Thursday, April 10, 2025
ಸುದ್ದಿ

ಲಿಂಗಾಯತರು ಹಿಂದೂಗಳಲ್ಲ ಎಂದರೆ, ಇನ್ಯಾರು ಹಿಂದೂಗಳು..? | ಪ್ರತೇಕ ಧರ್ಮ ಬೇಡ – ಪೇಜಾವರ ಶ್ರೀ.

ಉಡುಪಿ(ಅ.17): ನಮ್ಮನ್ನು ಬಿಟ್ಟು ಬೇರೆ ಹೋಗಬೇಡಿ, ಲಿಂಗಾಯತ ವೀರಶೈವರು ಹಿಂದೂಗಳು ಎಂದು ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಪೇಜಾವರ ಶ್ರೀಗಳು ವಿರೋಧ ವ್ಯಕ್ತಪಡಿಸಿದ್ದಾರೆ.

ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ಬಗ್ಗೆ ಮಾತನಾಡಿದ ಅವರು, ಅವರ ಆಂತರಿಕ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಹೊರಗಿನವನಾಗಿ ಸಲಹೆ ನೀಡುತ್ತಿದ್ದೇನೆ. ನಮ್ಮನ್ನು ಬಿಟ್ಟು ಬೇರೆ ಹೋಗಬೇಡಿ, ಸಹೋದರರಂತೆ ಬಾಳೋಣ. ಲಿಂಗಾಯತರು ಹಿಂದೂಗಳಲ್ಲ ಎಂದರೆ, ಇನ್ಯಾರು ಹಿಂದೂಗಳು.. ಎಂದು ಲಿಂಗಾಯತ ಪ್ರತ್ಯೇಕ ಧರ್ಮವಾದಿಗಳಿಗೆ ಪೇಜಾವರ ಶ್ರೀಗಳ ಪ್ರಶ್ನಿಸಿದ್ದಾರೆ.
ಒಂದಾಗಿದ್ದರೆ ಲಿಂಗಾಯತ ಸಮಾಜಕ್ಕೆ ಬಲ. ಬ್ರಾಹ್ಮಣರಿಂದ, ಮಾಧ್ವರಿಂದ ಬಸವಣ್ಣಗೆ ಅನ್ಯಾಯ ಆಗಿಲ್ಲ. ಪ್ರೇಮದ ಸಲಹೆ, ನಮ್ಮನ್ನು ಬಿಟ್ಟು ಹೋಗಬೇಡಿ ಎಂದು ಮನವಿ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು

Leave a Response

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