Friday, September 20, 2024
ಸುದ್ದಿ

ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ – ಕಹಳೆ ನ್ಯೂಸ್

ಮಾಣಿ: ರಸ್ತೆ ಮಧ್ಯೆಯಲ್ಲಿ ಲಾರಿಯೊಂದು ಕೆಟ್ಟು ನಿಂತ ಪರಿಣಾಮ ರಸ್ತೆ ಸಂಚಾರಕ್ಕೆ ಅಡಚಣೆಯಾದ ಘಟನೆ ಮಾಣಿ ಸಮೀಪದ ಹಳಿರ ಎಂಬಲ್ಲಿ ನಡೆದಿದೆ.

ಮುಂಜಾನೆ ಸುಮಾರು ನಾಲ್ಕು ಗಂಟೆಯ ವೇಳೆ ಲಾರಿಯು ಎಕ್ಸೀಲ್ ತುಂಡಾಗಿ ಕೆಟ್ಟುಹೋದ ಪರಿಣಾಮ ಬೆಳಿಗ್ಗೆ ಯಿಂದಲೇ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸಂಚಾರ ಅಡಚಣೆಯಾದರಿಂದ ಸಾರ್ವಜನಿಕರು ಸಾಕಷ್ಟು ತೊಂದರೆ ಅನುಭವಿಸಿದರು.

ಸ್ಥಳೀಯರು ವಿಟ್ಲ ಠಾಣೆ ಗೆ ತಿಳಿಸಿದರೂ ಕೂಡ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ವೇಳೆ ಸಾರ್ವಜನಿಕರೆ ಮುಂದೆ ನಿಂತು ಟ್ರಾಫಿಕ್ ಕ್ಲೀಯರ್ ಮಾಡಿದ್ದಾರೆ.