Sunday, November 24, 2024
ಸುದ್ದಿ

ಅಯೋಧ್ಯೆಯ ಶ್ರೀರಾಮನ ವಿಗ್ರಹಕ್ಕೆ ಮುಸ್ಲಿಂರ ಬಾಣ | ಸಿಎಂ ಯೋಗಿಗೆ ಮುಸ್ಲಿಂ ಸಾಥ್!

ಲಕ್ನೋ: ಉತ್ತರ ಪ್ರದೇಶ ಸರ್ಕಾರ ಅಯೋಧ್ಯೆಯಲ್ಲಿ 100 ಮೀಟರ್‌ಗಳಷ್ಟು ಗಾತ್ರದಲ್ಲಿ ಶ್ರೀರಾಮನ ಪ್ರತಿಮೆ ನಿರ್ಮಿಸಲು ಯೋಜಿಸಿರುವುದು ಗೊತ್ತಿರುವ ವಿಷಯವೇ. ಇದೀಗ ಆ ಶ್ರೀರಾಮನ ಪ್ರತಿಮೆ ನಿರ್ಮಾಣಕ್ಕೆ ಆ ರಾಜ್ಯದ ಶಿಯಾ ವಕ್ಫ್ ಮಂಡಳಿ 10 ಬೆಳ್ಳಿ ಬಾಣಗಳನ್ನು ನೀಡಲು ಮುಂದಾಗಿದೆ.

ಮಂಡಳಿ ಅಧ್ಯಕ್ಷ ವಾಸೀಮ್ ರಿಜ್ವಿ ಈ ಕುರಿತಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ಗೆ ಪತ್ರ ಬರೆದಿದ್ದಾರೆ. ಶಿಯಾ ಸಮುದಾಯ ಶ್ರೀರಾಮನ ವಿಗ್ರಹಕ್ಕೆ 10 ಬೆಳ್ಳಿ ಬಾಣ ನೀಡಲು ಬಯಸಿದೆ. ಈ ಬಾಣಗಳು ಶಿಯಾ ಸಮುದಾಯ ಶ್ರೀರಾಮನೆಡೆಗೆ ಹೊಂದಿರುವ ಭಕ್ತಿ ಭಾವವನ್ನು ತೋರುತ್ತವೆ ಎಂದು ರಿಜ್ವಿ ಪತ್ರದಲ್ಲಿ ಹೇಳಿದ್ದಾರೆ.
ಬಾಣಗಳು ಭಯೋತ್ಪಾದನೆಯೊಂದಿಗಿನ ಭಾರತದ ಹೋರಾಟವನ್ನು ಸಂಕೇತಿಸುತ್ತವೆ. ರಾಮ ತನ್ನ ಬಾಣಗಳಿಂದ ರಾಕ್ಷಸರನ್ನು ನಾಶಮಾಡಿದ ರೀತಿಯಲ್ಲಿ ಭಾರತ ಭಯೋತ್ಪಾದನೆ ಮುಕ್ತ ರಾಷ್ಟ್ರವಾಗಲಿ ಎಂದು ರಿಜ್ವಿ ಹೇಳಿದ್ದಾರೆ.
ಅಯೋಧ್ಯೆಯಲ್ಲಿ ಹಿಂದೆ ನವಾಬರು ದೇವಾಲಯಗಳನ್ನು ಗೌರವಿಸಿದ್ದರು. ಅಯೋಧ್ಯೆಯಲ್ಲಿ ಹನುಮಾನ್ ಗರ್ಹಿಯ ಭೂಮಿ ಕೂಡ ನವಾಬ್ ಶುಜಾ-ಉದ್-ದೌಲಾ ದಾನ ಮಾಡಿದ್ದೇ ಆಗಿದೆ. ಹನುಮಾನ್ ಗರ್ಹಿ ದೇವಾಲಯದ ನಿರ್ಮಾಣಕ್ಕೆ ನವಾಬ್ ಆಸಿಫ್-ಉದ್-ಧುಲ್ಲಾಹ್ ಹಣವನ್ನು ಒದಗಿಸಿದ್ದರು ಎಂಬ ವಿಷಯವನ್ನು ರಿಜ್ವಿ ಸ್ಮರಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

Leave a Response