Recent Posts

Sunday, January 19, 2025
ಸುದ್ದಿ

ತಂತ್ರಜ್ಞಾನಕ್ಕೆ ಮಾರಕ ಅಂತರಿಕ್ಷದಲ್ಲಿನ ಕಸದ ರಾಶಿ – ಕಹಳೆ ನ್ಯೂಸ್

ದಿನದಿಂದ ದಿನಕ್ಕೆ ತಂತ್ರಜ್ಞಾನ ಕ್ಷೇತ್ರದಲ್ಲಿ ಕ್ಷಿಪ್ರಗತಿಯಲ್ಲಿ ಬೆಳವಣೆಗೆ ಆಗುತ್ತಲಿದೆ. ಅದರಲ್ಲೂ ಮುಖ್ಯವಾಗಿ ಬಾಹ್ಯಕ್ಷೇತ್ರಕ್ಕೆ ಸಂಬಂಧಿಸಿದಂತೆ ತಂತ್ರಜ್ಞಾನಗಳು ಬದಲಾಗುತ್ತಿದ್ದು ಹಲವಾರು ರಾಷ್ಟ್ರಗಳು ತಾನು ಮುಂದು ತಾನು ಮುಂದೆಂದು ಬೇರೆ ಬೇರೆ ಉಪಗ್ರಹಗಳನ್ನು ಬಾಹ್ಯಕಾಶಕ್ಕೆ ಬಿಡುಗಡೆ ಮಾಡುತ್ತಿದೆ.

ಬೇರೆ ಬೇರೆ ಕಾರ್ಯನಿಮಿತ್ತ ಉಡಾಯಿಸುವ ಉಪಗ್ರಹಗಳು ಕೆಲವರ್ಷಗಳ ಕಾಲ ಯಶಸ್ವಿಯಗಿ ಕಾರ್ಯನಿರ್ವಹಿಸಿ ತನ್ನ ಆಯುಷ್ಯವನ್ನು ಕಳೆದುಕೊಳ್ಳುತ್ತದೆ. ಗುರುತ್ವಾಕರ್ಷಣ ಬಲವನ್ನು ಮೀರಿ ಕಕ್ಷೆಯತ್ತ ಸಾಗುವ ಅನೇಕ ಉಪಗ್ರಹಗಳು ಭೂಮಿಯ ಕಕ್ಷೆಯಲ್ಲೇ ಇರುತ್ತದೆ. ಒಮ್ಮೆ ಉಡಾಯಿಸಿದ ಉಪಗ್ರಹವು ಮತ್ತೆ ಎಂದಿಗೂ ಭೂಮಿಯತ್ತ ಮುಖ ಮಾಡದೇ ಇರುವುದೇ ಅಂತರಿಕ್ಷದಲ್ಲಿ ಕಸ ತುಂಬಿ ಹೋಗಲು ಮುಖ್ಯ ಕಾರಣವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ರಾಕೆಟ್‌ಗಳನ್ನು ಕಕ್ಷೆಗೆ ಉಡಾಯಿಸಿದ ಬಳಿಕ ಬಾಹ್ಯಾಕಾಶದಲ್ಲಿ ಅದರ ದೊಡ್ಡ ಅವಶೇಷಗಳಿಂದ ತೊಡಗಿ ಪೈಂಟ್‌ನ ಸಣ್ಣ ತುಣುಕುಗಳ ತನಕ ತ್ಯಾಜ್ಯಗಳು ಉಳಿಯುತ್ತವೆ. ಅಂತೆಯೇ ನಿಷ್ಟ್ರಿಯಗೊಂಡ ಉಪಗ್ರಹಗಳು ಕೂಡ ಈ ಸಾಲಿಗೆ ಸೇರುತ್ತವೆ. ಇಂಥ 12,000 ಕ್ಕಿಂತ ಅಧಿಕ ಅವಶೇಷಗಳು ಭೂಕಕ್ಷೆಯಲ್ಲಿ ಸುತ್ತುತ್ತಲೇ ಇವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ತಾಸಿಗೆ 27,000 ಕಿ.ಮೀ.ಗಿಂತ ಹೆಚ್ಚಿನ ವೇಗದಲ್ಲಿ ಚಲಿಸುತ್ತಿರುವ ಸಣ್ಣ ತ್ಯಾಜ್ಯಗಳು ಕೂಡ ಉಪಗ್ರಹಗಳನ್ನು ಗಂಭೀರವಾಗಿ ಹಾನಿಗೆಡಿಸುವ ಅಥವಾ ನಾಶಪಡಿಸುವ ಸಾಮರ್ಥ್ಯ ಹೊಂದಿದ್ದು ಮಾತ್ರವಲ್ಲದೆ ಇದು ಭುಮಿಯ ಪರಿಸರದ ಮೇಲೂ ಅಪಾರ ಹಾನಿಯನ್ನು ಮಾಡುತ್ತದೆ ಎಂದು ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ.

ಕಸದ ಸಮಸ್ಯೆಗೆ ಪರಿಹಾರ ಇದೆಯೇ?
ಭೂಸ್ಥಿರ ಕಕ್ಷೆಯಲ್ಲಿ ಅವಶೇಷಗಳನ್ನು ಕ್ಷಿಪಣಿ ಮೂಲಕ ದೂರಕ್ಕೆ ತಳ್ಳುವುದು ವಿಜ್ಞಾನಿಗಳು ಬಹುವಾಗಿ ಚರ್ಚಿಸುತ್ತಿರುವ ಉಪಾಯವಾಗಿದೆ. ಆದರೆ ಕಕ್ಷೆಯಲ್ಲಿ ನಿರ್ವಾತ (ಗುರುತ್ವಾಕರ್ಷಣೆ) ಇಲ್ಲದೆ ಇರುವುದರಿಂದ ಹೀರು ಆಲಿಕೆಯಂಥ ಸಾಂಪ್ರದಾಯಿಕ ವಿಧಾನಗಳು ಯಶಸ್ವಿಯಾಗಲ್ಲ.

ಬಾಹ್ಯಾಕಾಶ ತ್ಯಾಜ್ಯಕ್ಕೆ ಯಾರ ಕೊಡುಗೆ ಅತೀ ಹೆಚ್ಚು?
ಬಾಹ್ಯಕಾಶ ಕಸ ಕೊಡುಗೆಯಲ್ಲಿ ಚೀನಾ ಮೊದಲ ಸ್ಥಾನದಲ್ಲಿ ನಿಂತರೆ ಅಮೆರಿಕಾ, ರಷ್ಯಾ, ಫ್ರಾನ್ಸ್ ದೇಶಗಳು ಇನ್ನುಳಿದ ಸ್ಥಾನವನ್ನು ಪಡೆದುಕೊಂಡಿದೆ. ಈ ಕಸಕ್ಕೆ ಭಾರತದ ಪಾಲು ಸಾಕಷ್ಟು ಕಡಿಮೇನೇ ಇದೆ. ಒಟ್ಟು ಈ ಅಂತರಿಕ್ಷದಲ್ಲಿ ಕನ ಮಾಲಿನ್ಯ ಮತ್ತು ತಂತ್ರಜ್ಞಾನಕ್ಕೂ ಸವಾಲೊಡ್ಡಿದ್ದು ಮುಂದಿನ ದಿನಗಳಲ್ಲಿ ಈ ತ್ಯಾಜ್ಯದ ನಿವಾರಣೆ ಅನಿವಾರ್ಯವಾಗಿದೆ.
ದಿನೇಶ್, ನ್ಯೂಸ್ ಡೆಸ್ಕ್ ಕಹಳೆ ನ್ಯೂಸ್