Friday, November 22, 2024
ಸುದ್ದಿ

ಶಾರದಾ ಪೀಠ ಜೊತೆಗೆ ಹಿಂದೂ ತೀರ್ಥಕ್ಷೇತ್ರ ಸಂದರ್ಶಿಸಲು ಭಾರತೀಯರಿಗೆ ಅವಕಾಶ: ಪಾಕ್ ಪ್ರಧಾನಿ ಭರವಸೆ – ಕಹಳೆ ನ್ಯೂಸ್

ಪದೇ ಪದೇ ಮಾತುಗಳನ್ನು ಮುರಿಯುವ ಪಾಕಿಸ್ಥಾನದ ಗುಳ್ಳೇನರಿ ಬುದ್ಧಿ ಎಲ್ಲರಿಗೆ ತಿಳಿದೇ ಇದೆ. ಒಂದು ಕಡೆಯಲ್ಲಿ ಗಡಿ ಪ್ರದೇಶದಲ್ಲಿ ನಿರಂತರ ಆಕ್ರಮಣ ಮಾಡೋ ಪಾಕ್ ಉಗ್ರರು ಭಾರತೀಯ ಸೈನ್ಯವನ್ನು ಬೆಚ್ಚಿ ಬೀಳಿಸಿದ್ರೆ ಇನ್ನೊಂದು ಕಡೆಯಲ್ಲಿ ಪಾಕ್ ಪ್ರಧಾನಿ ಭಾರತದೊಂದಿಗೆ ಸೌಹಾರ್ದ ಸಾಧಿಸಲು ಮುಂದಾಗಿದೆ.

ಸ್ವಾತಂತ್ರ್ಯ ನಂತರ ಪಾಕ್‌ನಲ್ಲಿರೋ ಅನೇಕ ದೇವಾಲಯಗಳಿಗೆ ಭಾರತದವರಿಗೆ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು. ಈಗ ಮತ್ತೆ ಪಾಕ್ ದೇವಾಲಯಗಳಿಗೆ ಭಾರತೀಯರಿಗೆ ಪ್ರವೇಶ ಕಲ್ಪಿಸಲು ಪಾಕ್ ಸರ್ಕಾರ ಯೋಚಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಶ್ರೀನಗರ ‘ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಇರುವ ಶಾರದಾ ಪೀಠ ಸೇರಿದಂತೆ, ಪಾಕಿಸ್ತಾನದಲ್ಲಿರುವ ಹಿಂದೂ ತೀರ್ಥಕ್ಷೇತ್ರಗಳನ್ನು ಸಂದರ್ಶಿಸಲು ಭಾರತೀಯರಿಗೆ ಅವಕಾಶ ಕಲ್ಪಿಸುವ ಬಗ್ಗೆ ಪರಿಶೀಲಿಸಲು ಸಿದ್ಧನಿದ್ದೇನೆ’ ಎಂದು ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್ ಖಾನ್ ಭರವಸೆ ನೀಡಿದ್ದಾರೆ. ಭಕ್ತಾದಿಗಳಿಗೆ ಅವಕಾಶ ಕಲ್ಪಿಸಬೇಕು. ಈ ಸಂಬಂಧ ಪಾಕಿಸ್ತಾನದೊಡನೆ ಮಾತುಕತೆ ನಡೆಸಬೇಕು ಎಂದು ಬರೆದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕರ್ತಾರ್‌ಪುರ ಕಾರಿಡಾರ್ ಮೂಲಕ ಸಿಖ್ಖರ ಪವಿತ್ರ ಕ್ಷೇತ್ರ ಕರ್ತಾರ್‌ಪುರಕ್ಕೆ ಸಿಖ್ ಭಕ್ತರಿಗೆ ಅವಕಾಶ ನೀಡಲಾಗಿದೆ. ಪಾಕ್ ಆಕ್ರಮಿತ ಕಾಶ್ಮೀರದ ನೀಲಂ ವ್ಯಾಲಿ ಜಿಲ್ಲೆಯ ‘ಶಾರದಾ’ ಎನ್ನುವ ಗ್ರಾಮದಲ್ಲಿರುವ ಶಾರದಾ ಪೀಠವು ಸದ್ಯ ಪಾಕ್ ಹಾಗೂ ಭಾರತ ಗಡಿರೇಖೆ ಎಲ್‌ಓಸಿಯಿಂದ ಕೇವಲ 25 ಕಿಮೀ ದೂರದಲ್ಲಿದೆ.

ಕರ್ತಾರ್‌ಪುರಕ್ಕೆ ಭಕ್ತರಿಗೆ ಅವಕಾಶ ಕಲ್ಪಿಸೋಮಾದರಿಯಲ್ಲಿ ಪಾಕಿಸ್ತಾನದಲ್ಲಿರುವ ಹಿಂದೂ ತೀರ್ಥಕ್ಷೇತ್ರಗಳಾದ ಕಾಶ್ಮೀರದ ಶಾರದಾ ಪೀಠ, ಕತಾಸ್‌ರಾಜ್ ಶಿವ ದೇವಾಲಯ ಹಾಗೂ ಇತರ ಹಿಂದೂ ದೇವಾಲಯಗಳನ್ನು ಸಂದರ್ಶಿಸಲು ಭಾರತೀಯರಿಗೆ ಅವಕಾಶ ನೀಡುವ ಪ್ರಸ್ತಾವಗಳನ್ನು ಪರಿಶೀಲಿಸಲು ನಾವು ಸಿದ್ಧರಿದ್ದೇವೆ’ ಎಂದು ಪಾಕ್ ಪ್ರಧಾನಿ ಇಮ್ರಾನ್ ಹೇಳಿಕೆ ನೀಡಿದ್ದಾರೆ.

ಇಮ್ರಾನ್‌ರ ಈ ಕ್ರಮವನ್ನು ಸ್ವಾಗತಿಸಿರುವ ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ, ‘ಇದೊಂದು ಸ್ವಾಗತಾರ್ಹ ಬೆಳವಣಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಇಮ್ರಾನ್‌ರ ಸ್ನೇಹಹಸ್ತ ಪರಿಗಣಿಸಗೇಕು. ಇದರಿಂದ ಎರಡೂ ದೇಶಗಳ ನಡುವೆ ಶಾಂತಿಯ ಸೇತುವೆ ನಿರ್ಮಾಣವಾಗುತ್ತದೆ’ ಎಂದಿದ್ದಾರೆ.