Monday, January 20, 2025
ಕ್ರೀಡೆಸುದ್ದಿ

ಬಂಟರ ಸಂಘ ಸಜೀಪ ವಲಯ ವಾರ್ಷಿಕ ಕ್ರೀಡೋತ್ಸವ 2018ರ ಸಮಾರೋಪ ಸಮಾರಂಭ – ಕಹಳೆ ನ್ಯೂಸ್

ಬಂಟ್ವಾಳ: ಬಂಟರ ಸಂಘ ಬಂಟವಾಳ ತಾಲೂಕು (ರಿ) ವಲಯ ಬಂಟರ ಸಂಘ ಸಜೀಪ ವಲಯ ಇವರ ಸಹಕಾರದೊಂದಿಗೆ  ಶ್ರೀ ಕ್ಷೇತ್ರ ಮಿತ್ತಮಜಲು ಗದ್ದೆಯ ಕ್ರೀಡಾಂಗಣದಲ್ಲಿ ನಡೆದ ವಾರ್ಷಿಕ ಕ್ರೀಡೋತ್ಸವ  2018 ಇದರ ಸಮಾರೋಪ ಸಮಾರಂಭ ಬಂಟರ ಸಂಘ ಬಂಟವಾಳ ವಲಯ ಅಧ್ಯಕ್ಷ ನಗ್ರಿಗುತ್ತು ವಿವೇಕ್ ಶೆಟ್ಟಿ ಅವರ ಅಧ್ಯಕ್ಷ ತೆಯಲ್ಲಿ ನಡೆಯಿತು.

