ಮಂಗಳೂರು: ಮಂಗಳೂರು ತಾಲೂಕು, ತೆಂಕುಳಿಪಾಡಿ ಗ್ರಾಮದ, ಮಳಲಿ ಸಾದೂರು ಎಂಬಲ್ಲಿ ಹರಿಯುತ್ತಿರುವ ಫಲ್ಗುಣಿ ನದಿಯಲ್ಲಿ ಅಕ್ರಮವಾಗಿ ಡ್ರೆಜ್ಜಿಂಗ್ ಮೇಶಿನ್ ಬಳಸಿ ಮರಳುಗಾರಿಕೆ ನಡೆಸುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯಂತೆ ದಿನಾಂಕ: 29-11-2018 ರಂದು ಮಳಲಿ ಸಾದೂರು ಎಂಬಲ್ಲಿಗೆ ಕಂದಾಯ ಇಲಾಖೆಯವರೊಂದಿಗೆ ದಾಳಿ ನಡೆಸಿದಾಗ ಫಲ್ಗುಣಿ ನದಿಯಲ್ಲಿ ಒಂದು ದೋಣಿಯಲ್ಲಿ ಆಳವಡಿಸಿದ್ದ ಡ್ರೆಜ್ಜಿಂಗ್ ಮೇಶಿನ್ ಕಂಡು ಬಂದಿದೆ.
ದೋಣಿಯಲ್ಲಿದ್ದ ಇಬ್ಬರು ವ್ಯಕ್ತಿಗಳು ಪೊಲೀಸರನ್ನು ನೋಡಿ ಓಡಿ ಹೋಗಿರುತ್ತಾರೆ, ಹಾಗೂ ಅಕ್ರಮವಾಗಿ ನದಿಯಿಂದ ಮರಳನ್ನು ತೆಗೆಯುವ ಬಗ್ಗೆ ಜೋಡಿಸುತ್ತಿದ್ದ ಡ್ರೆಜ್ಜಿಂಗ್ ಮೇಶಿನ್ ಮತ್ತು ದೋಣಿಯನ್ನು ವಶಕ್ಕೆ ಪಡೆದುಕೊಂಡು ಮುಂದಿನ ಕ್ರಮದ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಹಸ್ತಾಂತರಿಸಲಾಗಿದೆ.
ಮಾನ್ಯ ಉಪ ಪೊಲೀಸ ಪೊಲೀಸ್ ಆಯುಕ್ತರಾದ (ಪ್ರಭಾರ) ಶ್ರೀ ಮಂಜುನಾಥ ಶೆಟ್ಟಿ . ಕೆ.ಎಸ್.ಪಿ.ಎಸ್ ರವರ ನಿರ್ದೇಶದಂತೆ ಆರೋಪಿಗಳ ಪತ್ತೆಕಾರ್ಯದಲ್ಲಿ ಪೊಲೀಸ್ ನಿರೀಕ್ಷಕರಾದ ಶ್ರೀ ಎಸ್. ಪರಶಿವಮೂರ್ತಿ, ಸಿಬ್ಬಂದಿಗಳಾದ ಶ್ರೀ ರಾಜೇಶ್, ಅಶೋಕ್ ಕುಮಾರ್, ಅಬ್ಬುಸಾಲಿ, ಅಶೋಕ್, ಕಿರಣ್ ಕುಮಾರ್, ಉಮೇಶ್ ರವರು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿರುತ್ತಾರೆ.