Friday, September 20, 2024
ಸುದ್ದಿ

Big Breaking News: ರಾಹುಲ್ ‘ಬ್ರಾಹ್ಮಣ್’ ಗೋತ್ರ ರಾಜಕೀಯ; ತೆಲಂಗಾಣದಲ್ಲಿ ವರ್ಕೌಟ್ ಆಗುತ್ತಾ ಕಾಂಗ್ರೆಸ್ ನ ಮಾಸ್ಟರ್ ಪ್ಲಾನ್ – ಕಹಳೆ ನ್ಯೂಸ್

ತೆಲಂಗಾಣ: ಪಂಚ ರಾಜ್ಯಗಳ ಚುನಾವಣಾ ಕಾವು ಜಾಸ್ತಿಯಾಗಿದ್ದು ಹೊಸ ರಾಜ್ಯವಾದ ತೆಲಂಗಾಣದಲ್ಲಿ ಕೈ ಕೇಸರಿ ಸಮರ ಜೋರಾಗಿಯೇ ನಡೀತಿದೆ. ಈ ಚನಾವಣೆಯು ಹೊಸ ಸಂಚಲನವನ್ನೇ ಸೃಷ್ಟಿಸಿದೆ. ಅಷ್ಟಕ್ಕೂ ಕಾಂಗ್ರೆಸ್ ಹೊಸ ತಂತ್ರವನ್ನು ಹೆಣೆದಿರೋ ಉದ್ದೇಶವೇನು? ಅಲ್ಪಸಂಖ್ಯಾತರನ್ನು ಮನ ಒಲಿಸುತ್ತಾ ಕೈ? ಎಲ್ಲೆಡೆ ಈಗ ಮೋದಿ ಹವಾ ಹೆಚ್ಚಾಗ್ತಾ ಇದ್ದು, ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ತಲೆ ನೋವಾಗಿರೋದು ಗೊತ್ತೆ ಇದೆ. ಹೀಗಿರುವಾಗ ಕಾಂಗ್ರೆಸ್ ಪಕ್ಷ ವಿಧಾನ ಸಭೆ ಚುನಾವಣೆಯಲ್ಲಿ ಗೆಲ್ಲಲೇ ಬೇಕೆಂದು ಪಣ ತೊಟ್ಟಿದೆ.

ತೆಲಂಗಾಣದಲ್ಲಿ ವಿಧಾನಸಭಾ ಚುನಾವಣೆಗೆ ಸಕಲ ಸಿದ್ಧತೆ ನಡಿತಾಯಿದೆ. ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‍ಗಢದಲ್ಲಿ ಟೆಂಪಲ್‍ರನ್ ಮಾಡಿದ ಕಾಂಗ್ರೆಸ್, ತೆಲಂಗಾಣದಲ್ಲಿ ತನ್ನ ಪ್ಲಾನ್ ಚೇಂಜ್ ಮಾಡಿಕೊಂಡಿದೆ. ದೇವರ ಹತ್ತಿರ ಹೋಗೋ ಬದ್ಲಾಗಿ ಒಂದೊಳ್ಳೆ ಮಾಸ್ಟರ್ ಗೇಮ್ ಆಡಲು ತಯಾರಿ ನಡೆಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ತಂತ್ರದಿಂದ ಶತಾಯ ಗತಾಯವಾಗಿ ಆಡಳಿತಕ್ಕೆ ಬರ್ಲೇಬೇಕೆಂದು ತೀರ್ಮಾನಿಸಿದೆ. ಅದರಂತೆಯೇ ಅಲ್ಪಸಂಖ್ಯಾರನ್ನು ಒಲಿಸಿಕೊಳ್ಳಲು ಮತ್ತೆ ಕೈ ಪಾರ್ಟಿ ವೋಟ್‍ಬ್ಯಂಕ್ ರಾಜಕೀಯ ಟೆಕ್ನಿಕ್‍ನ್ನು ಫೊಲೋ ಮಾಡಲು ಮುಂದಾಗಿದೆ. ಅದರಂತೆಯೇ ಕಾಂಗ್ರೆಸ್‍ನತ್ತ ಮತಗಳನ್ನು ವಾಲಿಸಲು ಭರ್ಜರಿ ತಯಾರಿವೊಂದನ್ನು ನಡೆಸಿದೆ.

