Recent Posts

Sunday, January 19, 2025
ಸುದ್ದಿ

ಮತದಾನಕ್ಕೆ ಆಧಾರ್‌ ಕಾರ್ಡ್‌ ಕಡ್ಡಾಯ | ಅಧಾರ್ ಮಾತ್ರ ಏಕೈಕ ಗುರುತು ಪತ್ರ ?

ಹೈದರಾಬಾದ್‌ : ಶೀಘ್ರವೇ ಮತದಾನಕ್ಕೆ ಆಧಾರ್‌ ಕಾರ್ಡನ್ನು ಏಕೈಕ ಗುರುತು ಪತ್ರವಾಗಿ ಬಳಸುವ ಸಾಧ್ಯತೆ ಇದೆಯೇ ?

 

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದೇಹಕ್ಕೆ ಉತ್ತರ ಎನ್ನುವಂತೆ ಮಾಜಿ ಮುಖ್ಯ ಚುನಾವಣಾ ಆಯುಕ್ತ ಟಿ ಎಸ್‌ ಕೃಷ್ಣಮೂರ್ತಿ ಅವರು “ಮತದಾನಕ್ಕೆ ಆಧಾರ್‌ ಕಾರ್ಡನ್ನೇ ಏಕೈಕ ಗುರುತು ಪತ್ರವಾಗಿ ಬಳಸಬಹುದಾಗಿದೆ’ ಎಂದು ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಕೃತ ಚುನಾವಣಾ ಆಯೋಗವು ಮತದಾನಕ್ಕೆ ವೋಟರ್‌ ಐಡಿ ಕಾರ್ಡ್‌ ಇಲ್ಲದ ಸಂದರ್ಭಗಳಲ್ಲಿ ಪಾಸ್‌ಪೋರ್ಟ್‌ ಸೇರಿದಂತೆ ಹಲವಾರು ಬಗೆಯ ದಾಖಲೆ ಪತ್ರಗಳನ್ನು ಬಳಸುವುದಕ್ಕೆ ಅವಕಾಶ ನೀಡುತ್ತದೆ.

“ಇಂದು ನಾವು ಮತದಾನಕ್ಕೆ ಹಲವಾರು ಬಗೆಯ ಗುರುತು ಪತ್ರಗಳನ್ನು ಬಳಸುತ್ತಿದ್ದೇವೆ ಮತ್ತು ಇದು ಹಲವಾರು ಬಗೆಯ ತೊಂದರೆ, ಗೊಂದಲಗಳಿಗೆ ಕಾರಣವಾಗಿದೆ. ಅಂತಿರುವಾಗ ಈ ಸಮಸ್ಯೆಯ ಶಾಶ್ವತ ನಿವಾರಣೆಗಾಗಿ ಮತದಾನಕ್ಕೆ ಒಂದೇ ಗುರುತು ಪತ್ರವನ್ನು ಬಳಸುವುದು ಒಳ್ಳೆಯದು. ಆಧಾರ್‌ ಕಾರ್ಡ್‌ ಈ ಉದ್ದೇಶಕ್ಕೆ ಉತ್ತಮವಾಗಿದೆ’ ಎಂದು ಮಾಜಿ ಸಿಇಸಿ ಕೃಷ್ಣಮೂರ್ತಿ ಹೇಳಿದರು.

 

“ಆಧಾರ್‌ ಕಾರ್ಡನ್ನು ನೀವು ಬೇರೆಲ್ಲ ಉದ್ದೇಶಗಳಿಗೆ ಬಳಸುವಿರಾದರೆ ಮತದಾನಕ್ಕೂ ಅದೇ ಗುರುತು ಪತ್ರ ಬಳಸಬಹುದಾಗಿದೆ ಮತ್ತು ಅದರಿಂದ ಅನುಕೂಲವೂ ಆಗುತ್ತದೆ’ ಎಂದವರು ಹೇಳಿದರು.

“ದೇಶದಲ್ಲೀಗ ಬಹುತೇಕ ಎಲ್ಲರೂ ಆಧಾರ್‌ ಕಾರ್ಡ್‌ ಹೊಂದಿದ್ದಾರೆ. ಇನ್ನೂ ಅದನ್ನು ಹೊಂದದವರಿಗೆ 2019 ಅಥವಾ 2020 ಕಟ್‌ ಆಫ್ ಡೇಟ್‌ ಎಂದು ನಿಗದಿಸಬಹುದು. ಆ ಬಳಿಕ ಆಧಾರ್‌ ಕಾರ್ಡನ್ನು ಮತದಾನಕ್ಕೆ ಏಕೈಕ ಗುರುತು ಪತ್ರವೆಂದು ಸರಕಾರ ಘೋಷಿಸಬಹುದು’ ಎಂದು ಕೃಷ್ಣಮೂರ್ತಿ ಹೇಳಿದರು.

Leave a Response