ಮಂಜೇಶ್ವರ: ಜೈ ಶ್ರೀ ರಾಮ್ ಸಮಾಜ ಸೇವಾ ಸಂಸ್ಥೆ ಮಂಜೇಶ್ವರ ಇದರ ನವೆಂಬರ್ ತಿಂಗಳ 20ನೇ ಯೋಜನೆ ಮೊತ್ತವನ್ನು ಮಂಗಲ್ಪಾಡಿ ಗ್ರಾಮ ಪಂಚಾಯತ್‌ನ ಅಡ್ಕ ವೀರನಗರ ನಿವಾಸಿ ದಿ|ಐತಪ್ಪರ ಪತ್ನಿ ಕಮಲರ ಮನೆ ನಿರ್ಮಾಣಕ್ಕೆ ನೀಡಲಾಯಿತು.
ಮೂಲತಃ ಕುಂಬಳೆ ಬಳಿಯ ಬೇಳ ನಿವಾಸಿಯಾಗಿದ್ದ ಐತಪ್ಪರವರು ಕೂಲಿ ಕೆಲಸ ಮಾಡುತ್ತಿದ್ದು, ಅಡ್ಕ ವೀರನಗರದಲ್ಲಿ ದಾನಿಯೊರ್ವರು ನೀಡಿದ್ದ ಜಾಗದಲ್ಲಿ ಮಣ್ಣಿನ ಗೋಡೆಯ ಪುಟ್ಟ ಮನೆ ನಿರ್ಮಿಸಿ ಪತ್ನಿ ಕಮಲರ ಜೊತೆ ವಾಸಿಸುತ್ತಿದ್ದರು. ದಂಪತಿಗಳಿಗೆ ಹುಟ್ಟಿದ 6 ಮಕ್ಕಳು ಕೂಡ ಹುಟ್ಟಿದ ಕೆಲವೇ ತಿಂಗಳುಗಳಲ್ಲಿ ಅಸೌಕ್ಯ ಬಾಧಿಸಿ ನಿಧನರಾಗುತ್ತಿದ್ದರು.
ಕೊನೆಯ ಪುತ್ರನಾದ ರಾಧಾಕೃಷ್ಣ ತನ್ನ 16 ನೇ ವಯಸ್ಸಿನಲ್ಲಿ ಮೂತ್ರಪಿಂಡದ ಸಮಸ್ಯೆಯಿಂದ ನಿಧನ ಹೊಂದಿದನು. ಈಗಿರುವಾಗ ಕೆಲವೇ ವರ್ಷದಲ್ಲಿ ಪತಿ ಐತ್ತಪ್ಪ ಕೂಡ ಕಮಲರನ್ನು ಏಕಾಂಗಿಯಾಗಿ ಮಾಡಿ ಇಹಲೋಕ ತ್ಯಜಿಸಿದರು. ಈ ನೋವಿನಲ್ಲೂ ಕಮಲರು ಕಷ್ಟಪಟ್ಟು ದುಡಿದು ಬದುಕುತ್ತಿದ್ದಾಗ ಇತ್ತೀಚೆಗೆ ಸುರಿದ ಬಾರಿ ಗಾಳಿ ಮಳೆಗೆ ಇವರ ಮನೆಯ ಒಂದು ಭಾಗ ಕುಸಿದು ಬಿದ್ದಿದೆ. ಮಣ್ಣಿನ ಗೋಡೆಯಾದುದರಿಂದ ಮಾಟೆಗಳು ಉಂಟಾಗಿ ವಿಷಜಂತುಗಳ ಆಶ್ರಯ ತಾಣವಾಗಿದೆ.
ಇತ್ತೀಚೆಗೆ ಇವರ ಮನೆಗೆ ಹೊಕ್ಕ ಹೆಬ್ಬಾವು ಎರಡು ದಿನ ಅವಿತು ಕೂತಿದ್ದು ಕೊನೆಗೆ ಮಾಟೆಯಿಂದ ಹೊರಗೆ ಬಂದಿದೆ. ಇದೀಗ ಇವರ ಮನೆ ಧಾರಾಶಾಯಿಯಾಗುವ ಮೊದಲು ಸೂಕ್ತವಾದ ಪುಟ್ಟ ಸೂರು ಆಗಬೇಕೆಂಬ ಕನಸು ಹೊತ್ತು ಕಣ್ಣೀರಿಡುತ್ತಿದ್ದರು.
