Recent Posts

Monday, January 20, 2025
ಸುದ್ದಿ

ಕುಕ್ಕೆ ಸುಬ್ರಮಣ್ಯದಲ್ಲಿ ಚಂಪಾ ಷಷ್ಠಿ ಉತ್ಸವದ ಸಂಭ್ರಮ – ಕಹಳೆ ನ್ಯೂಸ್

ಸುಬ್ರಮಣ್ಯ: ಇಂದು ಕಾರ್ತಿಕ ಮಾಸದ, ಕೃಷ್ಣ ಪಕ್ಷ ದ್ವಾದಶಿಯಾಗಿದ್ದು, ಬೆಳಗ್ಗೆ 7.30ರ ಶುಭ ಮುಹೂರ್ಥದಲ್ಲಿ ಕೊಪ್ಪರಿಗೆ ಇಡುವ ಕಾರ್ಯಕ್ರಮ ನಡೆಯಿತು.

ಇನ್ನು ಬರುವ ಶುಕ್ಲ ಪಕ್ಷ ದ ದ್ವಾದಶಿಯವರೆಗೆ ಅದೇ ಕೊಪ್ಪರಿಗೆಯಲ್ಲಿ ಶ್ರೀ ಸುಬ್ರಮಣ್ಯ ದೇವರಿಗೆ ನೈವೇದ್ಯ ತಯಾರು ಮಾಡಿ ಸಮರ್ಪಣೆ ನಡೆಯಲಿದೆ. ಹಾಗು ಅದೇ ಪ್ರಸಾದ ಭಕ್ತರಿಗೆ ನೀಡಲಾಗುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇದರ ಜೊತೆಗೆ ಊರಿನ ಹಾಗೂ ಪರ ಊರಿನ ಭಕ್ತರಿಂದ ಹಾಗೂ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಶ್ರೀ ನಿತ್ಯಾನಂದ ಮುಂಡೋಡಿ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ ಶ್ರೀ ರವೀಂದ್ರ ಸಮ್ಮುಖದಲ್ಲಿ ಶ್ರೀ ದೇವರಿಗೆ ಹಸಿರು ಕಾಣಿಕೆ ಸಮರ್ಪಣೆ ನಡೆಯಿತು. ಇನ್ನು ಹಸಿರು ಕಾಣಿಕೆ ಸಮರ್ಪಣೆ ಮಾಡುವವರಿಗೆ ಅವಕಾಶ ಇರುತ್ತದೆ.

ಚಂಪಾ ಷಷ್ಠಿ ಉತ್ಸವದ ವಿಶೇಷ ಆಕರ್ಷಣೆಯೆಂದರೆ ಏಕಹ ಭಜನೆ. ಈ ಕಾರ್ಯಕ್ರಮವನ್ನು ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಶ್ರೀ ನಿತ್ಯಾನಂದ ಮುಂಡೋಡಿಯವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು ಹಾಗು ಸಿಬ್ಬಂದಿಗಳು ಭಕ್ತರು ಭಾಗವಹಿಸಿದರು.