ಜಾಹೀರಾತು

ಯೆಸ್ ಅದೇನೆಂದ್ರೆ ಕಾಂಗ್ರೆಸ್ ಹಿಂದೆ ಮಾಡಿದ ವೋಟ್‍ಬ್ಯಾಂಕ್ ರಾಜಕೀಯದ ಬಾಣವನ್ನು ಮತ್ತೆ ತಲಂಗಾಣದಲ್ಲಿ ಪ್ರಯೋಗಿಸ್ತಾ ಇದೆ. ರಾಜಸ್ಥಾನದ ಚುನಾವಣೆಯಲ್ಲಿ ರಾಹುಲ್ ಗಾಂಧಿ ಮೋದಿಯ ತಂದೆ ತಾಯಿ, ಯೋಜನೆಗಳನ್ನು ತೆಗಳುವ ಮೂಲಕ ವೋಟ್‍ಗಿಟ್ಟಿಸಿಕೊಳ್ಳಲು ಪ್ರಯತ್ನ ನಡೆಸಿತ್ತು. ಅದರಂತೆಯೇ ತೆಲಂಗಣದಲ್ಲಿ ಮುಸ್ಲಿಂ ಮತ್ತು ಕ್ರೈಸ್ತರಿಗೆ ಭರ್ಜರಿ ಭರವಸೆಯ ಮೂಲಕ ಸೆಕ್ಯಲರ್ ಪೊಲಿಟಿಕಲ್ ಬೀಜವನ್ನು ಮತ್ತೆ ಭಿತ್ತಿ ತೆಲಂಗಣದಲ್ಲಿ ನೆಲೆಯೂರಲು ರಣತಂತ್ರವನ್ನೇ ರೂಪಿಸಿದೆ.

ಅದರಂತೆಯೇ ಅಲ್ಪಸಂಖ್ಯಾತರಾದ ಮುಸ್ಲಿಂ ಮತ್ತು ಕ್ರೈಸ್ತರಿಗೆ ಬಂಪರ್ ಆಸೆಯನ್ನು ತೆಲಂಗಣದಲ್ಲಿ ಕಾಂಗ್ರೆಸ್ ಸೃಷ್ಟಿಸಿದೆ. ಅಲ್ಪಸಂಖ್ಯಾರ ಮತಗಳನ್ನು ಬಾಚಿಕೊಳ್ಳಲು ಕೈ ಕೂಟ ಹೊಸ ಪ್ರಣಾಳಿಕೆಯನ್ನು ಬಿಡುಗಡೆಮಾಡಿದ್ದು ಈ ಸುದ್ದಿ ರಾಷ್ಟ್ರವ್ಯಾಪಿ ಹಬ್ಬಿದ್ದು ಈ ನೀತಿ ಎಲ್ಲರನ್ನು ಬೆಚ್ಚಿಬೀಳಿಸಿದ್ದಂತೂ ಸತ್ಯವಾಗಿದೆ.

ಅದಕ್ಕಿಂತಲೂ ಮುಂಚೆ ಟೆಂಪಲ್ ರನ್ ಮಾಡಿದ್ದ ರಾಹುಲ್ ನಾನು ದತ್ತಾತ್ರೇಯ ಗೋತ್ರದ ಕೌಲ್ ಬ್ರಾಹ್ಮಣ ಎಂದು ಹೇಳಿಕೊಂಡಿದ್ದಾರೆ. ಇದು ಎಲ್ಲೆಡೆ ಚರ್ಚೆಗೆ ಕಾರಣವಾಗಿದ್ದು ಎಲ್ಲಡೆ ಈ ಹೇಳಿಕೆಗೆ ಟೀಕೆ ವ್ಯಕ್ತವಾಗಿದೆ. ಇದಾದ ಮೇಲೆ ತೆಲಂಗಾಣದಲ್ಲಿ ವೋಟ್‍ಬ್ಯಾಂಕ್ ತಂತ್ರ ವರ‍್ಕೌಟ್ ಆಗುತ್ತಾ ಎಂಬುದನ್ನು ಕಾದುನೋಡಬೇಕಾಗಿದೆ.
ದಿನೇಶ್ ನ್ಯೂಸ್ ಡೆಸ್ಕ್ ಕಹಳೆ ನ್ಯೂಸ್