ಪುತ್ತೂರು: ಮನೆಯಂಗಳದಲ್ಲಿ ನಡೆಯುವ ಕಾರ್ಯಕ್ರಮಗಳಿಂದ ಒಳ್ಳೆಯ ಮನಸ್ಸುಗಳು ಸೃಷ್ಟಿಯಾಗುತ್ತದೆ. ಒಳ್ಳೆಯ ಮನಸ್ಸಿನಿಂದ ಒಳ್ಳೆಯ ಸಮಾಜ ನಿರ್ಮಾಣವಾಗುತ್ತದೆ. ಒಳ್ಳೆಯ ಸಮಾಜ ನಿರ್ಮಾಣದಲ್ಲಿ ಒಳ್ಳೆಯ ಸಾಹಿತ್ಯ ಸಮಾರಂಭ ಹಾಗೂ ಒಳ್ಳೆಯ ಭಗವನ್ನಾಮ ಸಂಕೀರ್ತನೆಯು ಬಹುದೊಡ್ಡ ಪಾತ್ರವನ್ನು ಹೊಂದುತ್ತದೆ ಎಂದು ಸಾಹಿತಿ ಹಾಗೂ ಪ್ರಾಂಶುಪಾಲರಾದ ಡಾ. ವರದರಾಜ ಚಂದ್ರಗಿರಿಯವರು ಹೇಳಿದರು.
ಉಪ್ಪಿನಂಗಡಿ ಕಜೆ ಈಶ್ವರ ಭಟ್ ರವರ ಮನೆ ಕೇದಾರದಲ್ಲಿ ಪುತ್ತೂರು ಸತ್ಯಸಾಯಿ ಸಮಿತಿ ವತಿಯಿಂದ ವರ್ಷಾವಧಿ ನಡೆಯುವ ಸತ್ಯಸಾಯಿ ಬಾಬಾರವರ ನಾಮಸಂಕೀರ್ತನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸತ್ಯಸಾಯಿ ಬಾಬಾರವರ ಜೀವನವೇ ಸಂದೇಶ. ಸಮಾಜಕ್ಕೆ ಧಾರ್ಮಿಕವಾಗಿ, ಶೈಕ್ಷಣಿಕವಾಗಿ, ಆಧ್ಯಾತ್ಮಿಕವಾಗಿ ಬಹುದೊಡ್ಡ ಕೊಡುಗೆಯನ್ನವರು ನೀಡಿದ್ದಾರೆ ಎಂದರು.
ಪುತ್ತೂರು ಶಾಸಕರಾಠದ ಸಂಜೀವ ಮಠಂದೂರ, ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಎನ್ ಕೆ ಜಗನ್ನಿವಾಸ ರಾವ್, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನನ್ಯ ಅಚ್ಯುತ ಮೂಡತ್ತಾಯ,ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ.ಶಿವಾನಂದ, ಕಹಳೆ ನ್ಯೂಸ್ ನ ವ್ಯವಸ್ಥಾಪಕ ಶ್ಯಾಮ ಸುದರ್ಶನ್, ಉಪ್ಪಿನಂಗಡಿ ಲಕ್ಷಿ್ಮವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಗಣೇಶ್ ಶೆಣೈ, ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಳದ ವ್ಯವಸ್ಥಾಪಣಾ ಸಮಿತಿ ಅಧ್ಯಕ್ಷ ಆಲಿಮಾರ್ ರಘುನಾಥ್ ರೈ, ಶ್ರೀ ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷ ಸುಬ್ರಮಣ್ಯ ಕೊಳತ್ತಾಯ, ಮಾಧವ ಶಿಶು ಮಂದಿರದ ಸಂಚಾಲಕ ಯುಜಿ ರಾಧ, ಜಯರಾಮ ಬಳಕ್ಕ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿರಿದ್ದರು.
ಸತ್ಯಸಾಯಿ ಸಮಿತಿಯ ಪ್ರಸನ್ನ ಭಟ್ ಬಲ್ನಾಡ್ ಸ್ವಾಗತಿಸಿದರು. ವಕೀಲರಾದ ಮಹೇಶ್ ಕಜೆ ಅಥಿತಿಗಳನ್ನು ಗೌರವಿಸಿದರು. ಡಾ.ಗೋವಿಂದ ಪ್ರಸಾಶ್ ಕಜೆ ವಂದಿಸಿದರು. ಸುಮಾರು ೪೫೦ ಕ್ಕೂ ಹೆಚ್ಚು ಜನ ಕಾರ್ಯಕ್ಕಮದಲ್ಲಿ ಬಾಗ್ಯವಹಿಸಿದ್ದರು.