ಶಿಸ್ತು ಬದ್ಧ ಕ್ರೀಡಾ ಕೂಟದ ಮೂಲಕ ಯಶಸ್ಸು ಸಾಧಿಸಲು ಪ್ರಯತ್ನಿಸಿದ  ಎಲ್ಲಾ ವಲಯದವರಿಗೂ ಅಭಿನಂದನೆ ಸಲ್ಲಿಸಿದರು. ಬೇರೆ ಬೇರೆ ವಲಯಗಳಲ್ಲಿ ಇಂತಹ ಕ್ರೀಡಾ ಕೂಟಗಳು ಯಶಸ್ವಿಯಾಗಿ ನಡೆಸಿಕೊಂಡು ಹೋಗಲು ಎಲ್ಲರ ಸಹಕಾರ ಬೇಕಾಗಿದೆ ಎಂದರು.
ಶಾಸಕ ರಾಜೇಶ್ ನಾಯಕ್ ಮಾತನಾಡಿ ಕ್ರೀಡಾ ಕ್ಷೇತ್ರ ದಲ್ಲುಲಿ ಸಾಧನೆ ಮಾಡಲು ಇದೊಂದು ವೇದಿಕೆ ಯಾಗಿದೆ. ಕ್ರೀಡಾ ಕ್ಷೇತ್ರ ದಲ್ಲಿ ಪರಸ್ಪರ ಪ್ರೀತಿಸುವ ಗುಣವನ್ನು  ಮೈಗೂಡಿಸಿಕೊಂಡು ಮುನ್ನೆಡೆದಾಗ ಮಾತ್ರ ಕ್ರೀಡೆಯಲ್ಲಿ
 ಯಶಸ್ಬಿಯಾಗಲು ಸಾಧ್ಯ ಎಂದು ಅವರು ಹೇಳಿದರು.
ಈ ಸಂಧರ್ಭದಲ್ಲಿ ಮುಂಬಯಿ ಕಾರ್ಪೊರೇಟ್ ರ್ ಸಂತೋಷ್ ಶೆಟ್ಟಿ ದಳಂದಿಲ,ಪ್ರಜಾ ಟಿ.ವಿ.ಮುಖ್ಯಸ್ಥ ಗುಣರಂಜನ್ ಶೆಟ್ಟಿ, ಅಶ್ವಿನ್ ಕುಮಾರ್ ರೈ,  ಎ.ಜೆ.ಆಸ್ಪತ್ರೆ ಯ ಮುಖ್ಯಸ್ಥ ಡಾ! ಪ್ರಶಾಂತ್ ಮಾರ್ಲ, ಸುಪ್ರೀತ್ ಆಳ್ವ ಪೊನ್ನೋಡಿ, ಅರುಣ್ ಆಳ್ವ ಕಾಂತಾಡಿಗುತ್ತು, ಪ್ರಸಾದ್ ಶೆಟ್ಟಿ ಹುಬ್ಬಳ್ಳಿ, , ಮುಂಬಯಿ ಉದ್ಯಮಿ ಆನಂದ ರೈ ಮಾಡಂತಾಡಿಗುತ್ತು, ಕ್ಯಾಪ್ಟನ್ ಬ್ರಿಜೇಶ್ ಚೌಟ, ಉದ್ಯಮಿ ರಿತೇಶ್ ಶೆಟ್ಟಿ, ಉದ್ಯಮಿ ನಿತಿನ್ ಶೆಟ್ಟಿ,  ಉದ್ಯಮಿ ಸಾಯಿಗಿರಿಧರ್ ಶೆಟ್ಟಿ, ಉದ್ಯಮಿ ಬಾಲಚಂದ್ರನ್, ಉದ್ಯಮಿ‌ ಭಗವಾನ್ ದಾಸ್ ಭಂಡಾರಿ ಮುಂಬಯಿ, ಪುಣೆ , ದೇವಿಪ್ರಸಾದ್ ಪೂಂಜಾ ಮತ್ತಿತರರು ಉಪಸ್ಥಿತರಿದ್ದರು.
ಶಾಸಕ ರಾಜೇಶ್ ನಾಯಕ್, ಮುಂಬಯಿ ಪನ್ದೇಲ್ ಕಾರ್ಪೋರೇಟ್ ರ್ ಸಂತೋಷ್ ಶೆಟ್ಟಿ  ದಳಂದಿಲ,    ಅವರು ಸಹಿತ ಊರಿನ ಹಾಗೂ ಪರ ಊರಿನಿಂದ ಆಗಮಿಸಿ ಈ ಕ್ರೀಡಾ ಕೂಟ ಕ್ಕೆ ಸಹಕಾರ ನೀಡಿದ ಮಹನೀಯರ ನ್ನು  ಗೌರವಿಸಲಾಯಿತು.
ಕ್ರೀಡೆಯಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ ಕ್ರೀಡಾ ಪಟುಗಳನ್ನು ಸನ್ಮಾನಿಸಲಾಯಿತು.
ಕ್ರೀಡಾ ಕೂಟದಲ್ಲಿ ತೀರ್ಪು ಗಾರರಾಗಿ ಭಾಗವಹಿಸಿದ ತೀರ್ಪುಗಾರರ ನ್ನು ಗೌರವಿಸಲಾಯಿತು.ಕ್ರೀಡಾ ಕೂಟವನ್ನು ಏರ್ಪಡಿಸಿದ ನಗ್ರಿಗುತ್ತು ವಿವೇಕ್ ಶೆಟ್ಟಿ ಅವರನ್ನು ಮತ್ತು ಶ್ರೀಕಾಂತ್ ಶೆಟ್ಟಿ ಅವರನ್ನು ಗೌರವಿಸಲಾಯಿತು. ‌
ಫಲಿತಾಂಶ: ವಲಯ ವಿಭಾಗದಲ್ಲಿ ಗುಂಪು ಸ್ಪರ್ಧೆ ಯಲ್ಲಿ ಭಾಗವಹಿಸಿ ವಿಜೇತರಾದ ವರು ಕಬಡ್ಡಿ ಪುರುಷರ ವಿಭಾಗದಲ್ಲಿ ವಿಟ್ಲ ವಲಯ ಪ್ರಥಮ, ಕಲ್ಲಡ್ಕ ವಲಯ ದ್ವಿತೀಯ, ತ್ರೋಬಾಲ್ ಮಹಿಳೆಯರ ವಿಭಾಗದಲ್ಲಿ ಪ್ರಥಮ ಬಿಸಿರೋಡ್ ವಲಯ, ದ್ವಿತೀಯ ಸರಪಾಡಿ, ವಾಲಿಬಾಲ್ ಪುರುಷ ವಿಭಾಗದಲ್ಲಿ ಸಜೀಪ, ದ್ವಿತೀಯ ಬಿಸಿರೋಡ್, ವಾಲಿಬಾಲ್ ಮಹಿಳೆಯರ ವಿಭಾಗದಲ್ಲಿ ಪ್ರಥಮ ಪರಂಗಿಪೇಟೆ, ದ್ವಿತೀಯ ಕಲ್ಲಡ್ಕ, ಹಗ್ಗ ಜಗ್ಗಾಟ ಪುರುಷರ ವಿಭಾಗ ಪ್ರಥಮ ಮಾಣಿ, ದ್ವಿತೀಯ ವಿಟ್ಲ, ಹಗ್ಗ ಜಗ್ಗಾಟ ಮಹಿಳೆಯರ ವಿಭಾಗ ಪ್ರಥಮ ಮಾಣಿ, ದ್ವಿತೀಯ ಪರಂಗಿಪೇಟೆ , ಹಾಗೂ ಸಮಗ್ರ ಪ್ರಥಮ ಪ್ರಶಸ್ತಿ ಯನ್ನು  ಮಾಣಿ ಪಡೆದುಕೊಂಡರೆ ದ್ವಿತೀಯ ಸಮಗ್ರ ಪ್ರಶಸ್ತಿ ಕಲ್ಲಡ್ಕ ವಲಯ ಪಡೆದುಕೊಂಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು