Saturday, September 21, 2024
ಅಂಕಣ

ದೀಪಾವಳಿ ಆಚರಣೆಗೆ ಪಟಾಕಿ ಬೇಕೇ ? ಯುವಜನರೇ, ಪಟಾಕಿಗಳ ದುಷ್ಪರಿಣಾಮ ಅರಿಯಿರಿ.

ದೀಪಾವಳಿ ಅಂದರೆ ದೀಪಗಳ ಆವಳಿ, ಅಂದರೆ ದೀಪಗಳ ಸಾಲು ಎನ್ನುತ್ತಾರೆ. ಆದರೆ ನಮ್ಮ ಹಿಂದೂ ಧರ್ಮಶಾಸ್ತ್ರಗಳಲ್ಲಿ ಪಟಾಕಿಗಳ ಆವಳಿ ಎಂದು ಎಲ್ಲಿಯೂ ಉಲ್ಲೇಖ ಇಲ್ಲ. ಯಾವ ದೃಷ್ಟಿಯಿಂದ ನೋಡಿದರೂ ಪಟಾಕಿಯಿಂದ ಹಾನಿಯೇ ಹೊರತು ಯಾವ ರೀತಿಯ ಲಾಭವೂ ಇಲ್ಲ, ಜನರು ಕೇವಲ ಕ್ಷಣಿಕ ಸುಖಕ್ಕಾಗಿ ಪಟಾಕಿಗಾಗಿ ಸಾವಿರಾರು ರೂಪಾಯಿಗಳನ್ನು ಉರಿಸುತ್ತಾರೆ.
ಇಂದಿನ ಸಮಾಜಕ್ಕೆ ‘ನಾನು ಇಷ್ಟು ಸಾವಿರ ರೂಪಾಯಿಯ ಪಟಾಕಿ ಸಿಡಿಸಿದೆ’ ಎಂದು ಹೇಳಲು ಹೆಮ್ಮೆ ಪಡುತ್ತಾರೆ. ನಮ್ಮ ದೇಶ ಇಂದಿಗೂ ಸಾವಿರಾರು ಕೋಟಿ ರೂಪಾಯಿ ಸಾಲದಲ್ಲಿದೆ. ಲಕ್ಷಾಂತರ ಜನರು ಒಂದು ಹೊತ್ತಿನ ಊಟಕ್ಕೂ ಹಾತೊರೆಯುವ ಪರಿಸ್ಥಿತಿಯಿದೆ, ಇಂತಹ ಸ್ಥಿತಿಯಲ್ಲಿರುವಾಗ ಕೇವಲ ಒಂದು ದಿನದ ಸುಖಕ್ಕಾಗಿ, ಮನೋರಂಜನೆಗಾಗಿ ಕೋಟ್ಯಂತರ ರೂಪಾಯಿಗಳ ಪಟಾಕಿಗಳನ್ನು ಸಿಡಿಸುವುದು ದೇಶದ್ರೋಹವೇ ಆಗಿದೆ, ಎಂದು ಅನಿಸುತ್ತದೆ.
ಧ್ವನಿಯಿಂದಾಗಿ ಕಿವಿ ಕಿವುಡಾಗುವುದು, ವೃದ್ಧರಿಗೆ, ರೋಗಿಗಳಿಗೆ ಹಾಗೂ ಸಣ್ಣ ಮಕ್ಕಳಿಗೆ ನಿದ್ರೆ ಬರುವುದಿಲ್ಲ. ಧ್ವನಿಯಿಂದಾಗಿ ಭಯ ಮತ್ತು ಮಾನಸಿಕ ಒತ್ತಡ ಹೆಚ್ಚಾಗುತ್ತದೆ. ಎದೆಯಲ್ಲಿನ ಒತ್ತಡ ಹೆಚ್ಚಾಗುತ್ತದೆ. ಪಟಾಕಿಗಳಿಂದ ಬೆಂಕಿಯ ಅಪಘಾತವಾಗಿ ಅನೇಕ ಜನರು ಸಾವಿಗೀಡಾಗುತ್ತಾರೆ, ಗಾಯಗೊಳ್ಳುತ್ತಾರೆ, ಕಸ ಮತ್ತು ದೂಳು ಹೆಚ್ಚಾಗುತ್ತದೆ. ವಿಷಯುಕ್ತ ವಾಯುವಿನಿಂದಾಗಿ ವಾಯುಮಾಲಿನ್ಯವಾಗುತ್ತದೆ, ಉಸಿರಾಟದ ತೊಂದರೆಯಾಗುತ್ತದೆ. ಅದರಿಂದ ದೀಪಾವಳಿಯ ಆನಂದೋತ್ಸವದ ಸಮಯದಲ್ಲಿ ರೋಗಗಳ ಪ್ರಮಾಣ ಹೆಚ್ಚಾಗುತ್ತದೆ. ದೀಪಾವಳಿಯ ಸಮಯದಲ್ಲಿ ಪಟಾಕಿಗಳಿಂದಾಗಿ ವಾಯು ಮಾಲಿನ್ಯದ ಪ್ರಮಾಣ ಹೆಚ್ಚಾಗುತ್ತದೆ.
ಶತ್ರುರಾಷ್ಟ್ರ ಚೀನಾ ನಿರ್ಮಿತ ರಾಸಾಯನಿಕಯುಕ್ತ ಪ್ರದೂಷಣೆ ಹಾಗೂ ಆಘಾತಕಾರಿ ಪಟಾಕಿಗಳ ಮೇಲೆ ನಿರ್ಬಂಧ ಹೇರುವುದು ಅನಿವಾರ್ಯವಾಗಿದೆ. ಸದ್ಯ ಮಾರ್ಕೆಟ್ ನಲ್ಲಿ ಹೆಚ್ಚು ಪ್ರಮಾಣದಲ್ಲಿ ವಿಷಯುಕ್ತ ಪದಾರ್ಥವಿರುವ ಚೀನಾ ನಿರ್ಮಿತ ಪಟಾಕಿಗಳು ಸಿಗುತ್ತವೆ. ಅವುಗಳ ನಿರ್ಮಾಣಕ್ಕೆ ಭಾರತದಲ್ಲಿ ನಿರ್ಬಂಧವಿರುವ ಪೆÇಟ್ಯಾಶಿಯಮ್ ಕ್ಲೋರೈಡ್ ಎಂಬ ರಾಸಾಯನಿಕ ಮಿಶ್ರಣವನ್ನು ಉಪಯೋಗಿಸಲಾಗುತ್ತದೆ; ಆದ್ದರಿಂದ ದೇಶದ ಹಿತದೃಷ್ಟಿ ಮತ್ತು ನಾಗರಿಕರ ಆರೋಗ್ಯದ ದೃಷ್ಟಿಯಿಂದ ಈ ಪಟಾಕಿಗಳನ್ನು ಆಮದು ಮಾಡುವುದನ್ನು ನಿಲ್ಲಿಸುವುದೇ ಒಳಿತು.
ಮಾನಸಿಕ ದೃಷ್ಟಿಯಿಂದ ವೃದ್ಧರ, ರೋಗಿಗಳ ಹಾಗೂ ಸಣ್ಣ ಮಕ್ಕಳ ಮಾನಸಿಕ ಸಮತೋಲನ ಕೆಡುತ್ತದೆ. ಎಲ್ಲರಿಗೂ ಕಿರಿಕಿರಿಯಾಗುತ್ತದೆ.
ಆರ್ಥಿಕತೆಯ ದೃಷ್ಟಿಯಿಂದ ನೋಡಿದರೂ ಸದ್ಯ ಬೆಲೆಯೇರಿಕೆ ಮತ್ತು ಆರ್ಥಿಕ ಕುಸಿತವಿರುವಾಗ ಕೋಟಿಗಟ್ಟಲೆ ರೂಪಾಯಿಗಳು ಅಪವ್ಯಯ ಆಗುತ್ತಿವೆ.
ಧಾರ್ಮಿಕ : ದೇವತೆಗಳ ಮತ್ತು ನಮ್ಮ ಗೌರವಶಾಲಿ ಇತಿಹಾಸದ ರಾಷ್ಟ್ರಪುರುಷರ ಚಿತ್ರಗಳಿರುವ ಪಟಾಕಿಗಳನ್ನು ಸಿಡಿಸಿದಾಗ ಅವುಗಳು ಚಿಂದಿಯಾಗಿ ದೇವತೆಗಳ ಹಾಗೂ ರಾಷ್ಟ್ರಪುರುಷರ ವಿಡಂಬನೆಯಾಗುತ್ತದೆ. ಪಟಾಕಿಗಳ ಮೇಲಿನ ಇಂತಹ ಚಿತ್ರಗಳಿಂದಾಗಿ ಕೋಟಿಗಟ್ಟಲೆ ಹಿಂದೂಗಳ ಧಾರ್ಮಿಕ ಭಾವನೆಯನ್ನು ನೋಯಿಸಲಾಗತ್ತದೆ. ಧಾರ್ಮಿಕ ದೃಷ್ಟಿಯಿಂದ ನೋಡಿದರೂ ಪಟಾಕಿಗಳಿಂದ ದೇವರ ಅಪಮಾನವಾಗುವುದು ಕಂಡುಬರುತ್ತದೆ. ಪಟಾಕಿಗಳ ಮೇಲಿನ ಚಿತ್ರಗಳು ಚಿಂದಿಯಾಗಿರುವುದರಿಂದ ದೇವತೆಗಳ ಅವಮಾನ ಮಾಡಿದಂತಾಗುತ್ತದೆ. ಲಕ್ಷಿ ್ಮೀ ಪೂಜೆಯಂದು ಲಕ್ಷಿ ್ಮೀಬಾಂಬ್ ಈ ಪಟಾಕಿಗಳನ್ನು ಸಿಡಿಸಿ ದೇವತೆಯ ವಿಡಂಬನೆ ಮಾಡುವುದು, ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಶ್ ಚಂದ್ರ ಭೊಸ್ ಇವರ ಚಿತ್ರವಿರುವ ಪಟಾಕಿಗಳನ್ನು ಸಿಡಿಸುವುದರಿಂದ ದೇವತೆಗಳ ಹಾಗೆಯೇ ನಮ್ಮ ರಾಷ್ಟ್ರಪುರುಷರ ವಿಡಂಬನೆಯಾಗುತ್ತದೆ.
ಈ ಎಲ್ಲಾ ವಿಚಾರಗಳನ್ನು ಗಮನಿಸುವಾಗ ಪಟಾಕಿಗಳಿಂದಾಗುವ ಮಾಲಿನ್ಯ, ಸಮಾಜಜೀವನದ ಮೇಲಾಗುವ ದುಷ್ಪರಿಣಾಮವನ್ನು ಗಮನಿಸಿ ಹಾಗೂ ಹಿಂದೂಗಳ ದೇವತೆಗಳು ಹಾಗೂ ರಾಷ್ಟ್ರಪುರುಷರ ವಿಡಂಬನೆಯನ್ನು ತಡೆಗಟ್ಟುವ ಸಲುವಾಗಿ ಇಂತಹ ಆಘಾತಕಾರಿ ಪಟಾಕಿಗಳ ಬಳಕೆಯನ್ನು ನಿಲ್ಲಿಸಿ ರಾಷ್ಟ್ರಪ್ರೇಮ ಹಾಗೂ ಧರ್ಮಪ್ರೇಮವನ್ನು ಉಳಿಸಬೇಕಾದ ಅವಶ್ಯಕತೆ ಇದೆ.

ದೀಪಾವಳಿಯ ನಿಜವಾದ ಅರ್ಥ ತಿಳಿದು ಪಟಾಕಿಗಳನ್ನು ಸಿಡಿಸದೇ ನಾವು ದೀಪಾವಳಿ ಆಚರಿಸಿದರೆ ನಮ್ಮ ಪರಿಸರ, ಆರೋಗ್ಯ ಎಲ್ಲವನ್ನೂ ಕಾಪಾಡಿಕೊಳ್ಳಬಹುದಾಗಿದೆ. ನಾವು ಈ ಬಗ್ಗೆ ಇಂದಾದರೂ ಜಾಗೃತವಾಗಬೇಕಲ್ಲವೇ ?.

ಜಾಹೀರಾತು
ಜಾಹೀರಾತು
ಜಾಹೀರಾತು

-ಕೇಶವ ಗೌಡ, ಉಪ್ಪಿನಂಗಡಿ.

ಜಾಹೀರಾತು

Leave a Response