Friday, September 20, 2024
ಸುದ್ದಿ

ಯೋಧರ ಪ್ರಯಾಣಕ್ಕೆ ಉಚಿತ ಏರ್‌ ಟಿಕೆಟ್‌ – ಕಹಳೆ ನ್ಯೂಸ್

ಪ್ರಧಾನಿ ನರೇಂದ್ರ ಮೋದಿ ಯೋಧರ ಪ್ರಯಾಣಕ್ಕೆ ಉಚಿತ ಏರ್‌ ಟಿಕೆಟ್‌ ನೀಡಿದ್ದಾರೆ ಎಂಬ ಒಕ್ಕಣೆಯೊಂದಿಗೆ, ಭಾರತ ಸೇನೆಯ ಯೋಧರು ವಿಮಾನದಲ್ಲಿ ಪ್ರಯಾಣಿಸುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

ಜೊತೆಗೆ ‘ಸ್ವಾತಂತ್ರ್ಯಾ ನಂತರದ 60 ವರ್ಷ ಭಾರತೀಯ ಯೋಧರು ರೈಲಿನ ಜನರಲ್‌ ಕಂಪಾರ್ಟ್‌ಮೆಂಟ್‌ನಲ್ಲಿ ಶೌಚಾಲಯ ಪಕ್ಕದಲ್ಲಿ ಕುಳಿತು ಪ್ರಯಾಣಿಸುತ್ತಿದ್ದರು. ಆ ಚಿತ್ರಗಳನ್ನು ನರೇಂದ್ರ ಮೋದಿ ಅವರಿಗೆ ಕಳುಹಿಸಿದ ನಂತರ ಮೋದಿ ಸರ್ಕಾರ ಯೋಧರಿಗೆ ವಿಮಾನ ಟಿಕೆಟ್‌ಗಳನ್ನು ನೀಡಲು ಆರಂಭಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಉತ್ತಮ ಹೆಜ್ಜೆ’ ಎಂದು ಒಕ್ಕಣೆ ಬರೆದುಕೊಂಡು ಸೋಷಿಯಲ್‌ ಮೀಡಿಯಾದಲ್ಲಿ ಈ ಸಂದೇಶವನ್ನು ಶೇರ್‌ ಮಾಡಲಾಗುತ್ತಿದೆ. ಈ ಸಂದೇಶ ಫೇಸ್‌ಬುಕ್‌ನಲ್ಲಿ 2016ರಿಂದಲೂ ಓಡಾಡುತ್ತಿದೆ. ಆದರೆ ಮೋದಿ ಸರ್ಕಾರ ಉಚಿತ ಫ್ಲೈಟ್‌ ಟಿಕೆಟ್‌ ನೀಡಿದ್ದು ನಿಜವೇ ಎಂದು ಪರಿಶೀಲಿಸಿದಾಗ ಇದೊಂದು ಸುಳ್ಳುಸುದ್ದಿ ಎಂಬುದು ಪತ್ತೆಯಾಗಿದೆ.

ಜಾಹೀರಾತು

ವಾಸ್ತವವಾಗಿ ಈ ಫೋಟೋದಲ್ಲಿರುವ ಸಮವಸ್ತ್ರದಾರಿ ವ್ಯಕ್ತಿಗಳು ಭಾರತದ ಸೇನೆಗೆ ಸೇರಿದವರಲ್ಲ. ಆದರೆ ಇಂಡೋ-ಟಿಬೆಟಿಯನ್‌ ಗಡಿ ಪೋಲೀಸರು (ಐಟಿಬಿಪಿ). ಆದರೆ ಭಾರತೀಯ ಸೇನೆ ಮತ್ತು ಇಂಡೋ ಟಿಬೆಟಿಯನ್‌ ಫೋರ್ಸ್‌ ಕೇಂದ್ರ ಸರ್ಕಾರದ ಅಡಿಯಲ್ಲಿ ಬರುತ್ತವೆ. ಆದರೆ ಐಟಿಬಿಪಿ ಕೇಂದ್ರ ಗೃಹ ಇಲಾಖೆಯಡಿ ಕಾರ್ಯನಿರ್ವಹಿಸುತ್ತದೆ. ಬೂಮ್‌ ಐಟಿಬಿಪಿ ವಕ್ತಾರ ವಿವೇಕ್‌ ಪಾಂಡೆ ಅವರನ್ನು ಸಂಪರ್ಕಿಸಿದ್ದು, ಅವರು ಫೋಟೋದಲ್ಲಿರುವವರು ಪ್ಯಾರಾಮಿಲಿಟರಿ ಪಡೆ ಎಂದು ಸ್ಪಷ್ಟಪಡಿಸಿದ್ದಾರೆ.

‘ಚುನಾವಣೆ ಸಂದರ್ಭದಲ್ಲಿ ಚುನಾವಣಾ ಆಯೋಗದ ಕೋರಿಕೆ ಮೇರೆಗೆ ಐಟಿಬಿಪಿ 2016ರಲ್ಲಿ ಕೇರಳ ವಿಧಾನಸಭಾ ಚುನಾವಣಾ ಭದ್ರತೆಗೆ ವರ್ಗಾವಣೆಯಾಗಿತ್ತು. ಆಗ ಪಶ್ಚಿಮ ಬಂಗಾಳದಿಂದ ಕೇರಳಕ್ಕೆ ವಿಮಾನದಲ್ಲಿ ರಕ್ಷಣಾ ಪಡೆಯನ್ನು ಕಳುಹಿಸಲಾಗಿತ್ತು. ಸಾಮಾನ್ಯವಾಗಿ ರೈಲಿನಲ್ಲೇ ಐಟಿಬಿಪಿ ಪಡೆಯನ್ನು ಕಳುಹಿಸಲಾಗುತ್ತದೆ. ಆದರೆ ಹೆಚ್ಚು ಜನರಿದ್ದ ಕಾರಣ ವಿಮಾನದಲ್ಲಿ ಕಳುಹಿಸಲಾಗಿತ್ತು’ ಎಂದಿದ್ದಾರೆ.