ಪುತ್ತೂರು: ಪುತ್ತೂರು ಸಂಚಾರ ಪೊಲೀಸರು ನ.28ರಂದು ಪುತ್ತೂರು ಸಂಚಾರ ಪೊಲೀಸರು ಸಂಜೆ ವಿಶೇಷ ಕಾರ್ಯಾಚರಣೆ ನಡೆಸಿ ಅನಧಿಕೃತ ಫೂಟ್ ಪಾತ್ ವ್ಯಾಪಾರಿಗಳನ್ನು ತೆರವುಗೊಳಿಸಿದರು. ಫೂಟ್ ಪಾತ್‍ನಲ್ಲಿ ವ್ಯಾಪಾರ ಮಾಡುವ ಮೂಲಕ ಸಾರ್ವಜನಿರಿಗೆ ತೊಂದರೆ ಉಂಟಾಗುತ್ತಿದ್ದ ದೂರಿಗೆ ಸಂಬಂಧಿಸಿ ಕಾರ್ಯಾಚರಣೆ ನಡೆಸಿದ್ದಾರೆ.
ಫೂಟ್ ಪಾತ್‍ನಲ್ಲಿ ಅಂಗಡಿಯವರು ತಮ್ಮ ವ್ಯಾಪಾರ ಸೊತ್ತುಗಳನ್ನು ಇಡುವ ಮೂಲಕ ಫೂಟ್ ಪಾತ್‍ನಲ್ಲಿ ನಡೆದಾಡಲು ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿತ್ತು.
ಜೊತೆಗೆ ಸಾರ್ವಜನಿಕರು ಫೂಟ್ ಪಾತ್ ಬಿಟ್ಟು ಹಠತ್ ಆಗಿ ರಸ್ತೆಯಲ್ಲಿ ಹೋಗುವ ಸಂದರ್ಭ ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚಾದ ಹಿನ್ನೆಲೆಯಲ್ಲಿ ಸಾರ್ವಜನಿಕರ ದೂರಿನ ಮೇರೆಗೆ ಸಂಚಾರ ಸುರಕ್ಷತೆಯ ದೃಷ್ಟಿಯಿಂದ ಪುತ್ತೂರು ಸಂಚಾರ ಪೊಲೀಸ್ ಠಾಣೆಯ ಎಸ್.ಐ ನಾರಾಯಣ ರೈ ಅವರ ನೇತೃತ್ವದಲ್ಲಿ ಪುತ್ತೂರು ಬಸ್ ನಿಲ್ದಾಣದ ಸುತ್ತಮುತ್ತ, ದರ್ಬೆ ಪರಿಸರದಲ್ಲಿ ಕಾರ್ಯಾಚರಣೆ ನಡೆಸಿ ಅಂಗಡಿಯವರು ಫೂಟ್‍ಪಾತನ್ನು ಆಕ್ರಮಿಸಿ ಇಟ್ಟಿದ್ದ ವ್ಯಾಪಾರದ ಸೊತ್ತುಗಳನ್ನು ತೆರವುಗೊಳಿಸಿದ್ದಾರಲ್ಲದೆ ಎಚ್ಚರಿಕೆ ನೀಡಿದ್ದಾರೆ.