಿಕ್ಕಿ ಭಾರತೀದಾಸನ್ ವಿವಿ ಯ ಎಸ್. ಧನಲಕ್ಷ್ಮೀ 23.24 ಸೆಕೆಂಡ್ಸ್‍ನೊಂದಿಗೆ ನೂತನ ದಾಖಲೆ ಬರೆದಿದ್ದಾರೆ.
5. ಲಾಂಗ್ ಜಂಪ್ (ಪುರುಷರ ವಿಭಾಗ) ಮೊಹಮ್ಮದ್ ಅನೀಸ್ ವೈ- ಕ್ಯಾಲಿಕಟ್ ವಿವಿ-7.79ಮೀ ನೊಂದಿಗೆ ಹೊಸ ಕೂಟ ದಾಖಲೆ ನಿರ್ಮಿಸಿದ್ದಾರೆ. (ಹಿಂದಿನ ಕೂಟ ದಾಖಲೆ 2005,ಕೇರಳ ವಿವಿ, ಕೆ ಜೆ ಕ್ಲಿಂಟನ್.7.74)
6. 3000 ಮೀಟರ್ ಸ್ಟೀಪಲ್ ಚೇಸ್ (ಮಹಿಳೆಯರ ವಿಭಾಗ)ದಲ್ಲಿ ಮಂಗಳೂರು ವಿವಿ ಶೀತಲ್ ಭಗತ್- 10:34.53 ಅವಧಿಯಲ್ಲಿ ಕ್ರಮಿಸಿ ನೂತನ ದಾಖಲೆ ನಿರ್ಮಿಸಿದ್ದಾರೆ, ಜ್ಯೋತಿ ಚೌಹಾಣ್- ಮಂಗಳೂರು ವಿವಿ-10:35.32 ( ಹಳೆಯ ದಾಖಲೆ- ಜ್ಯೋತಿ ಚೌಹಾಣ್- ಮಂಗಳೂರು ವಿವಿ-10:36.19)
7. ಪೋಲ್ ವಾಲ್ಟ್‍ನಲ್ಲಿ (ಮಹಿಳೆಯರ ವಿಭಾಗ) ಜೈನ್ ವಿವಿ, ಬೆಂಗಳೂರಿನ ಮರಿಯಾ ಜಯ್‍ಸನ್–3.80 ಮೀಟರ್ ಜಿಗಿದು ತನ್ನದೇ ಹೆಸರಿನಲ್ಲಿದ್ದ ದಾಖಲೆ ಮುರಿದಿದ್ದಾರೆ (2018, 3.65 ಮೀಟರ್)