Tuesday, January 21, 2025
ಸುದ್ದಿ

ಸೆಟ್ಟೇರಲು ರೆಡಿಯಾಗ್ತಿದೆ ಡಿ ಬಾಸ್ ನ ‘ಡಿ53’ – ಕಹಳೆ ನ್ಯೂಸ್

ಬೆಂಗಳೂರು: ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ ಈ ಮಾಸಾಂತ್ಯ-ವರ್ಷಾಂತ್ಯದ ಜೊತೆಗೆ ಮತ್ತೊಂದು ಸಂಭ್ರಮ. ಯಾಕಂದ್ರೆ ದರ್ಶನ್ ಅಭಿನಯದ 53ನೇ ಚಿತ್ರದ ಶೀರ್ಷಿಕೆ ಇದೇ ಡಿ.25 ರಂದು ಅಂದರೆ ಕ್ರಿಸ್‍ಮಸ್ ದಿನದಂದು ಘೋಷಣೆಯಾಗಲಿದೆ.

ಮಾತ್ರವಲ್ಲ, ಅಂದೇ ಈ ಚಿತ್ರದ ಮುಹೂರ್ತ ನೆರವೇರುವ ಸಾಧ್ಯತೆಗಳೂ ಇವೆ.ತರುಣ್ ಸುಧೀರ್ ನಿರ್ದೇಶನದ ಹೊಸ ಚಿತ್ರದಲ್ಲಿ ದರ್ಶನ್ ಅಭಿನಯಿಸಲಿರುವುದು ಅಭಿಮಾನಿಗಳೆಲ್ಲರಿಗೂ ಗೊತ್ತಿರುವಂಥ ವಿಷಯವೇ. ಇದು ದರ್ಶನ್ 53ನೇ ಚಿತ್ರವಾದ್ದರಿಂದ “ಡಿ53” ಎಂಬ ತಾತ್ಕಾಲಿಕ ಹೆಸರಿಟ್ಟುಕೊಂಡು ಪ್ರಾಥಮಿಕ ತಯಾರಿಗಳನ್ನು ನಡೆಸಿಕೊಳ್ಳಲಾಗುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಆದರೆ ಚಿತ್ರದ ಹೆಸರೇನು ಇರಬಹುದು ಎಂಬ ಅಭಿಮಾನಿಗಳ ಕುತೂಹಲಕ್ಕೆ ಕ್ರಿಸ್ ಮಸ್ ದಿನ ತೆರೆ ಬೀಳಲಿದೆ.ಸದ್ಯದ ಮಾಹಿತಿ ಪ್ರಕಾರ ದರ್ಶನ್ “ಚೌಕ” ಚಿತ್ರದಲ್ಲಿ ಮಾಡಿರುವ ಪಾತ್ರವಾದ “ರಾಬರ್ಟ್” ಹೆಸರನ್ನೇ ಶೀರ್ಷಿಕೆ ಆಗಿ ಇಡಲಾಗಿದೆ ಎಂಬ ಗಾಳಿ ಮಾತೂ ಕೇಳಿಬರುತ್ತಿದೆ.

ಒಟ್ಟಿನಲ್ಲಿ ಇನ್ನು ಕೆಲವೇ ದಿನಗಳಲ್ಲಿ ಶೀರ್ಷಿಕೆ ಏನೆಂಬುದು ಘೋಷಣೆ ಆಗಲಿದೆ. ಒಟ್ಟಿನಲ್ಲಿ ದರ್ಶನ್ ಅಭಿಮಾನಿಗಳಿಗೆ ಈ ಬಾರಿಯ ಕ್ರಿಸ್ ಮಸ್ ತುಂಬಾ ವಿಶೇಷವಾಗಿರೋದಂತೂ ಸುಳ್ಳಲ್ಲ.
ಫಿಲ್ಮ್ ಬ್ಯೂರೋ ರಕ್ಷಿತಾ ಆಳ್ವ