ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಹೆಣ್ಣು ಮಗುವಿಗೆ ತಂದೆಯಾಗಿದ್ದಾರೆ. ಇಂದು ಬೆಳಗ್ಗೆ 6.10 ನಿಮಿಷಕ್ಕೆ ರಾಧಿಕಾ ಪಂಡಿತ್ ಖಾಸಗಿ ಆಸ್ಪತ್ರೆ ಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಈ ಹಿಂದೆ ಯಶ್ ತಮಗೆ ಹೆಣ್ಣು ಮಗು ಬೇಕೆಂದು ಆಸೆಯನ್ನು ವ್ಯಕ್ತಪಡಿಸಿದ್ದರು. ವೈದ್ಯರು ಡಿಸೆಂಬರ್ 9 ಅಥವಾ ಅದಕ್ಕೆ ಮುಂಚೆ ಡೆಲಿವರಿ ದಿನಾಂಕವನ್ನು ವೈದ್ಯರು ನೀಡಿದ್ದರು. ಭಾನುವಾರ ಮಹಾಲಕ್ಷ್ಮಿ ಬಂದಿದ್ದಾಳೆಂದು ರಾಕಿಂಗ್ ಕುಟುಂಬಸ್ಥರು ಫುಲ್ ಖುಷಿಯಲ್ಲಿದ್ದಾರೆ.
ಇದೇ ತಿಂಗಳು ಡಿಸೆಂಬರ್ 21ರಂದು ಯಶ್ ಅಭಿನಯದ ಕೆಜಿಎಫ್ ರಿಲೀಸ್ ಆಗುತ್ತಿದ್ದು, ಅಭಿಮಾನಿಗಳಿಗೆ ಡಬಲ್ ಧಮಾಕಾ ಸಿಕ್ಕಿದೆ. ಕೆಲವು ದಿನಗಳ ಹಿಂದೆ ರಾಧಿಕಾರ ಸೀಮಂತ ಸಹ ಅದ್ಧೂರಿಯಾಗಿ ನಡೆದಿತ್ತು.