Friday, September 20, 2024
ಸುದ್ದಿ

ಹಲವು ಪ್ರಕರಣಗಳಲ್ಲಿ ತೀರ್ಪು ನೀಡಿದ ಸುಪ್ರೀಂಕೋರ್ಟ್ ಹಿರಿಯ ನ್ಯಾಯಮೂರ್ತಿ ಜೋಸೆಫ್ ಇಂದು ನಿವೃತ್ತಿ – ಕಹಳೆ ನ್ಯೂಸ್

ನವದೆಹಲಿ : ಸುಪ್ರೀಂಕೋರ್ಟ್ ನ ಹಿರಿಯ ನ್ಯಾಯಮೂರ್ತಿ ಕುರಿಯನ್ ಜೋಸೆಫ್ ಅವರು ಇಂದು ನಿವೃತ್ತಿ ಹೊಂದಲಿದ್ದಾರೆ.

ಕೇರಳದಲ್ಲಿ ವ್ಯಾಸಂಗ ಮಾಡಿರುವ ಜೋಸೆಫ್ ಅವರು 1979 ರಲ್ಲಿ ವಕೀಲಿಕೆ ವೃತ್ತಿ ಆರಂಭಿಸಿದ್ದರು. 2000 ರಲ್ಲಿ ಕೇರಳ ಹೈಕೋರ್ಟ್ ನ್ಯಾಯಮೂರ್ತಿಯಾಗಿ, 2010 ರಲ್ಲಿ ಹಿಮಾಚಲ ಪ್ರದೇಶ ಹೈಕೋರ್ಟ್ ಮುಖ್ಯ ಸಮಿತಿ ಮುಖ್ಯಸ್ಥರಾಗಿ, ಸೇವೆ ಸಲ್ಲಿಸಿದ್ದಾರೆ. 2013 ರ ಮಾರ್ಚ್ 8 ರಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ಬಡ್ತಿ ಪಡೆದಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕುರಿಯನ್ ಜೋಸೆಫ್ ಮೂರ್ತಿ ಅವರು ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಮಹಿಳೆಯರ ಪ್ರವೇಶ, ಆಧಾರ್ ಸಿಂಧುತ್ವ, ತ್ರಿವಳಿ ತಲಾಕ್, ಕಲ್ಲಿದ್ದಲು ಗಣಿ ಹಂಚಿಕೆ ಹಗರಣ, ಉದ್ಯೋಗದಲ್ಲಿ ಎಸ್ ಸಿ\ಎಸ್ಟಿ ನೌಕರರಿಗೆ ಬಡ್ತಿ ನೀಡುವ ಕೋಟಾಕ್ಕೆ ಸಂಬಂಧಿಸಿದ ಎಂ.ನಾಗರಾಜು ಕೇಸ್, ಮರಣ ದಂಡನೆ ಸಿಂಧುತ್ವ ಸೇರಿ ಹಲವು ಪ್ರಕರಣಗಳಲ್ಲಿ ತೀರ್ಪು ನೀಡಿದ ನ್ಯಾಯಪೀಠದ ಭಾಗವಾಗಿದ್ದಾರೆ.

ಜಾಹೀರಾತು

ಕುರಿಯನ್ ಜೋಸೆಫ್ ಅವರು ಇದುವರೆಗೂ ನಾನಾ ಪ್ರಕರಣಗಳಿಗೆ ಸಂಬಂಧಿಸಿದಂತೆ 1034 ತೀರ್ಪುಗಳನ್ನು ಕೊಟ್ಟಿದ್ದಾರೆ. ಅತ್ಯಧಿಕ ತೀರ್ಪು ಕೊಟ್ಟಿರುವ ಹತ್ತು ನ್ಯಾಯಮೂರ್ತಿಗಳ ಪಟ್ಟಿಯಲ್ಲಿ ಇವರು ಸ್ಥಾನ ಪಡೆದಿದ್ದಾರೆ.