Friday, September 20, 2024
ಸುದ್ದಿ

ಜನಧನ ಎಫೆಕ್ಟ್ | ಗ್ರಾಮೀಣ ಭಾಗದಲ್ಲಿ ಮದ್ಯಸೇವನೆ ಪ್ರಮಾಣ ಇಳಿಕೆ.

ನವದೆಹಲಿ: ದೇಶದಲ್ಲಿ ಪ್ರತಿಯೊಬ್ಬರೂ ಬ್ಯಾಂಕ್​ ಖಾತೆ ಹೊಂದಿರಬೇಕು ಎಂದು ಕೆಂದ್ರ ಸರ್ಕಾರ ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಜನಧನ ಯೋಜನೆಗೆ ಚಾಲನೆ ನೀಡಿತ್ತು. ಜನಧನ ಯೋಜನೆ ಈಗ ಫಲ ನೀಡುತ್ತಿದ್ದು, ಗ್ರಾಮೀಣ ಭಾಗದಲ್ಲಿ ಜನರು ಹೆಚ್ಚಿನ ಪ್ರಮಾಣದಲ್ಲಿ ಉಳಿತಾಯ ಮಾಡುತ್ತಿದ್ದಾರೆ. ಇದಕ್ಕಿಂತಲೂ ಮುಖ್ಯವಾಗಿ ಗ್ರಾಮೀಣ ಭಾಗದಲ್ಲಿ ಜನರು ಮದ್ಯಸೇವನೆ ಮತ್ತು ತಂಬಾಕು ಸೇವನೆ ಇಳಿಮುಖವಾಗಿದೆ ಎಂಬುದು ತಿಳಿದು ಬಂದಿದೆ.ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾದ ಆರ್ಥಿಕ ಸಂಶೋಧನಾ ಘಟಕ ತನ್ನ ವರದಿಯಲ್ಲಿ ಜನಧನ ಯೋಜನೆಯ ಫಲಶೃತಿಯ ಕುರಿತು ವಿವರವಾಗಿ ತಿಳಿಸಿದೆ.

ಜನಧನ ಖಾತೆಗಳು ಹೆಚ್ಚಾಗಿ ತೆರೆದಿರುವ ರಾಜ್ಯಗಳ ಗ್ರಾಮೀಣ ಪ್ರದೇಶಗಳಲ್ಲಿ ಜನರು ಉಳಿತಾಯ ಮಾಡುವುದಕ್ಕೆ ಹೆಚ್ಚಿನ ಮಹತ್ವ ನೀಡುತ್ತಿದ್ದಾರೆ. ಇದರಿಂದಾಗಿ ಮದ್ಯಸೇವನೆ ಮತ್ತು ತಂಬಾಕು ಸೇವನೆ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿರುವುದನ್ನು ಗಮನಿಸಿದ್ದೇವೆ ಎಂದು ಸಮೀಕ್ಷೆ ನಡೆಸಿದ ಎಸ್​ಬಿಐನ ಸಂಶೋಧನಾ ಘಟಕದ ಮುಖ್ಯಸ್ಥೆ ಸೌಮ್ಯ ಕಾಂತಿ ಘೋಷ್​ ತಿಳಿಸಿದ್ದಾರೆ.
ಜನಧನ ಖಾತೆದಾರರಿಗೆ 1 ಲಕ್mಷ ರೂ.ವರೆಗೆ ವಿಮೆ ನೀಡಲಾಗುತ್ತಿದೆ. ಜತೆಗೆ ಸರ್ಕಾರದ ಸಬ್ಸೀಡಿಯನ್ನು ಉತ್ತಮವಾಗಿ ಬಳಸಿಕೊಳ್ಳಲು ಮತ್ತು ಅನುತ್ಪಾದಕ ವೆಚ್ಚಗಳಿಗೆ ಕಡಿವಾಣ ಹಾಕಲು ಜನಧನ ಸಹಾಯಕವಾಗಿದೆ. ಇದರ ಜತೆಗೆ ಜನಧನ ಖಾತೆಗಳಿಂದಾಗಿ ಗ್ರಾಮೀಣ ಭಾಗದಲ್ಲಿ ಹಣದುಬ್ಬರ ಪ್ರಮಾಣ ಕಡಿಮೆಯಾಗಿದೆ ಎಂದು ವರದಿ ತಿಳಿಸಿದೆ.
ದೇಶಾದ್ಯಂತ ಸುಮಾರು 30 ಕೋಟಿ ಜನಧನ ಖಾತೆಗಳಿವೆ. ಅನಾಣ್ಯೇಕರಣ ಘೋಷಣೆಯ ಬಳಿಕ ಹೆಚ್ಚಿನ ಖಾತೆಗಳನ್ನು ತೆರೆಯಲಾಗಿದೆ. ಅದರಲ್ಲೂ ಮುಖ್ಯವಾಗಿ ಕೇವಲ 10 ರಾಜ್ಯಗಳಲ್ಲಿ ಶೇ. 75 ರಷ್ಟು ಅಂದರೆ 23 ಕೋಟಿ ಜನಧನ ಖಾತೆಗಳಿವೆ. ಇದರಲ್ಲಿ ಉತ್ತರ ಪ್ರದೇಶದಲ್ಲಿ 4.7 ಕೋಟಿ, ಬಿಹಾರದಲ್ಲಿ 3.2 ಕೋಟಿ ಮತ್ತು ಪಶ್ವಿಮ ಬಂಗಾಳದಲ್ಲಿ 2.9 ಜನಧನ ಖಾತೆಗಳಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

Leave a Response