Monday, January 20, 2025
ಸುದ್ದಿ

ಕೆಮ್ಮಿಂಜೆ ಮಹಾವಿಷ್ಣು ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವ – ಕಹಳೆ ನ್ಯೂಸ್

ಪುತ್ತೂರು: ನಾಡಿನಾದ್ಯಂತ ಷಷ್ಠಿ ಬಂತೆದರೆ ಸಂಭ್ರಮ ಸಡಗರ. ಅದರಲ್ಲೂ ಷಣ್ಮಖ ದೇವಸ್ಥಾನದಲ್ಲಿ ವಿಶೇಷ ಪೂಜೆ ಪುನಸ್ಕಾರಗಳು, ಜಾತ್ರಾ ವೈಭವ. ಶರತ್ ಕಾಲದ ಋತುವಿನಲ್ಲಿ ಬರುವ ಈ ವಿಶೇಷ ಹಬ್ಬವು ಹೊಸ ಕಳೆಯನ್ನು ಉಂಟುಮಾಡುತ್ತದೆ.

ಸುಬ್ರಹ್ಮಣ್ಯನಿಗೆ ಪ್ರಿಯವಾದ ಷಷ್ಠಿಯು ಎಲ್ಲಾ ದೇವಾಲಯದಲ್ಲಿ ಜಾತ್ರೆಯ ಸೊಬಗು ಕಾಣಸಿಗುತ್ತೆ. ಅಂತೆಯೇ ಪುತ್ತೂರು ತಾಲೂಕಿನ ಕೆಮ್ಮಿಂಜೆಯಲ್ಲಿರುವ ಶ್ರೀ ಷಣ್ಮುಖ ಸುಬ್ರಹ್ಮಣ್ಯ ಶ್ರೀ ಮಹಾವಿಷ್ಣು ದೇವಾಸ್ಥಾನದಲ್ಲಿ ಷಷ್ಟಿ ಮಹೋತ್ಸವವು ಡಿಸೆಂಬರ್ 11ರಿಂದ 13 ರತನಕ ನಡೆಯಲಿದೆ. ಮೂರು ದಿನಗಳ ಕಾಲ ನಡೆಯುವ ಈ ಮಹೋತ್ಸವದಲ್ಲಿ ಪಂಚಮಿ ಉತ್ಸವ, ಆಶ್ಲೇಷ ಬಲಿ ನಾಗತಂಬಿಲ ನಡೆಯಲಿದೆ. ಕ್ಷೇತ್ರಕ್ಕೆ 350 ವರ್ಷಗಳ ಹಿಂದಿನ ಇತಿಹಾಸವಿದ್ದು ವರ್ಷಂಪ್ರತಿ ವೈಭವದಿಂದ ಮಹೋತ್ಸವವು ಜರಗಿ ಬರುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕುರಿತು ಮಾತನಾಡಿದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೇಶವ ಪೂಜಾರಿ ,ಜಾತ್ರೋತ್ಸವ ಎಲ್ಲಾ ಕೆಲಸಗಳು ಸುಸೂತ್ರವಾಗಿ ನಡೆಯುತ್ತಿದೆ. 11ನೆ ತಾರೀಕಿನಂದು ಪುತ್ತೂರು ಶ್ರೀ ಮಹಾಲೀಂಗೇಶ್ವರ ದೇವಾಲಯದ ಎದುರು ಗದ್ದೆಯಿಂದ ಮಹಾವಿಷ್ಣು ದೇವರಿಗೆ ಉತ್ಸವದ ಸ್ವರ್ಣ ಕವಚ, ಧೂಮವತಿ ದೈವದ ಬಿಂಬ ಹಾಗೂ ಹಸಿರು ಹೊರೆ ಕಾಣಿಕೆ ಮೆರವಣೆಗೆಯ ಮೂಲಕ ವಿಜೃಂಭಣೆಯಿಂದ ಮೆರವಣೆಗೆ ಮೂಲಕ ಸಾಗಿ ಬರುತ್ತೆ ಎಂದರು.

ಇನ್ನು ಕೆಮ್ಮಿಂಜೆ ದೇವಾಲಯದ ಪ್ರಧಾನ ಅರ್ಚಕ ವಿಷ್ಣು ಕುಂಜತ್ತಾಯ ಮಾತನಾಡಿ ಹಲವು ವರ್ಷಗಳ ಹಿಂದೆ ವರುಷಕ್ಕೆ ಒಂದು ದಿನ ನಾಗತಂಬಲ ನಡೆಯುತ್ತಿತ್ತು ಆದರೆ ಇಂದು ದಿನಂ ಪ್ರತಿ ನಾಗತಂಬಿಲ ನಡೆಯುತ್ತಿದೆ. ಇಲ್ಲಿನ ಜಾತ್ರ ಮಹೋತ್ಸವಕ್ಕೆ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತನು ಮನ ಧನದಿಂದ ಸಹಾಯ ಮಾಡಬೇಕು ಎಂದರು.

ಒಟ್ಟಾಗಿ ಈ ವೈಭವದ ಮಹೋತ್ಸವದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಊರ ಮತ್ತು ಪರವೂರ ಸಾವಿರಾರು ಭಕ್ತರು ಆಗಮಿಸಿಸುವ ನಿರೀಕ್ಷೆಯಿದೆ.
ಕ್ಯಾಮರಾ ಮ್ಯಾನ್ ರಂಜಿತ್ ಜೊತೆ ಶ್ರೀಶಾನ್ ಕಹಳೆ ನ್ಯೂಸ್ ಪುತ್ತೂರು