ಬೆಂಗಳೂರು: ಯಶ್ ಈಗ ತಂದೆಯಾಗಿರೋ ಖುಷಿಯಲ್ಲಿದ್ದಾರೆ. ಹೌದು. ಇವರಿಬ್ಬರು ಸ್ಯಾಂಡಲ್ ವುಡ್‌ನ ದಿ ಮೋಸ್ಟ್ ಕ್ಯೂಟೆಸ್ಟ್ ಪೇರ್. ಈಗ ಯಶ್ ರಾಧಿಕ ಇಬ್ರು ತಮ್ಮ ಬದುಕಿನ ಇನ್ನೊಂದು ಘಟ್ಟದ ಸಂತಸದಲ್ಲಿದ್ದಾರೆ.
ಇನ್ನೂ ಇತ್ತೀಚೆಗೆ ಯಶ್ ತನ್ನ ಟ್ವಿಟ್ಟರ್ ಪೇಜ್‌ನಲ್ಲಿ ಮಗಳು ತನ್ನ ಬೆರಳನ್ನು ಹಿಡಿದಿರೋ ಫೋಟೊ ಅಪ್ಲೋಟ್ ಮಾಡಿ ತಂದೆಯಾದ ಖುಷಿಯನ್ನ ಅಭಿಮಾನಿಗಳಿಗೆ ಹೇಳಿದ್ದಾರೆ.
ಪುಟ್ಟದಾದ ಕೈ, ನನ್ನ ಬೆರಳನ್ನ ಹಿಡಿದು ತಂದೆ ಸ್ಥಾನವನ್ನು ನೆನಪಿಸುತ್ತಿದೆ ಅಂತ ಹೇಳೋದರ ಮೂಲಕ ತನ್ನ ಮಗಳ ಮೇಲಿನ ಪ್ರೀತಿಯನ್ನ ಟ್ವೀಟ್ ಮಾಡೋ ಮೂಲಕ ಹಂಚಿದ್ದಾರೆ.