Saturday, November 23, 2024
ಸುದ್ದಿ

ಡಿಜಿಟಲ್ ಗ್ರಂಥಾಲಯ ಎಂಬುದು ಮಾಹಿತಿಗಳ ಆಗರ: ಲೋಕರಾಜ್ ವಿ – ಕಹಳೆ ನ್ಯೂಸ್

ಪುತ್ತೂರು: ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಗ್ರಂಥಾಲಯ ಎಂಬುದು ತುಂಬಾ ಮುಖ್ಯವಾಗುತ್ತದೆ. ವಿದ್ಯಾರ್ಥಿಗಳಿಗೆ ಬೇಕಾದ ಹೆಚ್ಚಿನ ಮಾಹಿತಿಯು ಗ್ರಂಥಾಲಯದಲ್ಲಿ ದೊರಕುತ್ತದೆ. ಇಂದು ಗೂಗಲ್‌ನಲ್ಲಿ ನಮಗೆ ಎಲ್ಲಾ ವಿಷಯಗಳು ಸಿಗುತ್ತದೆ ಎಂಬ ಭಾವನೆಯಿದೆ. ಆದರೆ ಅದು ಎಷ್ಟರ ಮಟ್ಟಿಗೆ ನಿಖರ ಮಾಹಿತಿ ಎಂಬುದನ್ನು ಮಾತ್ರ ಹೇಳುವುದು ಕಷ್ಟ ಎಂದು ಬೆಸೆಂಟ್ ಮಹಿಳಾ ಕಾಲೇಜಿನ ಗ್ರಂಥಪಾಲಕ ಲೋಕರಾಜ್ .ವಿ ಹೇಳಿದರು.

ಅವರು ವಿವೇಕಾನಂದ ಕಾಲೇಜಿನ ಗ್ರಂಥಾಲಯ ವಿಭಾಗದ ಆಶ್ರಯದಲ್ಲಿ ಆಯೋಜಿಸಿದ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ‘ಗ್ರಂಥಾಲಯ ಇ-ಸಂಪನ್ಮೂಲ ಸದ್ಬಳಕೆ’ ವಿಷಯದ ಬಗೆಗೆ ಶುಕ್ರವಾರ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಭೌತಿಕ ಗ್ರಂಥಾಲಯದಲ್ಲಿ ಪುಸ್ತಕದ ಸಂಗ್ರಹಕ್ಕೆ ಸ್ಥಳಾವಕಾಶದ ಮಿತಿ ಇದೆ. ಆದರೆ ಡಿಜಿಟಲ್ ತಂತ್ರಜ್ಞಾನದಲ್ಲಿ ಎಂದಿಗೂ ಈ ಸ್ಥಳಾವಕಾಶದ ಕೊರತೆ ಕಾಡಲಾರದು. ಅಂತೆಯೇ ನಾವು ಯಾವುದೇ ಸ್ಥಳದಿಂದ ಮಾಹಿತಿಗಳನ್ನು, ನಮಗೆ ಬೇಕಾದ ಪುಸ್ತಕಗಳನ್ನು ಪಡೆಯಬಹುದು. ಪಾರಂಪರಿಕ ಗ್ರಂಥಾಲಯಗಳಲ್ಲಿ ನಮಗೆ ಬೇಕಾದ ಪುಸ್ತಕ ಸರಿಯಾದ ಸಮಯಕ್ಕೆ ಸಿಗದೇ ಹೋಗಬಹುದು. ಹಾಗೆಯೇ ಪಡೆದುಕೊಂಡ ಪುಸ್ತಕಗಳನ್ನು ನಿಗದಿತ ಸಮಯದಲ್ಲಿ ಹಿಂದಿರುಗಿಸಲೇಬೇಕಾಗುತ್ತದೆ. ಹಾಗಾಗಿಯೇ ಡಿಜಿಟಲ್ ತಂತ್ರಜ್ಞಾನ ಉತ್ತಮವೆನಿಸಿಕೊಳ್ಳುತ್ತದೆ ಎಂದು ಅಭಿಪ್ರಾಯಪಟ್ಟರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ, ಇಂದಿನ ದಿನಗಳಲ್ಲಿ ಅಂತರ್ಜಾಲಗಳಲ್ಲಿ ನಮಗೆ ಬೇಕಾದ ಎಲ್ಲಾ ಮಾಹಿತಿಗಳನ್ನು ಪಡೆದುಕೊಳ್ಳಬಹುದು. ಆದರೆ ಅವುಗಳಲ್ಲಿ ಬಹಳಷ್ಟು ಮಾಹಿತಿಗಳು ನಂಬಿಕಾರ್ಹವಲ್ಲ. ಹೀಗಿರುವಾಗ ನಾವು ಗ್ರಂಥಾಲಯಗಳನ್ನು ಅವಲಂಭಿಸಲೇ ಬೇಕಾಗುತ್ತದೆ. ಆದರೆ ನಮಗೆ ಅಗತ್ಯವಿರುವ ಪುಸ್ತಕಗಳು ಸಮಯಕ್ಕೆ ಸರಿಯಾಗಿ ಸಿಗದೇ ಹೋಗುವ ಸಂದರ್ಭಗಳೇ ಅಧಿಕ. ಅಂತಹ ಕ್ಷಣಗಳಲ್ಲಿ ಡಿಜಿಟಲ್ ಗ್ರಂಥಾಲಯ ಎಂಬ ಪರಿಕಲ್ಪನೆ ವರವಾಗಿ ಪರಿಣಮಿಸುತ್ತದೆ ಎಂದರು.

ಈ ಸಂದರ್ಭ ಅತೀ ಹೆಚ್ಚು ಗ್ರಂಥಾಲಯದ ಬಳಕೆ ಮಾಡಿದ ೨೦೧೭-೧೮ನೇ ಸಾಲಿನ ವಿದ್ಯಾರ್ಥಿಗಳಾದ ಬಾಲಕೃಷ್ಣ ಹಾಗೂ ಉಷಾಪಾರ್ವತಿ ಅವರನ್ನು ಗೌರವಿಸಲಾಯಿತು. ಕಾಲೇಜಿನ ಮುಖ್ಯಗ್ರಂಥಪಾಲಕಿ ವಿಜಯಾ ಟಿ. ಸ್ವಾಗತಿಸಿ, ಸಹಾಯಕ ಗ್ರಂಥಪಾಲಕಿ ನಿರ್ಮಲಾ ಎನ್. ವಂದಿಸಿದರು. ದಿವ್ಯಾ ಡಿ. ರಾವ್ ಕಾರ್ಯಕ್ರಮ ನಿರೂಪಿಸಿದರು.