ಈ ಬಗ್ಗೆ ಮಾಹಿತಿ ಅರಿತ ಮಂಜೇಶ್ವರದ ಸಮಾಜಮುಖಿ ಸಂಘಟನೆಯಾದ ಜೈ ಶ್ರೀ ರಾಮ್ ಸಮಾಜ ಸೇವಾ ಸಂಸ್ಥೆ ತಮ್ಮ ಸಂಸ್ಥೆಯ ಸದಸ್ಯರಿಂದಲೇ ಸಂಗ್ರಹಿಸಿದ ನವೆಂಬರ್ ತಿಂಗಳ 20ನೇ ಯೋಜನೆಯ ಮೊತ್ತವನ್ನು ಕಮಲರ ಮನೆಗೆ ತೆರಳಿ ಸಂಸ್ಥೆಯ ಗೌರವ ಸಲಹೆಗಾರ ನ್ಯಾ| ನವೀನ್‌ರಾಜ್ ಕೆ.ಜೆ ಅಧ್ಯಕ್ಷತೆಯಲ್ಲಿ ಸಂಸ್ಥೆಯ ಗೌರವ ಮಾರ್ಗದರ್ಶಕರಾದ ಶ್ರೀ ರಾಜ ಬೆಳ್ಚಪ್ಪಾಡರವರು ವಿಶೇಷ ಪ್ರಾರ್ಥನೆ ಸಲ್ಲಿಸಿ ಕಮಲರ ಕೈಗೆ ಹಸ್ತಾಂತರಿಸಿದರು.
ಈ ವೇಳೆ ಸಂಸ್ಥೆಯ ಸ್ಥಾಪಕ ಪ್ರದೀಪ್ ಮೊರತ್ತಣೆ, ಗೌರವಾಧ್ಯಕ್ಷ ನಳಿನಾಕ್ಷ ಆಚಾರ್ಯ ಉದ್ಯಾವರ, ಅಧ್ಯಕ್ಷ ರತನ್ ಕುಮಾರ್ ಹೊಸಂಗಡಿ, ಗೌರವ ಸಲಹೆಗಾರರಾದ ಶ್ರೀಮತಿ ಆಶಾ ಲೋಕೆಶ್ ಮಾಡ, ಗಿರಿ ವೀರನಗರ, ಜಗದೀಶ್ ಪ್ರತಾಪ ನಗರ, ತುಳಸಿದಾಸ್ ಮಂಜೇಶ್ವರ, ದೀಪಕ್ ರಾಜ್ ಉಪ್ಪಳ, ಪ್ರಧಾನ ಸಂಚಾಲಕ ಸುಖೇಶ್ ಬೆಜ್ಜ, ಉಪಾಧ್ಯಕ್ಷ ಲೋಕೆಶ್ ಮಾಡ, ಸದಸ್ಯರಾದ ಅಶೋಕ್ ಅಚಾರ್ಯ ಉದ್ಯಾವರ, ತಿಲಕ್ ಸುವರ್ಣ ಮುಂಡಿತ್ತಡ್ಕ, ವಸಂತ್ ಶೆಟ್ಟಿಗಾರ್ ಬೋರ್ಕಳ, ಸತ್ಯ ವೀರನಗರ, ಗುರುಕಿರಣ್ ಅಚಾರ್ಯ ಕಾಳಿಕಾಂಬ, ರಾಜೇಶ್ ಮಜಿಬೈಲ್, ರೂಪೇಶ್ ಜೋಡುಕಲ್ಲು, ಕೃಷ್ಣ ಅಟ್ಟೇಗೋಳಿ, ನಾಗೇಶ್ ಪಿಲಿಕಳ ವರ್ಕಾಡಿ, ನವೀನ್ ಬೇಕೂರು, ಸೂರಜ್ ಪಜಿಂಗಾರು, ಜೀವನ್ ಆಚಾರ್ಯ ಕಡಂಬಾರ್, ಸಚಿನ್ ಆಚಾರ್ಯ ಕಾಳಿಕಾಂಬ, ಗಿರೀಶ್ ಮುನ್ನಿಪ್ಪಾಡಿ, ನಿತಿನ್ ಮಾನ್ಯ, ಶರತ್ ಕಡಂಬಾರ್, ಶ್ರೀಮತಿ ಚಂದ್ರಾಕಲಾ, ವಸಂತ ಶೆಟ್ಟಿಗಾರ್ ಬೋರ್ಕಳ, ಚಂದ್ರಹಾಸ ಶಾಸ್ತ ಮಂಜೇಶ್ವರ, ಮೊದಲದವರು ಉಪಸ್ಥಿತರಿದ್ದರು.