Saturday, November 23, 2024
ಸುದ್ದಿ

ಮನುಷ್ಯ ತನ್ನ ಜೀವನದಲ್ಲಿ ಒಂದಿಷ್ಟು ಸಮಯವನ್ನು ಸಮಾಜಕ್ಕಾಗಿ ಮೀಸಲಿಡಬೇಕು – ಕಹಳೆ ನ್ಯೂಸ್

ಪುತ್ತೂರು: ಮನುಷ್ಯ ತನ್ನ ಜೀವನದಲ್ಲಿ ಸಮಯದ ಒಂದಿಷ್ಟಾದರೂ ಸಮಾಜಕ್ಕಾಗಿ ಮೀಸಲಿಡಬೇಕು. ಆರೋಗ್ಯವಂತ ಸಮಾಜ ನರ್ಮಾಣದ ಜವಾಬ್ದಾರಿ ಎಲ್ಲರಿಗೂ ಇದೆ ಎಂದು ಪ್ರದಾನ ಹಿರಿಯ ವ್ಯಾವಹಾರಿಕ ನ್ಯಾಯಾದೀಶ ಮತ್ತು ಹೆಚ್ಚುವರಿ ಮುಖ್ಯ ನ್ಯಾಯಿಕ ದಂಡಾಧಿಕಾರಿ ಮಂಜುನಾಥ್ ಹೇಳಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನಣುನ ಸೇವೆಗಳ ಸಮಿತಿ, ಪುತ್ತೂರು ವಕೀಲರ ಸಂಘ, ಶಿಕ್ಷಣ ಸಂಪನ್ಮೂಲ ಕೇಂದ್ರ ಹಾಗೂ ಶ್ರೀ ರಾಮಕೃಷ್ಣ ಪ್ರೌಢ ಶಾಲೆಯ ಸಹಯೋಗದಲ್ಲಿ ಕೊಂಬೆಟ್ಟು ಸುಂದರ ರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಡಿ. 4ರಂದು ನಡೆದ ವಿಶ್ವ ಏಡ್ಸ್ ನಿವಾರಣಾ ದಿನಾಚರಣೆ ಹಾಗೂ ಅಂಗವಿಕಲರ ದಿನಾಚರಣೆಯ ಒಪ್ರಯುಕ್ತ ಕಾನೂನು ಅರಿವು ನೆರವು ಹಾಗೂ ಮಕ್ಕಳ ಹಕ್ಕುಗಳ ಮಾಸೋತ್ಸವವನ್ನು ಅವರು ಉದ್ಘಾಟಿಸಿ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಪೀಡ್ಸ್ ರೋಗವು ಮಾನವ ಕುಲಕ್ಕೆ ಮಾರಕವಾಗುತ್ತಿರುವುದನ್ನು ಮನಗಂಡು 1988 ರಿಂದ ಏಡ್ಸ್ ನಿರ್ಮೂಲನಾ ದಿನವನ್ನು ಜಗತ್ತಿನಾದ್ಯಂತ ಆಚರಿಸಲಾಗುತ್ತಾ ಇದೆ. ಈ ನಿಟ್ಟಿನಲ್ಲಿ ಜಾಗೃತಿ ಆಂದೋಲನಗಳನ್ನು ನಡೆಸಲಾಗ್ತಾ ಇದೆ. ವಿಸೇಷ ಚೇತನರನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಧ್ಯೇಯದೊಂದಿಗೆ ದಿನಾಚರಣೆಯನ್ನು ಆಚರಿಸಲಾಗ್ತಾ ಇದೆ. ಪಿಡುಗುಗಳನ್ನು ದೂರ ಸರಿಸಿ ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವ ಜವಾಬ್ದಾರಿ ಪ್ರತಿಯೊಬ್ಬರಿಗೂ ಇದೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಆರೋಗ್ಯವಂತ ಸದೃಢ ಸಮಾಜದಲ್ಲಿ ಯುವಜನತೆಯ ಪಾತ್ರದ ಕುರಿತು ನ್ಯಾಯವಾದಿ ಮಹೇಶ್ ಕಜೆಯವರು ಮಾತನಾಡಿ 2017 ರ ವರದಿಯಂತೆ ಜಗತ್ತಿನಲ್ಲಿ 88 ಮಿಲಿಯನ್ ಪೀಡ್ಸ್ ಪೀಡಿತರಿದ್ದಾರೆ. 40ದಶ ಲಕ್ಷ ಮಂದಿ ಭಾರತದಲ್ಲಿದ್ದಾರೆ. ಸ್ವೇಚಾಚ್ಚಾರದ ಸಂಸ್ಕೃತಿ ಇದಕ್ಕೆ ಮುಖ್ಯ ಕಾರಣವಾಗಿದೆ. ಇವತ್ತು ವಿಕಲತೆಯನ್ನು ಹೊಂದಿರುವುದು ಸಮಾಜ. ಇಲ್ಲಿ ಸರಿಯಾದ ಅಂಗಾಗಗಳು ಇದ್ದ ಮನುಷ್ಯರು ಸರಿಯಾಗಿದ್ದಾರೆಯೇ? ಎಂಬ ಪ್ರಶ್ನೆ ಕಾಡ್ತಾ ಇದೆ ಎಂದ ಅವರು ವಿಶಿಷ್ಠ ಚೇತನವುಳ್ಳವರಿಗೆ ಸ್ಪಂದಿಬೇಕಾದ ಹೃದಯಗಳ ಕೊರತೆ ಸಮಾಜವನ್ನು ಕಾಡುತ್ತಿದೆ ಎಂದರು.

ಮಕ್ಕಳ ಹಕ್ಕುಗಳ ಕುರಿತು ಜಾಗೃತಿ ಭಿತ್ತಿ ಪತ್ರವನ್ನು ನ್ಯಾಯಾಧೀಶರು ಬಿಡುಗಡೆಗೊಳಿಸಿದ್ರು. ಪುತ್ತೂರು ನಗರ ಪೋಲಿಸ್ ಟಾಣೆಯ ನಿರೀಕ್ಷಕ ಅಜಯ್ ಕುಮಾರ್ ಡಿ. ಎನ್ ಅವರು ಅಪರಾಧ ತಡೆ ಮಾಸಾವರಣೆ ಹಾಗೂ ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪರಿಣಾಮಗಳ ಕುರಿತು ಮಾಹಿತಿ ನೀಡಿದ್ರು. ಶ್ರೀ ರಾಮಕೃಷ್ಣ ಪ್ರೌಢ ಸಾಲೆಯ ಸಂಚಾಲಕ ಎ. ಹೇಮನಾಥ್ ಶೆಟ್ಟಿ ಅಧ್ಯಕ್ಷತೆ ವಹಿಸಿದರು. ಪ್ರದಾನ ವ್ಯಾವಹಾರಿಕ ನ್ಯಾಯಾಧೀಶ ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ಪ್ರಕಾಶ್ ಪಿ.ಎಂ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಆರೋಗ್ಯ ಮತ್ತು ಸ್ಥಾಯಿ ಸಮಿತಿ ಸದಸ್ಯೆ ಅನಿತಾ ಹೇಮನಾಥ್ ಶೆಟ್ಟಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಎ. ಉದಯ್ ಶಂಕರ್ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು.