Friday, September 20, 2024
ಸುದ್ದಿ

ಊರವರೇ ಸೇರಿ ಕಟ್ಟಿದ್ರೂ ನೋಡಿ ಬಸ್‍ಸ್ಟ್ಯಾಂಟ್ – ಕಹಳೆ ನ್ಯೂಸ್

ಬಂಟ್ವಾಳ: ಕಳೆದ 5 ವರ್ಷಗಳಿಂದ ಬಂಟ್ವಾಳ ತಾಲೂಕಿನ ಪೆರಾಜೆ ಗ್ರಾಮದಲ್ಲಿ ಬಸ್ ನಿಲ್ದಾಣ ನಿರ್ಮಾಣವಾಗಬೇಕು ಎನ್ನುವ ಕಾರಣಕ್ಕಾಗಿ ಊರವರು ಸರಕಾರಕ್ಕೆ ಅದೆಷ್ಟೋ ಬಾರಿ ಮನವಿ ಮಾಡಿದ್ದರು. ಆದರೆ ಸರಕಾರ ಬಸ್ ನಿಲ್ದಾಣ ಮಾಡಲು ಮುಂದಾಗಿಲ್ಲ. ಇದರಿಂದಾಗಿ ಧೃತಿಗೆಡದೆ ಊರಮಂದಿ ಸರ್ಕಾರಕ್ಕೆ ಸವಾಲೆಸೆದು ತಾವೇ ಬಸ್ ಸ್ಟ್ಯಾಂಡ್ ನಿರ್ಮಿಸಿದ್ದಾರೆ.
ಕಳೆದ 15 ವರ್ಷಗಳ ಹಿಂದೆ ಪೆರಾಜೆ ಗ್ರಾಮದಲ್ಲಿ ಬಸ್ ನಿಲ್ದಾಣ ವ್ಯವಸ್ಥೆ ಇತ್ತು. ಆದರೆ ರಸ್ತೆ ಅಗಲೀಕರಣದ ವೇಳೆ ಆ ಬಸ್ ನಿಲ್ದಾಣ ಸಂಪೂರ್ಣವಾಗಿ ಧ್ವಂಸವಾಯಿತು. ಕಳೆದ 5 ವರ್ಷಗಳಿಂದ ಇಲ್ಲಿಯ ಗ್ರಾಮಪಂಚಾತ್‍ಗೆ ಬೇಡಿಕೆಯನ್ನು ಊರವರು ಸಂಘಟನೆಯವರು ಸತತವಾಗಿ ಸಲ್ಲಿಸಿದ್ದರು. ಆದ್ರೆ ಯಾವುದೇ ರೀತಿಯ ಸ್ಪಂದನೆ ದೊರೆತಿರಲಿಲ್ಲ. ಈ ಕಾರಣ ಊರಿನ ಯುವಕರು ನೇತೃತ್ವ ವಹಿಸಿಕೊಂಡು ಬಸ್ ನಿಲ್ದಾಣವನ್ನು ಮಾಡಿ ಎಲ್ಲರಿಗೆ ಅನುವು ಮಾಡಿ ಕೊಟ್ಟಿದ್ದಾರೆ. ಇದರ ಉದ್ಘಾಟನಾ ಕಾರ್ಯಕ್ರಮ ಇಂದು ನಡೆಯಿತು.
ಈ ಉದ್ಘಾಟನೆಯನ್ನು ಸ್ಥಳೀಯ ಹಿರಿಯರಾದ ಸುರೇಂದ್ರ ಮತ್ತು ವಿಶ್ವನಾಥ್ ನೆರವೇರಿಸಿದ್ರು. ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾದ ವಜ್ರನಾಥ ಕಲ್ಲಡ್ಕ, ಬಿಜೆಪಿ ಎಸ್.ಟಿ ಮೋರ್ಚಾ ಜಿಲ್ಲಾ ಅಧ್ಯಕ್ಷರಾದ ದಿನೇಶ್ ಅಮ್ಟೂರು, ಭಜರಂಗದಳದ ವಿಟಲ್ ತಾಲೂಕು ಸಂಚಾಲಕರಾದ ಅಕ್ಷಯ್ ಕಲ್ಲಡ್ಕ, ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪಾ, ಸದಸ್ಯರಾದ ಉಮೇಶ್ ಎಸ್.ಪಿ, ಉದ್ಯಮಿ ಪುಷ್ಪರಾಜ್ ಚೌಟ, ಯುವವೇದಿಕೆ ಸಂಚಾಲಕ ರಾಜರಾಂ ಕಡೂರು, ಆದ್ಯಕ್ಷ ಅಜಿತ್ ಬುಡೋಳಿ, ಕಾರ್ಯದರ್ಶಿ ಯತಿರಾಜ್ ಪೆರಾಜೆ, ಮತ್ತು ಸದಸ್ಯರು ಮತ್ತು ಊರಿನ ಹಿರಿಯರು ಉಪಸ್ಥಿತರಿದ್ದರು.

ಜಾಹೀರಾತು

ಜಾಹೀರಾತು
ಜಾಹೀರಾತು

ಜಾಹೀರಾತು