ಬಂಟ್ವಾಳ: ರಸ್ತೆ ದಾಟುವ ವೇಳೆ ಖಾಸಗಿ ಬಸ್ಸಿನಡಿಗೆ ಬಿದ್ದು ಮಹಿಳೆಯೋರ್ವಳು ಮೃತಪಟ್ಟ ಘಟನೆ ಗುಡ್ಡೆಯಂಗಡಿ ಎಂಬಲ್ಲಿ ನಡೆದಿದೆ.
ಮೆಲ್ಕಾರ್ ಸಮೀಪದ ಬೋಗೋಡಿ ನಿವಾಸಿ ಅತಾವುಲ್ಲಾ ಅವರ ಪತ್ನಿ ರುಕ್ಸಾನಾ (26) ಮ್ರತಪಟ್ಟ ಮಹಿಳೆ. ಅಂಗಡಿಯಿಂದ ಸಾಮಾಗ್ರಿಗಳನ್ನು ತೆಗೆದುಕೊಂಡು ಮನೆಗೆ ಹಿಂತಿರುಗಿ ರಸ್ತೆ ದಾಟುವ ವೇಳೆ ಖಾಸಗಿ ಬಸ್ಸಿನಡಿಗೆ ಬಿದ್ದು ಸ್ಥಳದಲ್ಲಿ ಯೇ ಮೃತಪಟ್ಟಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ರಸ್ತೆಯ ಇನ್ನೊಂದು ಬದಿಯಲ್ಲಿ ಗಂಡ ಮತ್ತು ಮಗು ನಿಂತುಕೊಂಡು ನೋಡುತ್ತಿದ್ದಂತೆ ಈ ಅಪಘಾತ ನಡೆದಿದ್ದು ಅವರಿನ್ನು ಶಾಕ್ ನಿಂದ ಹೊರಬಂದಿಲ್ಲ ಎಂದು ಸಂಬಂಧಿಕರು ತಿಳಿಸಿದ್ದಾರೆ.
ಸ್ಥಳಕ್ಕೆ ಮೆಲ್ಕಾರ್ ಟ್ರಾಪಿಕ್ ಎಸ್ ಐ.ಮಂಜುಳಾ ಮತ್ತು ಸಿಬ್ಬಂದಿಗಳು ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಗುಡ್ಡೆಯಂಗಡಿ ಪ್ರದೇಶದ ಸಾಕಷ್ಟು ಮನೆಗಳಿದ್ದು ಇಲ್ಲಿ ವೇಗ ನಿಯಂತ್ರಣಕ್ಕೆ ಹಮ್ಸ್ ಹಾಕಬೇಕು.
ಅತೀ ವೇಗದ ಚಾಲನೆ ಯಿಂದ ಈ ಭಾಗದಲ್ಲಿ ಸಾರ್ವಜನಿಕ ರು ರಸ್ತೆ ದಾಟಲು ಕಷ್ಟವಾಗುತ್ತಿದ್ದು ಕೂಡಲೇ ಸಂಬಂಧಿಸಿದ ಇಂಜಿನಿಯರ್ ಇಲ್ಲಿ ಹಮ್ಸ್ ಹಾಕಬೇಕು ಎಂದು ಪುರಸಭಾ ಸದಸ್ಯ ಸಿದ್ದೀಕ್ ಗುಡ್ಡೆಯಂಗಡಿ ಒತ್ತಾಯಿಸಿದ್ದಾರೆ.