Recent Posts

Sunday, January 19, 2025
ಸುದ್ದಿ

ಭಾವನಾತ್ಮಕವಾಗಿ ಜನರನ್ನು ಮರಳು ಮಾಡಿ ಮತ ಹಾಕಿಸಿದ್ದರಿಂದ ನನಗೆ ಸೋಲಾಯಿತು: ರಮಾನಾಥ ರೈ – ಕಹಳೆ ನ್ಯೂಸ್

ಮಂಗಳೂರು: ಕಾಂಗ್ರೆಸ್ ‌ಪಕ್ಷ ಬಂಟ್ವಾಳದಲ್ಲಿ ದುರ್ಬಲವಾಗಿಲ್ಲ. ಧರ್ಮ ರಕ್ಷಣೆ ಹೆಸರಲ್ಲಿ ಬಿಜೆಪಿಯವ್ರು ಜನರನ್ನು ವಂಚಿಸಿದರು. ಭಾವನಾತ್ಮಕವಾಗಿ ಜನರನ್ನು ಮರಳು ಮಾಡಿ ಮತ ಹಾಕಿಸಿದ್ದರಿಂದ ನನಗೆ ಸೋಲಾಯಿತು ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಭಾವುಕರಾಗಿ ನುಡಿದಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ವಿಧಾನಸಭಾ ಚುನಾವಣೆಯ ಹೊತ್ತಿನಲ್ಲಿ ನನ್ನ ಅಭಿವೃದ್ಧಿ ಕೆಲಸದ ಮಾಲ್ಯಮಾಪನ ಆಗುತ್ತೆ ಎಂದು ತಿಳಿದಿದ್ದೆ. ಆದ್ರೆ ಮಾಲ್ಯಮಾಪನ ಆಗಲಿಲ್ಲ. ಅನೇಕ‌ ವಿಚಾರದಲ್ಲಿ ನನ್ನ ವಿರುದ್ದ ಅಪಪ್ರಚಾರವನ್ನ ನಿರಂತರವಾಗಿ ಮಾಡಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ನನ್ನ ಅವಧಿಯಲ್ಲಿ ಕೆಲವೊಂದು ಹತ್ಯೆಗಳು ನಡೆದವು. ಈ ಹತ್ಯೆಗಳನ್ನೆಲ್ಲಾ ಯಾರು ಮಾಡಿಸಿದ್ದಾರೆ ಎಂಬುದು ನಿಮಗೆ ಈಗಾಗಲೇ ತಿಳಿದಿದೆ. ಬಿಜೆಪಿ ಹಾಗೂ ಇನ್ನೊಂದು ಮತೀಯ ಸಂಘಟನೆಯ ಕಾರ್ಯಕರ್ತರೇ ಆರೋಪಿಗಳಾಗಿ ಬಂಧಿತರಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಹರೀಶ್ ಪೂಜಾರಿ ಒಬ್ಬ ಅಮಾಯಕ. ಅವನ ಹತ್ಯೆ ಯಾಕೆ ಆಯಿತು ಎಂದು ಪ್ರಶ್ನಿಸಿದ ರೈ, ಟಿಪ್ಪು ಜಯಂತಿ ದಿನ ಒಂದು ಹತ್ಯೆಯಾಯಿತು. ಅದು ಬಂಟ್ವಾಳದಲ್ಲಿ ಕೋಮುಘರ್ಷಣೆ ರೂಪ ಪಡೆಯಿತು. ಕೊನೆಗೆ ಇಡೀ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ದಳ್ಳುರಿ ಆಗಬೇಕೆಂಬ ಕುತಂತ್ರ ಹೂಡಲಾಯಿತು.

ಇದಕ್ಕಾಗಿ ಕಲ್ಲಡ್ಕದಿಂದ ಹೊರಟ ಓಮ್ನಿ ವಾಹನಲ್ಲಿದ್ದವ್ರು ಜಕ್ರಿಬೆಟ್ಟುವಿನಲ್ಲಿ ಒಬ್ಬ ವ್ಯಕ್ತಿಯನ್ನ ಹತ್ಯೆ ಮಾಡಿದ್ರು. ಇನ್ನು ಹತ್ಯೆಗೀಡಾದ ಹರೀಶ್ ಪೂಜಾರಿ ಹೆಣವನ್ನು ಮನೆಯ ಎದುರಿನ ರಸ್ತೆಯಲ್ಲಿ ಬಿಸಾಡಿದ್ರು. ಈ ಹತ್ಯೆ ಹಿಂದೆ ನನ್ನ ಕೈವಾಡ ಇದೆ ಎಂದು ಆರೋಪಿಸಲಾಯಿತು.

ಕೊನೆಗೂ ನನ್ನ ಪ್ರಾರ್ಥನೆಯ ಫಲವೆಂಬಂತೆ ಈ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಘ ಪರಿವಾರದವರೇ ಹತ್ಯೆ ಮಾಡಿದ್ದು ಎಂಬುದು ಬಯಲಾಯ್ತು ಅಂದ್ರು. ಇನ್ನು ಅಮಾಯಕ ಶರತ್ ಮಡಿವಾಳರನ್ನ ಸಹ ಹತ್ಯೆ ಮಾಡಿದ್ರು. ಈ ಮೂಲಕ ಅವ್ರು ರಾಜಕೀಯ ಲಾಭ ಪಡೆದ್ರು. ಆರೋಪಿಗಳು ಯಾರೂಂತ ಗೊತ್ತಾಯ್ತು. ಆದರೆ ನನ್ನ ವಿರುದ್ಧ ಸುಖಾಸುಮ್ಮನೆ ಅಪಪ್ರಚಾರ ಮಾಡಲಾಯಿತು ಎಂದು ಕಿಡಿಕಾರಿದರು.