Saturday, November 23, 2024
ಸುದ್ದಿ

ವಿವೇಕಾನಂದ ಎಂ.ಸಿ.ಜೆಯಲ್ಲಿ ಐಚ್ಚಿಕ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ – ಕಹಳೆ ನ್ಯೂಸ್

ಪುತ್ತೂರು: ಸ್ನಾತಕೋತ್ತರ ಅಧ್ಯಯನದ ಮೂರನೆಯ ಸೆಮೆಸ್ಟರ್‌ನಲ್ಲಿ ಮುಕ್ತ ಆಯ್ಕೆ ವಿಷಯವಾಗಿ ಆಯ್ದುಕೊಂಡ ವಿದ್ಯಾರ್ಥಿಗಳಿಗೆ ಇಲ್ಲಿನ ವಿವೇಕಾನಂದ ಕಾಲೇಜಿನ ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸ್ನಾತಕೋತ್ತರ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗದ ಸಂಯೋಜಕ ರಾಕೇಶ್ ಕುಮಾರ್ ಕಮ್ಮಜೆ ಒಬ್ಬ ವ್ಯಕ್ತಿಗೆ ಹಲವು ವಿಷಯಗಳಲ್ಲಿ ಆಸಕ್ತಿ ಇರಬಹುದು. ಆದರೆ ಏಕಕಾಲಕ್ಕೆ ಆ ಎಲ್ಲಾ ವಿಷಯಗಳಲ್ಲಿ ಪದವಿ ಪಡೆಯಲು ಕಷ್ಟ ಸಾಧ್ಯ. ಆದರೆ ತಮ್ಮ ಇಷ್ಟದ ಮತ್ತೊಂದು ವಿಷಯವನ್ನು ಎರಡು ಹಾಗೂ ಮೂರನೆ ಸೆಮೆಸ್ಟರ್‌ನಲ್ಲಿ ಒಂದು ವಿಷಯವಾಗಿ ಆಯ್ಕೆ ಮಾಡಿಕೊಂಡು ಅಧ್ಯಯನ ನಡೆಸುವ ಅವಕಾಶವನ್ನು ವಿಶ್ವವಿದ್ಯಾನಿಲಯ ಒದಗಿಸಿದೆ. ಅಂತಹ ವಿಷಯಗಳಲ್ಲಿ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮವೂ ಒಂದು. ಈ ಅಧ್ಯಯನದಿಂದ ಪತ್ರಿಕೋದ್ಯಮದ ಕಿರುಪರಿಚಯ ವಿದ್ಯಾರ್ಥಿಗಳಿಗಾಗಲು ಸಾಧ್ಯ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಿಭಾಗದ ಉಪನ್ಯಾಸಕಿ ಭವ್ಯಾ ಪಿ.ಆರ್. ನಿಡ್ಪಳ್ಳಿ ಮಾತನಾಡಿ, ಈ ಹಿಂದೆ ಕಲಿಯುವ ಆಸಕ್ತಿಯಿದ್ದರು ವಿದ್ಯಾರ್ಥಿಗಳಿಗೆ ಬೇಕಾದ ಸಂಪನ್ಮೂಲಗಳ ವ್ಯವಸ್ಥೆ ಅಚ್ಚುಕಟ್ಟಾಗಿರಲಿಲ್ಲ. ಆದರೆ ಪ್ರಸ್ತುತ ಎಲ್ಲಾ ರೀತಿಯ ಅವಕಾಶಗಳು ದೊರಕುತ್ತಿವೆ. ಆದರೆ ಸಿಕ್ಕ ಅವಕಾಶಗಳನ್ನು ಚೆನ್ನಾಗಿ ಬಳಸಿಕೊಳ್ಳುವ ಚಾಕಚಕ್ಯತೆಯ ಕೊರತೆ ಕಾಡುತ್ತಿದೆ. ವಿದ್ಯೆ ಎಂಬುವುದು ಎಂದಿಗೂ ವ್ಯರ್ಥವಾಗಲಾರದು. ಒಂದಿಲ್ಲೊಂದು ಸಂದರ್ಭದಲ್ಲಿ ನಮ್ಮ ನೆರವಿಗೆ ಬಂದೇ ಬರುತ್ತದೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಉಪನ್ಯಾಸಕಿ ಸುಶ್ಮಿತಾ ಜಯಾನಂದ್ ಮಾತನಾಡಿ, ಕಾಲೇಜಿನಲ್ಲಿ ಸಿಗುವ ವಿದ್ಯಾಭ್ಯಾಸ ನಮ್ಮ ಉದ್ಯೋಗ ಜೀವನಕ್ಕೆ ಮಾರ್ಗದರ್ಶಿ. ಉಪನ್ಯಾಸಕರು ನಮ್ಮನ್ನು ಪ್ರಾಯೋಗಿಕ ಕೆಲಸಗಳನ್ನು ಮಾಡುವಂತೆ ಒತ್ತಾಯಿಸುವಾಗ ಸಹಜವಾಗಿಯೇ ಅಸಮಾಧಾನ ಕಾಣಿಸಿಕೊಳ್ಳುತ್ತದೆ. ಆದರೆ ಉದ್ಯೋಗ ಜಗತ್ತಿಗೆ ಕಾಲಿರಿಸಿದಾಗ ಅವರ ಮಾತಿನ, ಪ್ರಯತ್ನದ ಹಿಂದಿರುವ ನಿಜವಾದ ಕಾಳಜಿ ಅರಿವಿಗೆ ಬರುತ್ತದೆ ಎಂದು ನುಡಿದರು.

ಈ ಸಂದರ್ಭ ವಿಭಾಗದ ಉಪನ್ಯಾಸಕಿಯರಾದ ಪೂಜಾ ಪಕ್ಕಳ, ಪ್ರಜ್ಞಾ ಬಾರ್ಯ, ಲ್ಯಾಬ್ ಸಹಾಯಕ ಸಂತೋಷ್ ಉಪಸ್ಥಿತರಿದ್ದರು. ಮುಕ್ತ ಆಯ್ಕೆಯ ಅನ್ವಯ ವಿಷಯವಾಗಿ ವಿವೇಕಾನಂದ ಮಹಾವಿದ್ಯಾಲಯದಲ್ಲಿ ಸ್ನಾತಕೋತ್ತರ ಪತ್ರಿಕೋದ್ಯಮವನ್ನು ಆರಿಸಿಕೊಂಡ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.ಉಪನ್ಯಾಸಕಿ ರಾಧಿಕಾ ಕಾನತ್ತಡ್ಕ ಕಾರ್ಯಕ್ರಮ ನಿರ್ವಹಿಸಿದರು.