Friday, November 22, 2024
ಸುದ್ದಿ

ವಿದ್ಯಾಮಾತ ಸಂಸ್ಥೆಯಿಂದ ಎಲ್ಲಾ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೂ ಉದ್ಯೋಗ ದೊರೆಯುವಂತಾಗಲಿ: ಶಕುಂತಳಾ ಶೆಟ್ಟಿ – ಕಹಳೆ ನ್ಯೂಸ್

ವಿದ್ಯಾಮಾತ ಪೌಂಡೇಶನ್ ಸಂಸ್ಥೆಯು ವತಿಯಿಂದ ಗಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಹೊಸ ಚಿಂತನೆಯನ್ನು ಇರಿಸಿಕೊಂಡು ಅನ್‌ಲೈನ್ ಮೂಲಕ ಸಂದರ್ಶನವನ್ನು ಎದುರಿಸುವ ಉದ್ಯೋಗ ತರಬೇತಿಯನ್ನು ಆರಂಭಿಸಿದೆ.

ಈ ಕಾರ್ಯಕ್ರಮವನ್ನು ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ದೀಪ ಹಚ್ಚುವ ಮೂಲಕ ಉದ್ಘಾಟಿಸಿದರು ಬಳಿಕ ಮಾತನಾಡಿದ ಅವರು ವಿದ್ಯಾಮಾತ ಸಂಸ್ಥೆಯಿಂದ ಅನೇಕ ವಿದ್ಯಾರ್ಥಿಗಳು ಉದ್ಯೋಗಕ್ಕೆ ಸೇರಿದ್ದು ಈ ಸಂಸ್ಥೆಯಿಂದ ಎಲ್ಲಾ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೂ ಉದ್ಯೋಗ ದೊರೆಯುವಂತಾಗಲಿ ಎಂದು ಶುಭಾಹಾರೈಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ವೇಳೆ ವಿದ್ಯಾ ಮಾತ ಸಂಸ್ಥೆಯ ಅಧ್ಯಕ್ಷ ಭಾಗ್ಯೇಶ್ ರೈ ಮಾತನಾಡಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಉದ್ಯೋಗವನ್ನು ಪಡೆಯವಲ್ಲಿ ಅಧಿಕವಾಗಿ ವಿಫಲರಾಗುತ್ತಾರೆ ಏಕೆಂದರೆ ಅವರಿಗೆ ಸರಿಯಾದ ಮಾಹಿತಿ ಕೊರತೆ, ಇಂಗ್ಲೀಷ್ ಸಂವಹನ ಇರದಿರುವುದೆ ಮುಖ್ಯ ಕಾರಣ, ನಗರಗಳಲ್ಲಿ ನಡೆಯು ಸಂದರ್ಶನಕ್ಕೆ ಗ್ರಾಮೀಣ ಪ್ರದೇಶದವರು ತೆರಳಲು ಭಯ ಪಡುತ್ತಾರೆ ಅಂತವರಿಗೆ ಸರಿಯಾದ ಮಾರ್ಗದರ್ಶನ ನೀಡಿ ಉದ್ಯೋಗ ಸಿಗುವಂತೆ ಮಾಡುವುದು ನಮ್ಮ ಉದ್ದೇಶವೆಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಇದೇ ವೇಳೆ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಏನೆ ಅದರೂ ವಿದ್ಯಾಮಾತ ಸಂಸ್ಥೆಯ ಕೆಲಸ ಶ್ಲಾಘನಿಯವಾಗಿದ್ದು ಗ್ರಾಮೀಣ ಪ್ರದೇಶದ ಜನತೆಗೆ ಹೊಸ ಆಶಾಕಿರಣವಾಗಿದೆ. ಈ ಕಾರ್ಯಕ್ಕೆ ಶ್ಯಾಮ ಸುಂದರ್ ರಾವ್, ದಿನೇಶ್ ಪಿ.ವಿ, ಸುದರ್ಶನ್ ರೈ ನಿರ್ಪಾಡಿ ಮತ್ತಿತ್ತರರು ಸಾಥ್ ನೀಡಿದರು.