Recent Posts

Sunday, January 19, 2025
ಸುದ್ದಿ

ಡಿಸೆಂಬರ್ 2ರಿಂದ ಹತ್ತು ತಿಂಗಳುಗಳ ಕಾಲ ಸ್ವಚ್ಛತಾ ಅಭಿಯಾನ – ಕಹಳೆ ನ್ಯೂಸ್

ಮಂಗಳೂರು: ಸ್ವಚ್ಛತೆಯೇ ದೇವರು ಎಂಬ ಭಾವದಲ್ಲಿ ರಾಮಕೃಷ್ಣ ಮಿಷನ್ ಮಂಗಳೂರಿನಲ್ಲಿ ಕಳೆದ ನಾಲ್ಕು ವರ್ಷಗಳಿಂದ ಸ್ವಚ್ಛತಾ ಅಭಿಯಾನವನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬರುತ್ತಿದೆ.

ಕೇಂದ್ರ ಸರಕಾರದ ವಿಶೇಷ ಮನವಿಯ ಮೇರೆಗೆ ಜನವರಿ 2015 ರಿಂದ ಆರಂಭಿಸಿ ಇಂದಿನವರೆಗೆ ನಾಲ್ಕು ಹಂತಗಳಲ್ಲಿ ಸ್ವಚ್ಛತಾ ಅಭಿಯಾನವನ್ನು ಸಂಪನ್ನಗೊಳಿಸಿದೆ. ಐದನೇ ಹಂತದ ಯೋಜನೆ 2 ಡಿಸೆಂಬರ್ 2018 ರಂದು ಭಾನುವಾರ ಬೆಳಗ್ಗೆ ಆರಂಭಗೊಳ್ಳುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನಾಲ್ಕು ವರ್ಷದ ಹಿಂದೆ ಸ್ವಚ್ಛತಾ ಅಭಿಯಾನವನ್ನು ಆರಂಭಿಸುವಾಗ ಯೋಜಿಸಿದಂತೆ ಮಹಾತ್ಮ ಗಾಂಧೀಜಿ ಅವರ 150 ನೆ ಜನ್ಮ ಜಯಂತಿಯವರೆಗೆ ಈ ಅಭಿಯಾನ ಸಾಗಬೇಕು ಎನ್ನುವ ಆಶಯವಿತ್ತು ಈ ಹಿನ್ನೆಲೆಯಲ್ಲಿ 2 ಅಕ್ಟೋಬರ್ 2019 ರಂದು ಈ ಐದನೇ ಹಂತ ಸಂಪನ್ನಗೊಳ್ಳಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಹಾಗಾಗಿ ಇದು ನಾವು ಯೋಜಿಸಿದ್ದ ಸ್ವಚ್ಛತಾ ಅಭಿಯಾನದ ಅಂತಿಮ ಹಂತ 2 ಡಿಸೆಂಬರ್ 2018 ರಿಂದ 2 ಅಕ್ಟೋಬರ್ 2019 ರವರೆಗೆ ನಿರಂತರವಾಗಿ ಹತ್ತು ತಿಂಗಳುಗಳ ಕಾಲ ಈ ಅಭಿಯಾನ ಜರಗಲಿದೆ.

ಐದನೇ ಹಂತದ ಈ ಯೋಜನೆಯಲ್ಲಿ ಐದು ವಿವಿಧ ಆಯಾಮಗಳಲ್ಲಿ ಕಾರ್ಯಕ್ರಮಗಳನ್ನು ರೂಪುಗೊಳಿಸಲಾಗಿದೆ ಎಂದು ಮಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಜಿತಕಾನಂದ ಸ್ವಾಮೀಜಿ ಅವರು ಮಾಧ್ಯಮದವರಿಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ದಿಲ್ ರಾಜ್ ಆಳ್ವ, ಉಮಾನಾಥ್ ಕೋಟೆಕಾರ್, ಕ್ಯಾಪ್ಟನ್ ಗಣೇಶ್ ಕಾರ್ನಿಕ್, ಮತ್ತಿತರರು ಈ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.