Tuesday, January 21, 2025
ಸುದ್ದಿ

ಗ್ಯಾಂಗ್ ರೇಪ್ ಪ್ರಕರಣ: ಬಂಟ್ವಾಳ ಪೊಲೀಸರ ಗುಪ್ತ ಅಜೆಂಡಾ, ದಲಿತ ಮುಖಂಡರ ಆರೋಪ – ಕಹಳೆ ನ್ಯೂಸ್

ಮಂಗಳೂರು: ಮಂಗಳೂರಿನ ತೋಟ ಬೆಂಗ್ರೆ ಬೀಚ್ ನಲ್ಲಿ ದಲಿತ ಯುವತಿಯ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಬಂಟ್ವಾಳ ನಗರ ಠಾಣೆಯ ಪೊಲೀಸರು ಸಂತ್ರಸ್ಥ ಯುವತಿಯ ದೂರು ಸ್ವೀಕರಿಸಲು ನಿರಾಕರಿಸುವ ಮೂಲಕ ಠಾಣೆಗೆ ಬಾರದಂತೆ ತಡೆಯುವ ಗುಪ್ತ ಅಜೆಂಡ ಸಾಭೀತಾಗಿದೆ ಎಂದು ಬಂಟ್ವಾಳದ ದಲಿತ ಮುಖಂಡರು ಆರೋಪಿಸಿದ್ದಾರೆ.

ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ದ.ಕ.ಜಿಲ್ಲಾ ಅಂಬೇಡ್ಕರ್ ಫೋರಂ ಫಾರ್ ಸೋಷಿಯಲ್ ಜಸ್ಟೀಸ್‌ನ ಅಧ್ಯಕ್ಷ ಭಾನುಚಂದ್ರ ಕೃಷ್ಣಾಪುರ ಬಂಟ್ವಾಳ ಪೊಲೀಸರು ಕಳ್ಳ ಕಾಕರು, ಖದೀಮರು, ಗೂಂಡಾಗಳು ಬಂದಾಗ ಕುರ್ಚಿ ನೀಡಿ ರಾಜಮರ್ಯಾದೆ ನೀಡುತ್ತಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಆದರೆ ನೊಂದು ಬರುವ ದೂರುದಾರರ ದೂರು ಸ್ವೀಕರಿಸುವ ಮತ್ತು ಅಲಿಸುವ ಕನಿಷ್ಠ ಸೌಜನ್ಯವನ್ನು ತೋರುವುದಿಲ್ಲ ಎಂದು ಆರೋಪಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಪೊಲೀಸರು ಇಂತಹ ಸಮಾಜ ಘಾತುಕ ಶಕ್ತಿಗಳನ್ನು ಬೆಳೆಯಲು ಬಿಟ್ಟಿರುವುದೇ ಸಾಮೂಹಿಕ ಅತ್ಯಾಚಾರದಂತ ಹೇಯ ಘಟನೆ ನಡೆಯುತ್ತಿದೆ ಎಂದ ಅವರು ಪೊಲೀಸರು ಈ ಅತ್ಯಾಚಾರ ಪ್ರಕರಣದಲ್ಲಿ ಕೇವಲ ಕೇಸು ದಾಖಲಿಸಿ,ಆರೋಪಿಗಳ ಬಂಧಿಸಿದ ಮಾತ್ರಕ್ಕೆ ಮುಗಿಯುವುದಿಲ್ಲ. ಈ ಕೃತ್ಯದ ಮೂಲವನ್ನು ಪತ್ತೆಹಚ್ಚಬೇಕು ಎಂದರು.